• Slide
    Slide
    Slide
    previous arrow
    next arrow
  • ಮೈಬಣ್ಣ ಕುರಿತು ಅವಹೇಳನ ಮಾಡಿದ ಆರಗ ಜ್ಞಾನೇಂದ್ರ ಕ್ಷಮೆ ಕೇಳಲಿ: ನಾಗರಾಜ ಮಡಿವಾಳ

    300x250 AD

    ಶಿರಸಿ: ಮಲ್ಲಿಕಾರ್ಜುನ್ ಖರ್ಗೆಯವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ ಅರಗ ಜ್ಞಾನೇಂದ್ರ ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ನಾಗರಾಜ ಮಡಿವಾಳ ಹೇಳಿದ್ದಾರೆ.

    ಖರ್ಗೆಯವರ ಮೈಬಣ್ಣ ಕುರಿತು ಅವಹೇಳನ ಹೇಳಿಕೆ ನೀಡಿದ ಆರಗ ಜ್ಞಾನೇಂದ್ರ ವಿರುದ್ಧ ಅವರು ಧ್ವನಿ ಎತ್ತಿದ್ದು, ಕಸ್ತೂರಿ ರಂಗನ್ ವರದಿ ವಿರೋಧಿಸಿ ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರನ್ನು ವಿರೋಧಿಸುವ ಭರದಲ್ಲಿ ಅವಹೇಳನ ಮಾಡಿದ್ದಾರೆ. ಉತ್ತರ ಕರ್ನಾಟಕದವರಿಗೆ ಮರ, ನೆರಳು ಅಂದರೇ ಏನು ಎಂಬುದೇ ಗೊತ್ತಿಲ್ಲ. ಮರಗಳೇ ಇಲ್ಲದೇ ಅಲ್ಲಿನವರು ಹೇಗೆ ಸುಟ್ಟು ಕರಕಲಾಗಿದ್ದಾರೆ ನೋಡಿ. ನಮ್ಮ ಖರ್ಗೆ ಅವರನ್ನು ನೋಡಿದರೆ ಗೊತ್ತಾಗಲ್ವಾ ಎಂದು ಖರ್ಗೆ ಅವರನ್ನು ಅವಮಾನಿಸಿದ್ದಾರೆ. ಹಾಗೂ ಖಂಡ್ರೆಯವರ ಕುರಿತು ತಲೆ ಕೂದಲು ಇದ್ದುದರಿಂದ ಅವರು ಬದುಕಿದ್ದಾರೆ. ಅದೇ ನೆರಳು ಅವರಿಗೆ ಎಂದು ಅವಮಾನಿಸಿದ್ದಾರೆ.

    ಬಣ್ಣದ ಬಗೆಗಿನ ಶೋಷಣೆ, ಅವಮಾನವನ್ನು ತೊಡೆದುಹಾಕಲು ಜಾಗತಿಕ ಮಟ್ಟದಲ್ಲಿ ಚಳವಳಿಗಳು ನಡೆದಿವೆ, ಪಾಶ್ಚಿಮತ್ಯ ದೇಶಗಳಲ್ಲಿ ಮೈಬಣ್ಣದ ಬಗ್ಗೆ, ದೈಹಿಕ ರೂಪದ ಬಗ್ಗೆ ಅವಮಾನಿಸಿದರೆ ಮಹಾ ಅಪರಾಧಿಯಂತೆ ಕಾಣಲಾಗುತ್ತದೆ, ಆದರೆ ಇಲ್ಲಿನ ಬಿಜೆಪಿಗರು ಮೈಬಣ್ಣವನ್ನು, ರೂಪವನ್ನು ಅವಮಾನಿಸುವುದು ಹೆಗ್ಗಳಿಕೆಯಾಗಿ ನೋಡುತ್ತದೆ ಎಂದು ಹೇಳಿದ್ದಾರೆ.

    300x250 AD

    ಬಿಜೆಪಿಗರು ಈ ಕೂಡಲೇ ಅರಗ ಜ್ಞಾನೇಂದ್ರರನ್ನು ಉಚ್ಚಾಟನೆ ಮಾಡಬೇಕು, ಹಾಗೂ ಅರಗ ಜ್ಞಾನೇಂದ್ರ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಹಾಗೂ ಈಶ್ವರ್ ಖಂಡ್ರೆ ಇವರಿಬ್ಬರನ್ನು ಕ್ಷಮೆ ಕೇಳಬೇಕು ಎಂದು ಅವರು ನಾಗರಾಜ ಮಡಿವಾಳ ಆಗ್ರಹಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top