ಸಿದ್ದಾಪುರ: ಮಾನವ ಕಳ್ಳತನ ತಡೆ ದಿನಾಚರಣೆ ಬರಿ ಕಾರ್ಯಕ್ರಮಕ್ಕೆ ಸೀಮಿತವಾಗಿರದೆ, ಕೃತಿಯಲ್ಲಿ ತಂದಾಗ ಮಾತ್ರ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಮಾನವ ಕಳ್ಳತನವನ್ನು ತಡೆಯಲು ಎಲ್ಲರೂ ಕೈ ಜೋಡಿಸೋಣ ಎಂದು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ತಿಮ್ಮಯ್ಯ ಜಿ. ಕರೆನೀಡಿದರು.
ಪಟ್ಟಣದ ತಾಲೂಕ ಪಂಚಾಯತ ಸಭಾಭವನಲ್ಲಿ ಆಯೋಜಿಸಿದ್ದ ಮಾನವ ಕಳ್ಳಸಾಗಣೆ ತಡೆ ದಿನಾಚರಣೆ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಮಾನಗಳಲ್ಲಿ ಮಾನವ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಮಾನವ ಕಳ್ಳತನಕ್ಕೆ ನಮ್ಮ ನಿರ್ಲಕ್ಷವೆ ಕಾರಣವೆಂದರೂ ತಪ್ಪಾಗಲಾರದು. ಸಮಾಜದ ಪ್ರತಿಯೊಬ್ಬ ನಾಗರಿಕನು ಮಾನವ ಕಳ್ಳತನ ತಡೆಯಲು ಮುಂದಾಗಬೇಕು ಅಂದಾಗ ಮಾತ್ರ ಇಂತಹ ಕೆಟ್ಟ ಕೃತ್ಯವನ್ನು ಮಟ್ಟಹಾಕಲು ಸಾಧ್ಯವಾಗುತ್ತದೆ. ಮಾನವ ಕಳ್ಳತನದ ಕುರಿತು ಯಾರಿಗಾದರೂ ಮಾಹಿತಿ ದೊರೆತಲ್ಲಿ ಮಾಹಿತಿಯನ್ನು ಸಂಬOಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ ಕೂಡಲೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಸಹಾಯಕ ಸರ್ಕಾರಿ ವಕೀಲ ಚಂದ್ರಶೇಖರ ಎಚ್.ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪಿಎಸೈ ಮಲ್ಲಿಕಾರ್ಜುನ ಗುರಾಣಿ, ಸೈಬರ್ ಬಾಲ ನ್ಯಾಯ ಮಂಡಳಿ ಕಾನೂನು, ಬಾಲ ಕಾರ್ಮಿಕ ಪದ್ದತಿ ತಡೆ ಕಾನೂನು, ಬಾಲ್ಯ ವಿವಾಹ ನಿಷೇಧ ಕಾನೂನು, ವಿವಿಧ ರೀತಿಯ ಮಕ್ಕಳ ಕಾನೂನುಗಳ ಕುರಿತು ಮಾತನಾಡಿದರು. ಮಕ್ಕಳ ಕಲ್ಯಾಣ ಸಮಿತಿ ಶಿರಸಿ ಅಧ್ಯಕ್ಷೆ ಅನಿತಾ ಪರ್ವತಿಕರ, ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ ಮಾತನಾಡಿದರು.
ತಾಲೂಕು ಕಾನೂನು ಸೇವಾ ಸಮಿತಿಯ ಸಿಬ್ಬಂದಿಯಾದ ಮಂಜುನಾಥ ದೇವಿಹೊಸೂರ ಕಾರ್ಯಕ್ರಮದ ನಿರೂಪಿಸಿದರು. ಅಂಗನವಾಡಿ ಶಿಕ್ಷಕಿಯಾದ ಗೀತಾ ಸ್ವಾಗತಿಸಿದರು, ಸಿ.ಡಿ.ಪಿ.ಓ. ಪೂರ್ಣಿಮಾ ವಂದಿಸಿದರು. ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ದೇವರಾಜ, ಕ್ಷೇತ್ರಶಿಕ್ಷಣಾಧಿಕಾರಿ ಜಿ.ಆಯ.ನಾಯ್ಕ, ಸಿ.ಡಿ.ಪಿ.ಓ ಪೂರ್ಣಿಮಾ, ಕಾರ್ಮಿಕ ನಿರೀಕ್ಷಕರಾದ ನವೀನ, ತಾಲೂಕ ವೈದ್ಯಾಧಿಕಾರಿ ಡಾ. ಲಕ್ಷಿö್ಮÃಕಾಂತ ನಾಯ್ಕ, ಪ.ಪಂ ಮುಖ್ಯಾಧಿಕಾರಿ ಐ.ಜಿ.ಕಣ್ಣೂರ ಉಪಸ್ಥಿತರಿದ್ದರು.