Slide
Slide
Slide
previous arrow
next arrow

ತಾಲೂಕಾ ಮಟ್ಟದ ಕ್ರೀಡಾಕೂಟ: ಹುಲೇಕಲ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ: 2023-24 ನೇ ಶೈಕ್ಷಣಿಕ ವರ್ಷದ ತಾಲೂಕಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟವು ಮಾರಿಕಾಂಬಾ ಕ್ರೀಡಾಂಗಣದಲ್ಲಿ ನೆರವೇರಿತು. ಈ ಕ್ರೀಡಾಕೂಟದಲ್ಲಿ ಸೀತೆ ಕೆ. ಗೌಡ 800 ಮೀ. ಓಟ, ಪ್ರಥಮ, 1500 ಮೀ. ಓಟ ಪ್ರಥಮ, ಹಾಗೂ 3000 ಮೀ. ಪ್ರಥಮ ಸ್ಥಾನವನ್ನು ಗಳಿಸುವುದರೊಂದಿಗೆ, ಬಾಲಕೀಯರ ವೈಯಕ್ತಿಕ ವೀರಾಗ್ರಣಿ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಚೇತನ್ ಭಟ್‌ 200 ಮೀ ಓಟ- ಪ್ರಥಮ, 400ಮೀ ಹರ್ಡ್‌ಲ್ಸ್ ಪ್ರಥಮ, 100 ಮೀ. ಓಟ ತೃತೀಯ, ಅಫಾನ್ ಸಾಬ್, ಗುಡ್ಡಗಾಡು ಓಟ ಪ್ರಥಮ, ಸುದರ್ಶನ ನಾಯ್ಕ ತ್ರಿವಿಧ ಜಗಿತ ದ್ವಿತೀಯ, ಆದಿತ್ಯ ನಾಯ್ಕ ತ್ರಿವಿಧ ಜಿಗಿತ ತೃತೀಯ ಹಾಗೂ 4*400 ಮೀ. ರಿಲೆಯಲ್ಲಿ, ಚೇತನ್ ಭಟ್, ಪ್ರದೀಪ ಪಟಗಾರ, ಆದಿತ್ಯ ನಾಯ್ಕ, ಮಂಜುನಾಥ ಗೌಡ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಗುಂಪು ಆಟದಲ್ಲಿ ಬಾಲಕರ ಹ್ಯಾಂಡ್‌ಬಾಲ್ ತಂಡವು ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಗೌರವಾಧ್ಯಕ್ಷ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಕಾರ್ಯಾಧ್ಯಕ್ಷರು ಹಾಗೂ ಆಡಳಿತ ವರ್ಗ, ಪ್ರಾಚಾರ್ಯರು, ಎಲ್ಲಾ ಉಪನ್ಯಾಸಕವೃಂದ ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿ, ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top