• Slide
  Slide
  Slide
  previous arrow
  next arrow
 • ಬೆಟ್ಟಭೂಮಿಯನ್ನು ರೈತರ ಹಕ್ಕಾಗಿಸುವ ಪ್ರಯತ್ನ ಸಾಗಿದೆ: ಶಾಸಕ ಭೀಮಣ್ಣ

  300x250 AD

  ಶಿರಸಿ: ಬೆಟ್ಟ ಭೂಮಿ ರೈತರ ಹಕ್ಕಾಗುವಂತೆ ಮಾಡಲು ಪ್ರಯತ್ನ ಸಾಗಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
  ನಗರದ ಟಿಎಸ್ ಎಸ್ ಸಂಸ್ಥೆಯಲ್ಲಿ ಮಂಗಳವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೊಪ್ಪಿನ ಬೆಟ್ಟ ಭೂಮಿ ರೈತರ ಆಸ್ತಿ. ಆದರೆ, ಇದು ಬ ವರ್ಗಕ್ಕೆ ಸೇರಿದ್ದು, ಸರ್ಕಾರದ ಆಸ್ತಿ ಆಗಿದೆ. ಬೆಟ್ಟ ಬಳಕೆದಾರರ ಸಭೆ ನಡೆಸಿ ರೈತರಿಗೆ ಬೆಟ್ಟ ಭೂಮಿ ಸಿಗುವಂತೆ ಮಾಡಬೇಕಿದೆ ಎಂದರು.

  ಸೊಪ್ಪಿನ ಬೆಟ್ಟದ ಜಾಗದ ಹಕ್ಕು ರೈತರದ್ದಾಗಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಬೆಟ್ಟದಲ್ಲಿ ಬೆಳೆದ ಉತ್ಪನ್ನಗಳನ್ನು ರೈತರಿಗೆ ಶೇ. 75 ರಷ್ಟು ಹಂಚಿಕೆ ಮಾಡಿದ್ದರು. ಇದರ ಪ್ರಯೋಜನವನ್ನೂ ರೈತರು ಪಡೆದುಕೊಳ್ಳಬೇಕು. ಕೃಷಿ ಅಥವಾ ಉದ್ಯೋಗವನ್ನು ಪ್ರಾಮಾಣಿಕವಾಗಿ ಮಾಡಿದರೆ ಸಮಾಜ ನಮ್ಮ ಬೆಂಬಲಕ್ಕೆ ಬರುತ್ತದೆ. ಅಡಕೆ ಬೆಳೆಗಾರರಿಗೆ ಸಂಕಷ್ಟ ಎದುರಾದಾಗಲೆಲ್ಲ ಟಿಎಸ್ಎಸ್ ಮುಂದೆ ಬಂದಿದೆ. ಇಂದು ಕೋ ಆಪರೇಟಿವ್ ಸೊಸೈಟಿಯ ಅಗತ್ಯತೆ ಸಮಾಜಕ್ಕೆ ಇದೆ ಎಂದರು.

  ಟಿಎಸ್‌ಎಸ್ ವ್ಯವಸ್ಥಾಪಕ ರವೀಶ ಹೆಗಡೆ ಮಾತನಾಡಿ, ಅಡಕೆಗೆ ಸೂಕ್ತ ಮಾರುಕಟ್ಟೆ ಇರದ ದಿನಗಳಲ್ಲಿ ಮತ್ತು ಅವರದೇ ದುಡ್ಡನ್ನು ಪಡೆದುಕೊಳ್ಳಲು ರೈತರು ಹೆಣಗಾಡುತ್ತಿದ್ದ ದಿನಗಳಲ್ಲಿ, ಟಿಎಸ್ಎಸ್ ಸಂಸ್ಥೆ ಕಾರ್ಯಾರಂಭ ಮಾಡಿದೆ. ಸಂಸ್ಥೆಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಆಸ್ಪದ ನೀಡದಂತೆ ನಡೆಸಿದ್ದೇವೆ. ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಸಂಸ್ಥೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದರು.

  300x250 AD

  ಇದೇ ವೇಳೆ 9 ಉತ್ತಮ ಕೃಷಿಕರು, 49 ಉತ್ತಮ ಸದಸ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕಾರಿ ಅಧ್ಯಕ್ಷ ರಾಮಕೃಷ್ಣ ಹೆಗಡೆ, ನಿರ್ದೇಶಕ ಶಶಾಂಕ ಹೆಗಡೆ ಇತರರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top