• Slide
  Slide
  Slide
  previous arrow
  next arrow
 • ಮಣಿಪುರ ಹಿಂಸಾಚಾರದ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಸಂಚು: ಜನಪೀಸ್

  300x250 AD

  ಮೈತೇಯಿ (ಹಿಂದೂ) ಸಮುದಾಯವು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಅವರು ರಾಜರ ವಂಶಸ್ಥರಾಗಿದ್ದಾರೆ. ಮಣಿಪುರ ರಾಜ್ಯವು 1949 ರಲ್ಲಿ ಸ್ಥಾಪನೆಯಾಗಿದ್ದು, ಆಗಿನಿಂದ ಮೈತೇಯಿ ಸಮುದಾಯ ಮತ್ತು ಕುಕಿ (ಕ್ರೈಸ್ತ) ಸಮುದಾಯದ ನಡುವೆ ಸಂಘರ್ಷ ನಡೆಯುತ್ತಿದೆ. ಮೈತೇಯಿ ಸಮುದಾಯದ ಅನೇಕ ಹಿಂದೂ ಬಾಂಧವರು ಮತಾಂತರಗೊಳ್ಳುತ್ತಿದ್ದಾರೆ. ಮಣಿಪುರದ ಚುರಚಂದಪುರದಲ್ಲಿ ಮೈತೇಯಿಗಳು ಉಳಿದಿಲ್ಲ. ಮಣಿಪುರದಲ್ಲಿ ‘ಸಾಂಸ್ಕೃತಿಕ ನರಮೇಧ’ ನಡೆಯುತ್ತಿದೆ.  ಮಣಿಪುರದ ಜನರಲ್ಲಿ ಪ್ರತ್ಯೇಕತೆಯ ಭಾವನೆಯನ್ನು ಉಂಟು ಮಾಡಿ ಮಣಿಪುರದೊಂದಿಗೆ ಭಾರತವನ್ನು ಸಹ ಅಸ್ಥಿರಗೊಳಿಸಲು ರಾಜಕೀಯ ದೃಷ್ಟಿಯಿಂದ ಪ್ರೇರೇಪಿತ ‘ಯುರೋಪಿಯನ್ ಯೂನಿಯನ್’ ಮತ್ತು ವಿದೇಶಿ ಶಕ್ತಿಗಳು  ಪ್ರಯತ್ನಿಸುತ್ತಿವೆ. ಭಾರತ ಜಗತ್ತಿನ ಸೂಪರ್ ಪವರ್ ಆಗಬಾರದು ಎಂದು ಇದೆಲ್ಲ ನಡೆಯುತ್ತಿದೆ ಎಂದು ‘ಡಿಜಿಟಲ್ ಸನಾತನ ಯೋಧ’ದ (ಡಿಜಿಟಲ್ ಸನಾತನ ಹೋರಾಟಗಾರ) ಜನಪೀಸ್ ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಮಣಿಪುರದ ಹಿಂಸಾಚಾರದ ಹಿಂದೆ ಯಾರ ಕೈವಾಡವಿದೆ?’ ಈ ವಿಷಯದ ಕುರಿತು ನಡೆದ  ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.    

