ಸಿದ್ದಾಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉತ್ತರ ಕನ್ನಡ, ತಾಲೂಕು ಆಡಳಿತ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಸಿದ್ದಾಪುರ, ತಾಲೂಕಿನ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ತಹಶೀಲ್ದಾರ್ ಕಚೇರಿಯಲ್ಲಿ ನಡೆಸಲಾಯಿತು.
ಮೊದಲಿಗೆ ಅರುಣ್ ಕುಮಾರ್ ಸಭೆಗೆ ಆಗಮಿಸಿದ್ದ ತಹಶೀಲ್ದಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸ್ವಾಗತಿಸಿದರು. ನಂತರ ತಾಲೂಕು ಆರೋಗ್ಯಾಧಿಕಾರಿ ಡ್.ಲಕ್ಷೀಕಾಂತ್ ಎನ್.ನಾಯ್ಕ ಅವರು ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಕುರಿತು ಮಾಹಿತಿ ನೀಡುತ್ತ ದೇಶದಲ್ಲಿ 2014 ರಿಂದ ಇಂದ್ರಧನುಷ್ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಹಾಗೆ ಇದರ ಉದ್ದೇಶ ಜನನವಾಗುವ ಎಲ್ಲಾ ಮಕ್ಕಳಿಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು, ಹಾಗೂ ಮಾರಕ ರೋಗಗಳ ತಡೆಯಲು ಪ್ರಸ್ತುತ 12 ರೋಗಗಳ ವಿರುದ್ಧ ಲಸಿಕೆಯನ್ನು ನೀಡುತ್ತಿರುವ ಕುರಿತು ಮಾಹಿತಿ ನೀಡಿದರು.
ಈ ಇಂದ್ರಧನುಷ್ ಅಭಿಯಾನವು ಸಿದ್ದಾಪುರ ತಾಲೂಕಿನಲ್ಲಿ ಆ.7ರಿಂದ 12ರವರೆಗೆ ನಡೆಯಲಿದೆ. ಈ ಅಭಿಯಾನದಲ್ಲಿ, 29 ಲಸಿಕಾ ಕೇಂದ್ರಗಳಿದ್ದು ,78 ಮಕ್ಕಳು, 30 ಗರ್ಭಿಣಿಯರಿಗೆ ಲಸಿಕೆಯನ್ನು ನೀಡುವ ಗುರಿ ಹೊಂದಲಾಗಿದೆ. ಲಸಿಕಾ ಕೇಂದ್ರಗಳ ಮಾಹಿತಿ ಮತ್ತು ಈ ಅಭಿಯಾನ ನಡೆಸಲು ಪೂರ್ವ ಸಿದ್ಧತೆ ಬಗ್ಗೆ ಮಾಹಿತಿ ನೀಡಿ ಎಲ್ಲಾ ಇಲಾಖೆಗಳ ಸಹಕಾರ ಕೋರಿದರು.
ನಂತರ ತಹಶೀಲ್ದಾರ್ ಆದ ಎಂ.ಆರ್.ಕುಲಕರ್ಣಿ ಕಾರ್ಯಕ್ರಮದ ಕುರಿತು ಮಾತನಾಡಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನವು ಮಕ್ಕಳು ಮತ್ತು ಗರ್ಭಿಣಿಯರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸಲು ಹಾಗೂ ರೋಗಗಳು ಹರಡದಂತೆ ಇರಲು ಹಾಕಿಸುವಂತಹದು ಎಲ್ಲಾ ಮಕ್ಕಳಿಗೂ ಲಸಿಕೆಯನ್ನು ಸೂಕ್ತ ಲಸಿಕಾ ಕೇಂದ್ರಗಳಲ್ಲಿ ನೀಡಿ ಎಂದು ತಿಳಿಸಿದರು.
ನಂತರ ಇಲಾಖೆಯಿಂದ ನೀಡಲಾಗಿರುವ ಬಿತ್ತಿ ಪತ್ರಗಳನ್ನು ತಹಶೀಲ್ದಾರ್ ರವರು ಅನಾವರಣಗೂಳಿಸಲಾಯಿತು. ನಂತರ ಆನಂದ್ ಬಿ.ಪಿ.ಎಂ ರವರು ಸಭೆಗೆ ಆಗಮಿಸಿದ್ದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಲಾಯಿತು. ಈ ಸಭೆಗೆ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಶ್ರೀಮತಿ ಪೂರ್ಣಿಮಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಐ.ಜಿ. ಕೊನ್ನೂರು, ಸಮಾಜ ಕಲ್ಯಾಣ ಅಧಿಕಾರಿ ಬಸವರಾಜ್ ಬಂಡೇರ್ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.