Slide
Slide
Slide
previous arrow
next arrow

ಕಳೆದೈದು ವರ್ಷಗಳಲ್ಲಿ ಟಿಎಸ್ಎಸ್ ಗಣನೀಯ ಸಾಧನೆ: ರಾಮಕೃಷ್ಣ ಹೆಗಡೆ ಕಡವೆ

300x250 AD

ಶಿರಸಿ: ಅಡಕೆ ಬೆಳೆಗಾರರ ಜೀವನಾಡಿ ಸಂಸ್ಥೆಯಾದ ಟಿಎಸ್ಎಸ್ ಕಳೆದ ಐದು ವರ್ಷಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ರೈತರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.

ಸಂಸ್ಥೆಯ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ 128 ಕೋಟಿ ರೂ.ನಷ್ಟು ಲಾಭವನ್ನು ರೈತರಿಗೆ ಮಾಡಿಕೊಟ್ಟಿದೆ. ಸಂಸ್ಥೆಯ ಡಿಪಾಸಿಟ್ ಜಾಸ್ತಿ ಆಗುವ ಜೊತೆಗೆ ವ್ಯವಹಾರ 858 ಕೋಟಿಯಿಂದ 2800 ಕೋಟಿಗೆ ಏರಿಕೆ ಆಗಿದೆ ಎಂದರು.
ವ್ಯವಸ್ಥಾಪಕ ರವೀಶ ಹೆಗಡೆ ಮಾತನಾಡಿ, ಸಂಸ್ಥೆ ನಡೆಸುತ್ತಿರುವ ಸೂಪರ್ ಮಾರ್ಕೆಟ್’ನಲ್ಲಿ ಯೋಗ್ಯ ದರದಲ್ಲಿ ಸಾರ್ವಜನಿಕರಿಗೆ ವಸ್ತುಗಳನ್ನು ನೀಡುತ್ತಿದ್ದೇವೆ.ಸುಮಾರು 17 ಕೋಟಿ ರೂ.ನಷ್ಟು ರಿಯಾಯಿತಿ ವಸ್ತುಗಳನ್ನು ಒದಗಿಸಿದ್ದೇವೆ ಎಂದರು.

