ದಾಂಡೇಲಿ: ನಗರದ ಬಂಗೂರನಗರ ಜ್ಯೂನಿಯರ್ ಕಾಲೇಜಿನಲ್ಲಿ ಗಣಿತ ಉಪನ್ಯಾಸಕಿಯಾಗಿ 35 ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದ ಉಪನ್ಯಾಸಕಿ ಪ್ರತಿಭಾ ದೇಶಪಾಂಡೆಯವರನ್ನು ದಂಪತಿ ಸಮೇತರಾಗಿ ಬಂಗೂರನಗರ ಪದವಿ ಮಹಾವಿದ್ಯಾಲಯದ ವತಿಯಿಂದ ಕಾಲೇಜಿನ ಪ್ರಾಚಾರ್ಯರಾದ ಡಾ.ಬಿ.ಎಲ್.ಗುಂಡೂರು, ಉಪ ಪ್ರಾಚಾರ್ಯರಾದ ಎಸ್.ಎಸ್.ಹಿರೇಮಠ ಮತ್ತು ಗ್ರಂಥಪಾಲಕರಾದ ಎಸ್.ಕೆ.ಬಾಗೇವಾಡಿ ಅವರು ಗೌರವಪೂರ್ವಕವಾಗಿ ಸನ್ಮಾನಿಸಿದರು.