ಭಟ್ಕಳ: ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಪರಿಸರ ಜಾಗೃತೆ ಮತ್ತು ಸಂರಕ್ಷಣೆ ಉದ್ದೇಶದಿಂದ ಹಮ್ಮಿಕೊಂಡಿರುವ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನವು ಇಂದು ತಾಲೂಕಿನ 13 ಗ್ರಾಮ ಪಂಚಾಯಿತಿಯ 37 ವಿವಿಧ ಹಳ್ಳಿಗಳಲ್ಲಿ ಅರಣ್ಯವಾಸಿಗಳು ಪಾಲ್ಗೊಂಡಿರುವವರು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಭಟ್ಕಳ ತಾಲೂಕಿನ ಮಾರುಕೇರಿ, ಬೆಳಕೆ, ಯಲ್ಲೊಂಡಿಕಾರ್, ಮಾವಿನಕುರ್ವೆ, ಬಂದರ್, ಜಾಲಿ, ಹೆಬಳೆ, ಬೆಂಗ್ರೆ, ಕೋಣಾರ, ಹಾಡುವಳ್ಳಿ ಮುಂತಾದ ಗ್ರಾಮ ಪಂಚಾಯತಿಯಲ್ಲಿ ಅರಣ್ಯವಾಸಿಗಳು ಯಶಸ್ವಿಯಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗಿಡ ನೆಡುವ ಕಾರ್ಯಕ್ರಮದ ನೇತೃತ್ವವನ್ನು ಜಿಲ್ಲಾ ಸಂಚಾಲಕರಾದ ಪಾಂಡುರಂಗ ನಾಯ್ಕ ಬೆಳಕೆ, ದೇವರಾಜ ಗೊಂಡ, ಶಬ್ಬೀರ್ ಭಟ್ಕಳ, ರಿಜವಾನ್, ಕಯುಂ, ಪರಮೇಶ್ವರ ದೇವಾಡಿಗ, ಗಣಪತಿ ನಾಯ್ಕ, ಗುಂಡು ಆಚಾರಿ, ಶಂಕರ ನಾಯ್ಕ, ನಾಗಮ್ಮ, ರತ್ನ, ಲಲಿತ, ಗೋಮ ಮರಾಠಿ ಮುಂತಾದವರು ವಹಿಸಿದ್ದರು.