ಶಿರಸಿ: ಇಲ್ಲಿನ ದಿ ಆಗ್ರಿಕಲ್ಚರಲ್ ಸರ್ವೀಸ್ ಎಂಡ್ ಡೆವೆಲಪ್‌ಮೆಂಟ್ ಕೋ-ಆಪ್ ಸೊಸೈಟಿಯ 2023-24 ರಿಂದ ಮುಂದಿನ 5 ವರ್ಷಗಳ ಅವಧಿಗೆ ನಿಗದಿಯಾಗಿದ್ದ ಆಡಳಿತ ಮಂಡಲಿ ಚುನಾವಣೆಯಲ್ಲಿ 15 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಿಟರ್ನಿಂಗ್ ಅಧಿಕಾರಿ, ಸಹಕಾರ ಸಂಘ ಸಹಾಯಕ ನಿಬಂಧಕ ಟಿ.ವಿ. ಶ್ರೀನಿವಾಸ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅವಿರೋಧವಾಗಿ ಆಯ್ಕೆಗೊಂಡವರನ್ನು ಅಧಿಕೃತ ಘೋಷಣೆ ಮಾಡಿದ್ದು, ‘ಅ’ ವರ್ಗ ಸಹಕಾರ ಸಂಘದಿಂದ 6 ಜನ ಸದಸ್ಯರ ಪೈಕಿ ತಟ್ಟಿಸರ ಸೊಸೈಟಿಯಿಂದ ದಿನೇಶ ಗಜಾನನ ಹೆಗಡೆ ದುಗ್ಗುಮನೆ, ಬಿಸ್ಲಕೊಪ್ಪ ಸೊಸೈಟಿಯಿಂದ ವೆಂಕಟ್ರಮಣ ಮಂಜುನಾಥ ಹೆಗಡೆ ಬಿಸಲಕೊಪ್ಪ, ಯಡಳ್ಳಿ ಸೊಸೈಟಿಯಿಂದ ಗಣಪತಿ ರಾಮಚಂದ್ರ ಹೆಗಡೆ ಬೆಳ್ಳೆಕೇರಿ, ಕಂಚಿಕೈ ಸೊಸೈಟಿಯಿಂದ ಗಣಪತಿ ಸುಬ್ರಾಯ ಹೆಗಡೆ ನೀರ್ಗಾನ್, ವಾನಳ್ಳಿ ಸೊಸೈಟಿಯಿಂದ ಮೋಹನ ವೆಂಕಟ್ರಮಣ ಭಟ್ಟ ಗಜನಮನೆ, ಹುಳಗೋಳ ಸೊಸೈಟಿಯಿಂದ ರಘುಪತಿ ಶಿವರಾಮ ಭಟ್ಟ ಭೈರುಂಬೆ ಆಯ್ಕೆಯಾಗಿದ್ದಾರೆ.
‘ಬ’ ವರ್ಗದಿಂದ 9 ಜನ ಸದಸ್ಯರ ಪೈಕಿ ಸಾಮಾನ್ಯ ವರ್ಗದಿಂದ ಭಾಸ್ಕರ ಗಣಪತಿ ಹೆಗಡೆ ಕಾಗೇರಿ, ಶ್ರೀಪಾದ ರಾಮಕೃಷ್ಣ ಹೆಗಡೆ ಕಡವೆ, ನರಸಿಂಹ ಗೋಪಾಲ ಭಟ್ಟ ಬಾವಿಕೈ, ರಾಜೀವ ಕೃಷ್ಣ ಹೆಗಡೆ ಅಬ್ರಿ ಹೀಪನಳ್ಳಿ, ಪ್ರಶಾಂತ ಪದ್ಮನಾಭ ಭಟ್ಟ ಡೊಂಬೇಸರ, ಮಹಿಳಾ ಸದಸ್ಯರಾಗಿ ವಾಸಂತಿ ಗಣಪತಿ ಹೆಗಡೆ ಶಿರಸಿ, ಶ್ರೀಮತಿ ಸೌಭಾಗ್ಯ ನಾರಾಯಣ ಹೆಗಡೆ ಗುರುವಳ್ಳಿ ಕೆರೆಗದ್ದೆ, ಪ್ರವರ್ಗ ‘ಎ’ ಪುರುಷೋತ್ತಮ ಚಿದಂಬರ ನಾಯ್ಕ ಕಂಡ್ರಾಜಿ, ಹಾಗೂ ಪ್ರವರ್ಗ ‘ಬಿ’ ದುಶ್ಯಂತರಾಜ ಚನ್ನಬಸಪ್ಪ ಕೊಲ್ಲೂರಿ ಇಸಳೂರು ಇಸಳೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.