ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯ ರಕ್ಷಣೆ, ಪರಿಸರ ಜಾಗೃತೆ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶದಿಂದ ಹಮ್ಮಿಕೊಳ್ಳಲಾದ ಮಹತ್ವಕಾಂಕ್ಷೆಯ ಲಕ್ಷ ವೃಕ್ಷ ಅಭಿಯಾನ ಯಶಸ್ವಿಯಾಗಿ ಜರುಗಿದ್ದು, ಜಿಲ್ಲಾದ್ಯಂತ 10 ಸಾವಿರಕ್ಕೂ ಮಿಕ್ಕಿ ಅರಣ್ಯವಾಸಿಗಳು ಏಕಕಾಲದಲ್ಲಿ ಭಾಗವಹಿಸುವಿಕೆ ದಾಖಲಾರ್ಹ ಕಾರ್ಯಕ್ರಮವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ, ಜಿಲ್ಲಾದ್ಯಂತ ಜರುಗಿದ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನವು ಜಿಲ್ಲೆಯ 123 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸುಮಾರು 400 ಕ್ಕೂ ಮಿಕ್ಕಿ ಗ್ರಾಮಗಳಲ್ಲಿ ಏಕಕಾಲದಲ್ಲಿ ಕಾರ್ಯಕ್ರಮ ಜರುಗಿರುವುದು ವಿಶೇಷವಾಗಿದೆ.
ವಿವಿಧ ತಾಲೂಕುಗಳ ಸಿದ್ದಾಪುರ 24, ಶಿರಸಿ- 27, ಯಲ್ಲಾಪುರ- 10, ಮುಂಡಗೋಡ- 10, ಜೊಯಿಡಾ- 10, ಕುಮಟ- 11, ಕಾರವಾರ- 3, ಅಂಕೋಲಾ- 4, ಹೊನ್ನಾವರ- 11, ಭಟ್ಕಳ- 13 ಗ್ರಾಮ ಪಂಚಾಯಿತಿಗಳಲ್ಲಿ ಗಿಡ ನೆಡಲಾಯಿತು.
ಜಿಲ್ಲಾದ್ಯಂತ ಜರುಗಿದ ಕಾರ್ಯಕ್ರಮದಲ್ಲಿ ಸಿದ್ದಾಪುರದಲ್ಲಿ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಮತ್ತು ಅಂಕೋಲಾ ತಾಲೂಕಿನ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ, ಪದ್ಮಶ್ರೀ ವಿಜೇತೆ ತುಳಸಿ ಗೌಡ ಮತ್ತು ಸುಕ್ರಿ ಗೌಡ ವಿವಿಧ ತಾಲೂಕಿನಲ್ಲಿ ಚಾಲನೆ ನೀಡಿರುವುದು ಅಭಿಯಾನದ ವಿಶೇಷ ಎಂದರೇ ತಪ್ಪಾಗಲಾರದು.
ಇಂದು ಚಾಲನೆಗೊಂಡ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನವು ಅಗಷ್ಟ 14 ರವರೆಗೆ ಜಿಲ್ಲೆಯ ಸುಮಾರು 165ಗ್ರಾಮ ಪಂಚಾಯತ ವ್ಯಾಪ್ಯಿಯಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಜಿಲ್ಲಾದ್ಯಂತ ಅರಣ್ಯವಾಸಿಗಳು 1 ಲಕ್ಷಕ್ಕೂ ಮಿಕ್ಕಿ ಗಿಡ ನೆಡುವ ಗುರಿಯನ್ನು ಹೊಂದಿದ್ದೇವೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಶಿರಸಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನೆಹರೂ ನಾಯ್ಕ ಬಿಳೂರು, ಹರೀಶ್ ನಾಯ್ಕ, ಸುರೇಶ ರಾಮಾ ನಾಯ್ಕ, ಎಮ್ ಕೆ ನಾಯ್ಕ, ಈಶ್ವರ ನಾಯ್ಕ, ಬೆಳ್ಳಪ್ಪ ಗೌಡ, ಶಿವು ಗೌಡ, ನಾರಾಯಣ ನಾಯ್ಕ, ಓಮು ನಾಯ್ಕ, ದೇವರಾಜ ಬಂಡಲ, ಬಾಬು ಮರಾಠಿ, ಬಂಗರ‍್ಯ ಮರಾಠಿ, ಚಂದ್ರಶೇಖರ್ ಶಾನಭಾಗ, ಪ್ರವೀಣ್ ಗೌಡರ್, ಇಬ್ರಾಹಿಂ ಗೌಡಳ್ಳಿ, ಅಬ್ದುಲ್ ರಫೀಕ್, ಸುರೇಶ್ ವಿ ಹೆಗಡೆ ಹುಲೇಕಲ್, ಗಂಗಾ ನಾಯ್ಕ ನೆಗ್ಗು, ಪ್ರಶಾಂತ ಶೆಟ್ಟಿ ಕಕ್ಕಳ್ಳಿ, ಮಾಬೂಬಲಿ ದಾಸನಕೊಪ್ಪ, ಸರೋಜ ಯಲ್ಲಪ್ಪ ಬದನಗೋಡ, ಅರುಣ, ಚಂದ್ರು ಗೌಡ ಬೈರುಂಬೆ, ಮಲ್ಲೇಶ ಸಂತೊಳ್ಳಿ, ಕಿರಣ ಮರಾಠಿ ದೇವನಳ್ಳಿ, ಶಿವು ಜಡ್ಡಿಗದ್ದೆ, ಪಂಪಾವತಿ ಗಣೇಶನಗರ ಮುಂತಾದವರು ನೇತೃತ್ವ ವಹಿಸಿದ್ದರು.