• Slide
    Slide
    Slide
    previous arrow
    next arrow
  • ಕಾರವಾರದ ಉದ್ಯೋಗ ಮೇಳಕ್ಕೆ ಅಭೂತಪೂರ್ವ ಸ್ಪಂದನೆ: 1,260 ಮಂದಿಗೆ ಉದ್ಯೋಗದ ಖಾತ್ರಿ

    300x250 AD

    ಕಾರವಾರ: ನಗರದ ದಿವೇಕರ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು, 1,260 ಮಂದಿಗೆ ಉದ್ಯೋಗದ ಖಾತ್ರಿ ದೊರೆತಿದೆ. ಕೆನರಾ ವೆಲ್‌ಫೇರ್ ಟ್ರಸ್ಟ್ ಹಾಗೂ ಮೆರಿಟ್ಯುಡ್ ಸಂಸ್ಥೆಯ ಸಹಯೋಗದೊಂದಿಗೆ, ಸುಪ್ರೀಂ ಕೋರ್ಟ್ ಹಿರಿಯ ವಕೀಲ ದೇವದತ್ ಕಾಮತ್ ಪ್ರಾಯೋಜಕತ್ವದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ 2850 ಮಂದಿ ಭಾಗವಹಿಸಿದ್ದರು. ಮ್ಯಾಜಿಕ್ ಬಸ್, ಮಹೀಂದ್ರಾ, ಟಾಟಾ, ಭಾರತ್ ಆಟೋ ಕಾರ್ಸ್, ಮುತ್ತೂಟ್ ಫೈನಾನ್ಸ್, ಐಸಿಐಸಿಐ, ಸೇಂಟ್ ಮಿಲಾಗ್ರಿಸ್, ಎಂಪಿಎಲ್ ಹೀಗೆ 31 ಉದ್ಯೋಗದಾತ ಕಂಪನಿಗಳು ಅಭ್ಯರ್ಥಿಗಳನ್ನ ಸಂದರ್ಶನ ನಡೆಸಿದವು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸತೀಶ ಸೈಲ್, ಕೆನರಾ ವೆಲ್ಫೇರ್ ಟ್ರಸ್ಟ್ ಹೆಮ್ಮರವಾಗಿ ಬೆಳೆದಿದೆ. ಎಷ್ಟೋ ಜನ ಸೇವೆ ಸಲ್ಲಿಸಿದ್ದಾರೆ, ಇಲ್ಲಿ ಎಷ್ಟೋ ಜನರಿಗೆ ನೌಕರಿ ಸಿಕ್ಕಿದೆ. ಸಂಸ್ಥೆಯ ಶಾಲಾ- ಕಾಲೇಜುಗಳಿಂದ ಮಕ್ಕಳು ವಿದ್ಯಾವಂತರಾಗಿ ಸಂಸ್ಥೆಗೆ ಹೆಸರು ತಂದಿದ್ದಾರೆ. ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು. ಎರಡನೇ ಬಾರಿಗೆ ಜನತೆ ಸೇವೆಗೆ ನನಗೆ ಅವಕಾಶ ನೀಡಿದ್ದಾರೆ. ಈ ಭಾಗದ ಸರ್ವಾಂಗೀಣ ಬೆಳವಣಿಗೆಗೆ ಕೆಲಸ ಮಾಡುತ್ತೇನೆ. ಕೈಗಾರಿಕೆಗಳನ್ನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ವಿಮಾನ ನಿಲ್ದಾಣವನ್ನೂ ಶೀಘ್ರ ಮಾಡುತ್ತೇವೆ ಎಂದ ಅವರು, ಕೆನರಾ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ.ಕಾಮತ್ ಅವರ ಮನವಿಯ ಮೇರೆಗೆ ಕಾಲೇಜಿನ ಬಳಿ ಬಸ್ ಶೆಡ್ ನಿರ್ಮಿಸಿಕೊಡುವ ಹಾಗೂ 10 ಕಂಪ್ಯೂಟರ್‌ಗಳನ್ನು ನೀಡುವ ಬಗ್ಗೆ ವಾಗ್ದಾನ ನೀಡಿದರು.