  ಈ ಸಂದರ್ಭದಲ್ಲಿ ಜನಪೀಸ, 2008 ರಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಣಿಪುರದಲ್ಲಿ ‘ಕಾರ್ಯಾಚರಣೆಯ ಸಂಪ್ರದಾಯದ ಅಮಾನತು ಒಪ್ಪಂದ’ (suspension of operation convention) ವನ್ನು ಜಾರಿಗೆ ತರಲಾಯಿತು. ಈ ಒಪ್ಪಂದದಲ್ಲಿ ಕೇವಲ ಕುಕಿ ಸಮುದಾಯದ ಬಂಡಾಯ ಬಣಗಳಿಗೆ ಮಾತ್ರ ಶಸ್ತ್ರಾಸ್ತ್ರಗಳನ್ನು ಹೊಂದಲು ಪರವಾನಿಗೆ ಇತ್ತು. ಆದರೆ ಮಾರ್ಚ್ 2023 ರಲ್ಲಿ, ಈ ಕಾನೂನನ್ನು ಬಿಜೆಪಿ ಸರಕಾರವು ರದ್ದುಗೊಳಿಸಿತು. ಅದೇ ಸಮಯದಲ್ಲಿ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ನಿರ್ಣಯ ತೆಗೆದುಕೊಳ್ಳುವಂತೆಯೂ ನ್ಯಾಯಾಲಯ ಆದೇಶಿಸಿತು. ಇದರೊಂದಿಗೆ ಮಣಿಪುರದಲ್ಲಿ ಅಧಿಕ ಪ್ರಮಾಣದಲ್ಲಿ ಅಫೀಮು ಕೃಷಿ ಮಾಡುವ ಕುಕಿ ಸಮುದಾಯದ ಅಫೀಮು ಕೃಷಿಯನ್ನೂ ಸರಕಾರ ನಾಶಪಡಿಸಿತು.  ಇವು ಮಣಿಪುರದ ಹಿಂಸಾಚಾರದ ಹಿಂದಿನ ಪ್ರಮುಖ ಕಾರಣಗಳಾಗಿದ್ದವು. 1994 ರಲ್ಲಿ ಮಧ್ಯಪ್ರಾಚ್ಯ ಆಫ್ರಿಕನ್ ದೇಶ ರುವಾಂಡಾದಲ್ಲಿ ಚರ್ಚ್ ಪ್ರಚೋದನೆಯಿಂದ  8 ಲಕ್ಷ ಜನರ ಹತ್ಯಾಕಾಂಡ ನಡೆದಂತೆಯೇ, ಮಣಿಪುರದಲ್ಲಿಯೂ ನಡೆಸಲು ಪ್ರಯತ್ನಿಸಲಾಗುತ್ತಿದೆಯೇ ಎಂದು ಪರಿಶೀಲಿಸುವುದು ಆವಶ್ಯಕವಾಗಿದೆ.

  300x250 AD

     ಈ ಸಂದರ್ಭದಲ್ಲಿ  ‘ಸುದರ್ಶನ್ ನ್ಯೂಸ್’ ಸುದ್ದಿವಾಹಿನಿಯ ಪತ್ರಿಕಾ ವರದಿದಾಗ ಜೊಜೊ ನಾಕ್ರೋ ನಾಗಾ ಮಾತನಾಡಿ, ಮಣಿಪುರದಲ್ಲಿ ಮೈತೇಯಿ ಸಮುದಾಯದವರು ಬಹುಸಂಖ್ಯಾತರಾಗಿಲ್ಲ ಮತ್ತು ಭೌಗೋಳಿಕವಾಗಿಯೂ ಅವರು ಕಡಿಮೆ ಪ್ರದೇಶವನ್ನು ಹೊಂದಿದ್ದಾರೆ. ಮಣಿಪುರದ ಪ್ರಸ್ತುತ ಪರಿಸ್ಥಿತಿಯ ಲಾಭವನ್ನು ಭಾರತ ವಿರೋಧಿ ಶಕ್ತಿಗಳು ಪಡೆದುಕೊಂಡಿವೆ. ವಿದೇಶಿ ಶಕ್ತಿಗಳು ಕುಕಿ ಸಮುದಾಯಕ್ಕೆ ಆಮಿಷವನ್ನೊಡ್ಡಿ ಅವರಿಂದ ಗಲಭೆಯನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ಮಣಿಪುರದ ಹಲವು ಸ್ಥಳಗಳಲ್ಲಿ  ಮೈತೇಯಿ ಸಮುದಾಯದ ಜನರು ಪಲಾಯನ ಮಾಡಿದ್ದಾರೆ. ಮಣಿಪುರದಲ್ಲಿ, ಮೇ ತಿಂಗಳಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಲಾಗಿತ್ತು.ಆದರೆ ಇದರ ವಿಡಿಯೋ ಜುಲೈನಲ್ಲಿ ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರಿಂದ ಇದೆಲ್ಲವೂ ರಾಜಕೀಯ ಪ್ರೇರಿತ ಎಂಬುದನ್ನು ಗಮನಿಸಬಹುದಾಗಿದೆ.  ಮಣಿಪುರದಲ್ಲಿ ನಡೆದ ಈ ಘಟನೆಯ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು; ಆದರೆ ಇದರಿಂದ ಉದ್ದೇಶಪೂರ್ವಕವಾಗಿ ಮೈತೇಯಿ ಸಮಾಜ ಮತ್ತು ಸರರಕಾರಕ್ಕೆ ಕೆಟ್ಟ ಹೆಸರು ತರಲಾಗುತ್ತಿದೆ ಎಂದರು.

  Share This
  300x250 AD
  300x250 AD
  300x250 AD
  Leaderboard Ad
  Back to top