Slide
Slide
Slide
previous arrow
next arrow

ಆ.13ಕ್ಕೆ ‘ಸಹ್ಯಾದ್ರಿ ಸಂಭ್ರಮ’: ಹವ್ಯಕ ಸಮುದಾಯದ ವಿನೂತನ ಕಾರ್ಯಕ್ರಮ

300x250 AD

ಶಿರಸಿ: ನಗರದ ತೋಟಿಗರ ಕಲ್ಯಾಣ ಮಂಟಪದಲ್ಲಿ ಆ.13 o aಭಾನುವಾರದಂದು ಬೆಳಿಗ್ಗೆ 10 ಗಂಟೆಯಿಂದ ಹವ್ಯಕರ ಸಮ್ಮಿಲನದೊಂದಿಗೆ ‘ಸಹ್ಯಾದ್ರಿ ಸಂಭ್ರಮ’ ವಿನೂತನ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ.

ಶ್ರೀಕುಮಾರ್ ಲಾಜಿಸ್ಟಿಕ್ ಪ್ರೈವೇಟ್ ಲಿಮಿಟೆಡ್ ಹೊನ್ನಾವರ ಮತ್ತು ಶಿರಸಿ ಹೋಟೆಲ್ ಅಪೋಲೋ ಇಂಟರ್ನ್ಯಾಷನಲ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಫೇಸ್ಬುಕ್’ನ ಕ್ರಿಯಾಶೀಲ ಗ್ರೂಪ್ ‘ನಾವು ನಮ್ಮಿಷ್ಟ’ ಈ ಕಾರ್ಯಕ್ರಮವನ್ನು ಅರ್ಪಿಸುತ್ತಿದ್ದು, ಕೇವಲ ಹವ್ಯಕ ಸಮುದಾಯದವರಿಗಾಗಿ ನಡೆಯುವ ಕಾರ್ಯಕ್ರಮ ಇದಾಗಿದೆ.

ಹವ್ಯಕರ ಸ್ಥಿತಿಗತಿ, ಇಂದಿನ ಆರ್ಥಿಕ ಪರಿಸ್ಥಿತಿ, ಮುಂದಿನ ಬೆಳವಣಿಗೆ ಕುರಿತು ಸುಧೀರ್ಘವಾಗಿ ಚರ್ಚಿಸುವ ಸಲುವಾಗಿ ಏರ್ಪಡಿಸಲಾದ ಸಮ್ಮೇಳನ ಇದಾಗಿದೆ ಎಂದು ಶ್ರೀ ಕುಮಾರ ಮುಖ್ಯಸ್ಥ ವೆಂಕಟರಮಣ ಹೆಗಡೆ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜದ ಹವ್ಯಕ ಸಾಧಕರಿಗೆ ಗೌರವ ಸಮರ್ಪಣೆ ನಡೆಯಲಿದ್ದು, ಸೀತಾರಾಮ ಹೆಗಡೆ ಹಾಗೂ ವೇದಾ ಹೆಗಡೆ ನೀರ್ನಳ್ಳಿ, ಶ್ರೀಮತಿ ಮಮತಾ ಸತೀಶ, ವಿ.ಪಿ.ಹೆಗಡೆ ವೈಶಾಲಿ, ಶ್ರೀಪಾದ ರಾಯ್ಸದ್, ಎಸಿಎಫ್ ಲತಾ ಭಟ್ ಇವರಿಗೆ ಗೌರವ ಸಮರ್ಪಣೆ ನಡೆಯಲಿದೆ. ಜೊತೆಗೆ ಹವ್ಯಕ ಸಂಪ್ರದಾಯದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಸಪ್ರಶ್ನೆ ಮುಂತಾದ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿದ್ದು, ಹವ್ಯಕ ಶೈಲಿಯ ವಿಶೇಷ ಭೋಜನವನ್ನು ಆಯೋಜಿಸಲಾಗಿದೆ.

300x250 AD

ಅಂದು ನಡೆಯುವ ಕಾರ್ಯಕ್ರಮದಲ್ಲಿ ಯಲ್ಲಾಪುರ ಸಂಕಲ್ಪ ಸಂಸ್ಥೆಯ ಪ್ರಮೋದ್ ಹೆಗಡೆ ಶಿರಸಿ, ಜೀವಜಲ ಕಾರ್ಯಪಡೆಯ ಶ್ರೀನಿವಾಸ್ ಹೆಬ್ಬಾರ್, ಎಂ.ವಿ. ಜೋಶಿ ಕಾನ್ಮೂಲೆ ಭಾಸ್ಕರ್ ಹೆಗಡೆ ಕಾಗೇರಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಹೊಟೆಲ್ ಅಪೋಲೊ ಇಂಟರ್ನ್ಯಾಷನಲ್’ನ ಶ್ರೀಕಾಂತ ಭಟ್, ನಾವು-ನಮ್ಮಿಷ್ಟದ ಸೂರ್ಯನಾರಾಯಣ ಹೆಗಡೆ ಕಡತೋಕಾ, ಹಳೆಕಾನಗೋಡ ಸಾವಿತ್ರಿ ರಮೇಶ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top