ಶಿರಸಿ : ಪಶ್ಚಿಮ ಘಟ್ಟ ಸಸ್ಯ ವೈವಿಧ್ಯ, ಹಾಗೂ ಜೀವ ವೈವಿಧ್ಯ ತುಂಬಿದ ಪ್ರದೇಶವಾಗಿದೆ. ಈ ಅತ್ಯಮೂಲ್ಯವಾದ ಸಸ್ಯ ಸಂಪತ್ತು ಸಂರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅರಣ್ಯ ಇಲಾಖೆ ಕಾನೂನು ರೂಪಿಸಿ ತನ್ಮೂಲಕ ಅರಣ್ಯ ರಕ್ಷಣೆಯ ಪಾಲನಾ ನಿರ್ವಹಿಸುತ್ತದೆ. ಇದು ಕೇವಲ ಇಲಾಖೆಯದಷ್ಟೇ ಅಲ್ಲ ಜನರ ಸಹ ಭಾಗಿತ್ವವೂ ಅಗತ್ಯ ಎಂದು ಕೆನರ ಸರ್ಕಲ್ ನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಹೇಳಿದರು.
ಅವರು ಯೂತ್ ಫಾರ್ ಸೇವಾ ಮತ್ತು ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಎಸಳೆಯ ಶ್ರೀ ಮಾರಿಕಾಂಭಾ ವನದಲ್ಲಿ ಭೂಗರ್ಭ ಶಾಸ್ತ್ರಜ್ಞ ಜಿ.ವಿ ಹೆಗಡೆ ಮತ್ತು ಯುಥ್ ಫಾರ್ ಸೇವಾ ಸಲಹಾ ಸಮಿತಿ ಸದಸ್ಯ ಶ್ರೀಮತಿ ಕೋಮಲಾ ಭಟ್ಟ್ ದಂಪತಿಗಳ ಪ್ರಾಯೋಜಕತ್ವದಲ್ಲಿ ನಿರ್ಮಾಣಗೊಂಡ ನಕ್ಷತ್ರ ವನಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಜಾಗತಿಕ ತಾಪಮಾನ, ಪ್ರಕೃತಿ ವಿಕೋಪದ ವಿನಾಶ ತಡೆಯಲು ಸಮೃದ್ಧ ಅರಣ್ಯವೊಂದೆ ಪರಿಹಾರ. ಅರಣ್ಯ ನಾಶ ಮಾಡದೇ ಎಚ್ಚೆತ್ತುಕೊಳ್ಳದಿದ್ದರೆ ಮನುಕುಲ ಮುಂದಿನ ದಿನಗಳಲ್ಲಿ ಬಾರಿ ಅನಾಹುತ ಎದುರಿಸ ಬೇಕಾಗುತ್ತದೆ. ಈ ದಿಸೆಯಲ್ಲಿ ನಕ್ಷತ್ರ ವನ ನಿರ್ಮಾಣ ಮಾಡಿ ಅನೇಕ ಔಷಧಸಸ್ಯಗಳನ್ನು ಸಂರಕ್ಷಣೆ ಮಾಡುತ್ತಿರುವ ಜಿ.ವಿ ಹೆಗಡೆ ಮತ್ತು ಕೋಮಲಾ ಭಟ್ಟ್ ದಂಪತಿಗಳ ಕಾರ್ಯ ಶ್ಲಾಘನಿಯ ಎಂದರು.
ಕೋಮಲಾ ಭಟ್ಟ್ ಅವರು ತಾವು ವನ ನಿರ್ಮಾಣ ಮಾಡುತ್ತಿರುವ ಉದ್ಧೇಶ ತಿಳಿಸದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ , ವಲಯಾರಣ್ಯಧಿಕಾರಿ ಶಿವಾನಂದ ನಿಂಗಾಣಿ, ಭೂಗರ್ಭ ಶಾಸ್ತ್ರಜ್ಞ ಜಿ.ವಿ ಹೆಗಡೆ ಮತ್ತು ಯುಥ್ ಫಾರ್ ಸೇವಾ ಸಲಹಾ ಸಮಿತಿ ಸದಸ್ಯ ಶ್ರೀಮತಿ ಕೋಮಲಾ ಭಟ್ಟ್ ನಿಲೇಕಣೀ ಕಾಲೇಜ್ ಉಪನ್ಯಾಸಕ ಕಾರ್ತಿಕ ಹೆಗಡೆ, ಪ್ಯಾರಾ ಮೆಡಿಕಲ್ ಕಾಲೇಜ್ ಉಪನ್ಯಾಸಕ ಆಕರ್ಷನ್, ನಾಗರತ್ನ ಅರಣ್ಯ ಇಲಾಖೆಯ ಸಿಬ್ಬಂದಿಗಳು, ವಾಲೆಂಟಿಯರ್ ಸನ್ನಿಧಿ, ಪವಿತ್ರ ಮೂಡಶಾಲಿ ಉಪಸ್ಥಿತರಿದ್ದರು.
ಯೂತ್ ಫಾರ್ ಸೇವಾ ಪರಿಸರ ಸಂಯೋಜಕ ಉಮಾಪತಿ ಭಟ್ಟ್ ಸ್ವಾಗತಿಸಿದರು ಶಿರಸಿ ಜಿಲ್ಲಾ ಸಂಯೋಜಕ ವಿಜೇತ ನಾಯ್ಕ ವಂದಿಸಿದರು.