300x250 AD

2001 ರಿಂದ ಅಡಿಕೆ ಖರೀದಿ ಪ್ರಾರಂಭಗೊಂಡರೂ ಮೊದಲು ಟಿಎಸ್ಎಸ್. ತಾನು ವಾರ್ಷಿಕ ಖರೀದಿಸುತ್ತಿದ್ದ 2000-3000 ಕ್ವಿಂಟಲ್ಗಳನ್ನು ಸ್ಥಳೀಯ ವ್ಯಾಪಾರಿಗಳಿಗೆ ನೀಡುತ್ತಿತ್ತು. ಇದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ನಿಗದಿ ಮತ್ತು ಸ್ಥಿರತೆ ಕಷ್ಟಸಾಧ್ಯವಾಯಿತು. ಈ ಸಮಸ್ಯೆ ನಿವಾರಣೆಗೆ ಟಿ.ಎಸ್.ಎಸ್. ರೈತರ ಸಲುವಾಗಿ ದೃಢ ನಿರ್ಧಾರ ಕೈಗೊಂಡು ಮಾರುಕಟ್ಟೆಯಲ್ಲಿ ಇತರ ಸಾಂಸ್ಥಿಕ ಮತ್ತು ವೈಯಕ್ತಿಕ ಟೆಂಡರ್ ಬರೆಯುವ ದಲ್ಲಾಲಿಗಳಿಗಿಂತ ಹೆಚ್ಚಿನ ಮೊತ್ತದ ಟೆಂಡರನ್ನು ಬರೆದು ಅಡಿಕೆ ಖರೀದಿ ಮಾಡಲು ಪ್ರಾರಂಭಿಸಿತು ಇದು ಉತ್ತಮ ದರ ನಿಗದಿಯಾಗಲು ಕಾರಣವಾಯಿತು. ಟಿ.ಎಸ್.ಎಸ್.ನ ಕೌಶಲ್ಯಪೂರ್ಣ ಮತ್ತು ಪಾರದರ್ಶಕ ವ್ಯವಹಾರದಿಂದ ಅಡಿಕೆ ಬೆಲೆಯಲ್ಲಿ ಸ್ಥಿರತೆ ಸಾಧಿಸಿದ್ದು ಸರ್ವ ಸದಸ್ಯರಿಗೂ
ಸಂಸ್ಥೆಯಮೇಲೆ ಅಪಾರ ವಿಶ್ವಾಸ ವೃದ್ಧಿಗೆ ಕಾರಣವಾಯಿತು. ಈ ಸಂದರ್ಭದಲ್ಲಿ ಸದಸ್ಯರ ಭವಿಷ್ಯ ಭದ್ರತೆಗಾಗಿ ಕಡ್ಡಾಯ ಠೇವು ವ್ಯವಸ್ಥೆ
ಜಾರಿಗೊಳಿಸಿದರು. ಸದಸ್ಯರು ಇದನ್ನು ಒಕ್ಕೊರಲಿನಿಂದ ಸ್ವಾಗತಿಸಿ ಪಾಲಿಸಿದರು. ಇದರಿಂದ ಸದಸ್ಯರ ಠೇವಿನ ಪ್ರಮಾಣ ಕಳೆದು ಐದು
ವರ್ಷಗಳಿಂದ ಹೆಚ್ಚಾಗಲು ಕಾರಣವಾಯಿತು ಎಂದರು.
ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಮುಂಡಗೋಡಗಳಲ್ಲಿ ಈ ಮೊದಲೇ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಟಿ.ಎಸ್.ಎಸ್. ತನ್ನ ಕಾರ್ಯಕ್ಷೇತ್ರವನ್ನು ಜಿಲ್ಲೆಯ ಬನವಾಸಿ ಮತ್ತು ಪಕ್ಕದ ಹಾವೇರಿ ಜಿಲ್ಲೆಯ ಹಾನಗಲ್ ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕುಗಳಿಗೂ ಪರಿಣಾಮಕಾರಿಯಾಗಿ ವಿಸ್ತರಿಸಿ ಹೆಸರು ಮತ್ತು ಬ್ರ್ಯಾಂಡ್ ವರ್ಚಸ್ಸನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ ಎಂದರು.
ಸಂಸ್ಥೆ ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲಾರಂಭಿಸಿದ ಬಳಿಕ ಉದ್ಯಮದಲ್ಲಿ ಹಾನಿ ಅನುಭವಿಸಿದ ಕೆಲವರು ಸಂಸ್ಥೆಯ ಬಗ್ಗೆ ಅಪಪ್ರಚಾರ ಆರಂಭಿಸಿದ್ದಾರೆ. ಸಂಸ್ಥೆಯ ಕೆಲ ಸದಸ್ಯರೊಂದಿಗೆ ಸೇರಿ ಈ ಅಪಪ್ರಚಾರ ನಡೆಸುತ್ತಿದ್ದಾರೆ. ವಾರ್ಷಿಕವಾಗಿ 72 ಕೋಟಿ ರೂ. ತೆರಿಗೆ ತುಂಬಿ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಸಂಸ್ಥೆ ಬೆಳೆದಿದೆ ಎಂದರು.ಈ ವೇಳೆ ಸಹಾಯಕ ವ್ಯವಸ್ಥಾಪಕ ವಿಜಯಾನಂದ ಭಟ್, ನಿರ್ದೇಶಕರುಗಳಾದ ಬಾಲಚಂದ್ರ ಕೊಡನೂಡು ಇತರರಿದ್ದರು.

Share This
300x250 AD
300x250 AD
300x250 AD
Back to top