    300x250 AD

    ಉದ್ಯೋಗ ಮೇಳದ ಪ್ರಾಯೋಜಕರಾದ ಸುಪ್ರೀಂ ಕೋರ್ಟ್ ಹಿರಿಯ ವಕೀಲ ದೇವದತ್ತ ಎಸ್.ಕಾಮತ್ ಮಾತನಾಡಿ, ಅಭ್ಯರ್ಥಿಗಳಲ್ಲಿ ಪದವಿಯ ಜೋತೆಗೆ ಉದ್ಯೋಗ ಪಡೆದುಕೊಳ್ಳುವ ಕೌಶಲ್ಯ ಹಾಗೂ ಚಾಣಾಕ್ಷತೆ ಇರಬೇಕು. ಪ್ರತಿಭೆಗಳನ್ನ ಹಾಗೂ ಕಂಪೆನಿಗಳನ್ನ ಒಂದು ವೇದಿಕೆಗೆ ತರುವುದು ಇಂದಿನ ಅಗತ್ಯತೆಯಾಗಿದೆ. ಕೇವಲ ವಿದ್ಯಾರ್ಹತೆಯೇ ಅಂತಿಮವಲ್ಲ. ಪ್ರತಿಭೆಯೂ ಇರಬೇಕು. ಸಮಯವನ್ನ ಕೌಶಲ್ಯಾಭಿವೃದ್ಧಿಗಾಗಿ ಅಥವಾ ದೇಹ ದಂಡಿಸಿ ಆರೋಗ್ಯವಂತವರಾಗಿರಲು ಸದ್ಬಳಕೆ ಮಾಡಿಕೊಳ್ಳಿ. ಜಗತ್ತು ಪ್ರತಿದಿನ ಬದಲಾಗುತ್ತಿರುತ್ತದೆ. ಧನಾತ್ಮಕತೆಯನ್ನ ಬೆಳೆಸಿಕೊಂಡರೆ ಬದಲಾವಣೆ ಸಾಧ್ಯ. ನಮ್ಮ ಸುತ್ತಲಿನ ಸಾಕಷ್ಟು ನೆಗೆವಿಟಿಗಳಿಗೆ ಕಿವಿಗೊಡದಿರಿ. ನಾವೇನನ್ನು ಪಡೆದಿದ್ದೀವೋ ಅದಕ್ಕೆ ನಾವು ಕೃತಜ್ಞರಾಗಿರಬೇಕು. ಶಾಲಾ- ಕಾಲೇಜುಗಳಲ್ಲಿ ಇಂಥ ಪಾಠಗಳನ್ನ ಕಲಿಸುವುದಿಲ್ಲ. ಇವುಗಳು ನಮ್ಮಿಂದ, ನಮ್ಮ ಸುತ್ತಮುತ್ತಲಿನವರಿಂದಲೇ ಕಲಿಯಬೇಕು ಎಂದರು.
    ಅಧ್ಯಕ್ಷತೆ ವಹಿಸಿದ್ದ ಕೆನರಾ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಎಸ್.ಪಿ.ಕಾಮತ್ ಮಾತನಾಡಿ, ಜನರು ಕ್ಯಾಂಪಸ್ ಸೆಲೆಕ್ಷನ್‌ಗಳ ಬಗ್ಗೆ ಮಾತಾಡ್ತಾರೆ. ಒಂದು ಶಿಕ್ಷಣ ಸಂಸ್ಥೆ ಉತ್ಪಾದಿಸುವ ಬೆಸ್ಟ್ ಟ್ಯಾಲೆಂಟ್‌ಗಳನ್ನ ದೊಡ್ಡ ಕಂಪನಿ ಆಯ್ಕೆ ಮಾಡಿ ಒಯ್ಯುವುದಕ್ಕೆ ಕ್ಯಾಂಪಸ್ ಸೆಲೆಕ್ಷನ್ ಎನ್ನುತ್ತೇವೆ. 100ರಲ್ಲಿ 99 ವಿದ್ಯಾರ್ಥಿಗಳು ಬೆಸ್ಟ್ ಆಗಲಾಗದಿದ್ದರೂ ಪ್ರತಿಭಾನ್ವಿತರಂತಲ್ಲವೆAದು ನಾವು ನಿರ್ಧರಿಸುವುದು ಸರಿಯಲ್ಲ. ನಾವು ಬೆಸ್ಟ್ ಇರುವವರನ್ನು ಆಯ್ದುಕೊಳ್ಳಲಲ್ಲ, ಅರ್ಹರನ್ನ ಆಯ್ಕೆ ಮಾಡಲು ಈ ಉದ್ಯೋಗ ಮೇಳ ಆಯೋಜಿಸಿದ್ದೇವೆ. ಯುವಜನರಲ್ಲಿರುವ ಎನರ್ಜಿ ಬೇರೆ ದಾರಿಗಳಲ್ಲಿ ಹಾಳಾಗಬಾರದು ಎಂದರು.
    ಇದೇ ವೇಳೆ ಶಾಸಕ ಸತೀಶ್ ಸೈಲ್ ಅವರಿಗೆ ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ.ಕೇಶವ ಕೆ.ಜಿ ಸ್ವಾಗತಿಸಿದರು. ವೇದಿಕೆಯಲ್ಲಿ ಮೆರಿಟ್ಟುಡ್ ಸ್ಕಿಲ್ ಡೆವಲಪ್‌ಮೆಂಟ್ ಪ್ರೈವೆಟ್ ಲಿಮಿಟೆಡ್‌ನ ಫಯಾಜ್ ಅಹಮದ್, ಉದ್ಯೋಗ ಮೇಳದ ಪ್ರಾಯೋಜಕ ನಾಗರಾಜ ಮಡಿವಾಳ ಇದ್ದರು. ಈ ಸಂದರ್ಭದಲ್ಲಿ ಕೆನರಾ ವೆಲ್‌ಫೇರ್ ಟ್ರಸ್ಟ್ನ ಟ್ರಸ್ಟಿಗಳಾದ ಡಾ.ವಿ.ಎನ್ ನಾಯಕ, ಮುರುಳಿಧರ ಪ್ರಭು, ಡಾ.ಕೃಷ್ಣ ಪ್ರಭು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಹಳೆಯ ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು. ಪ್ರಾರ್ಥನೆ ಗೀತೆಯನ್ನು ಸಾಯಿಶ್ರೀ ಶೇಟ್ ಹಾಡಿದರು. ಉಪನ್ಯಾಸಕಿ ಸ್ನೇಹಲ್ ರೇವಣಕರ್ ಹಾಗೂ ಅನೀತಾ ತಿಳವೆ ಅತಿಥಿಗಳನ್ನು ಪರಿಚಯಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಲಿತಾ ಶೆಟ್ಟಿ ವಂದಿಸಿದರು. ಉಪನ್ಯಾಸಕ ರಾಜೇಶ ಮರಾಠಿ ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top