• Slide
    Slide
    Slide
    previous arrow
    next arrow
  • ಜಿಲ್ಲಾ ಪಂಚಾಯತ ಎಇಇ ಕುಸುಮಾ ಹೆಗಡೆ ನಿವೃತ್ತಿ: ಹೃದಯಸ್ಪರ್ಶಿ ಬೀಳ್ಕೊಡುಗೆ

    300x250 AD

    ಶಿರಸಿ: ಸಿದ್ದಾಪುರದ ಜಿಲ್ಲಾ ಪಂಚಾಯತದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿ (ಎಇಇ) ಕಾರ್ಯನಿರ್ವಹಿಸುತ್ತಿದ್ದ ಕುಸುಮಾ ಹೆಗಡೆ ನಿವೃತ್ತಿಯಾಗಿದ್ದು, ಇವರಿಗೆ ಇತರ ಸಿಬ್ಬಂದಿಗಳು, ಅಧಿಕಾರಿಗಳು ಹೃದಯಸ್ಪರ್ಶಿ ಬೀಳ್ಗೊಡುಗೆಯನ್ನು ನಡೆಸಿಕೊಟ್ಟರು.

    ಸಿದ್ದಾಪುರದ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕುಸುಮಾ ಹೆಗಡೆ ದಂಪತಿಗಳನ್ನು ಸನ್ಮಾನಿಸಿ ಗೌರವಿಸುವ ಮೂಲಕ ಬೀಳ್ಗೊಡುಗೆ ನೀಡಲಾಯಿತು. ಕಳೆದ 37 ವರ್ಷಗಳಿಂದ ಅವರು ಜಿಲ್ಲಾ ಪಂಚಾಯತದಲ್ಲಿ ಕರ್ತವ್ಯ ನಿರ್ವಹಿಸಿದ್ದು, ಯಾವುದೇ ಭ್ರಷ್ಟಾಚಾರ ಇಲ್ಲದೇ ಉತ್ತಮ ಕೆಲಸಕ್ಕೆ ಹೆಸರುವಾಸಿಯಾಗಿದ್ದರು.‌

    300x250 AD

    ಇನ್ನು ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಸುಮಾ ಹೆಗಡೆ, ಎಲ್ಲರೂ ಸೇರಿಕೊಂಡು ಬೀಳ್ಗೊಡುಗೆ ನೀಡುತ್ತಿರುವುದು ಸಂತೋಷ ತಂದಿದೆ. ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ಎಲ್ಲರೂ ಪ್ರೀತಿ ವಿಶ್ವಾಸ ತೋರಿದ್ದಾರೆ. ಎಲ್ಲರ ಸಹಕಾರದಿಂದ ಕೆಲಸ ಮಾಡಿದ್ದೇನೆ. ಇಲ್ಲಿ ಬಿಟ್ಟು ಹೋಗುವುದಕ್ಕೆ ಬೇಸರವಿದೆ. ಆದರೆ ಎಲ್ಲರ ಪ್ರೀತಿ ವಿಶ್ವಾಸದೊಂದಿಗೆ ಹೋಗುತ್ತಿದ್ದೇನೆ ಎಂದರು.‌ ಈ ಸಂದರ್ಭದಲ್ಲಿ ಕುಸುಮಾ ಅವರ ಕುಟುಂಬದವರು, ಜಿಪಂ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top