• Slide
  Slide
  Slide
  previous arrow
  next arrow
 • ಸರ್ಕಾರ ನೀಡಿದ 3 ರೂ. ನೇರವಾಗಿ ಹಾಲು ಉತ್ಪಾದಕರಿಗೆ ನೀಡಲು ನಿರ್ಧಾರ: ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ

  300x250 AD

  ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ, ಧಾರವಾಡದ ವ್ಯಾಪ್ತಿಯಲ್ಲಿನ ಹೈನುಗಾರರ ಬಹುದಿನದ ಬೇಡಿಕೆಯಾಗಿದ್ದ ಹಾಲಿನ ದರ ಏರಿಸುವ ಪ್ರಕ್ರಿಯೆಗೆ ರಾಜ್ಯ ಸರಕಾರ ಹಸಿರು ನಿಶಾನೆ ತೋರಿಸಿದೆ.

  ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ, ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ, ನಮ್ಮಿಂದ ಮುಖ್ಯಮಂತ್ರಿಗಳಲ್ಲಿ ಪ್ರತೀ ಲೀಟರ್ ಹಾಲಿಗೆ ರೂ.5/- ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿತ್ತು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರತೀ ಲೀಟರ್ ಹಾಲಿಗೆ ರೂ.3/- ಹೆಚ್ಚಳ ಮಾಡುವಂತೆ ಅನುಮತಿ ನೀಡಿದ್ದು,ಅವರ ಆದೇಶದಂತೆ ನಮ್ಮ ಒಕ್ಕೂಟದಿಂದ ಅಗಸ್ಟ್‌ 1 ನೇ ತಾರೀಖಿನಿಂದ ನಂದಿನಿ ಪ್ಯಾಕೆಟ್‌ ಮೇಲಿನ ಪ್ರತೀ ಲೀಟರ್ ಹಾಲಿಗೆ ರೂ. ರೂ.3/- ಹೆಚ್ಚಳ ಮಾಡಲಿದೆ. ಸರ್ಕಾರದ ನಿರ್ದೇಶನದಂತೆಯೇ ಸರ್ಕಾರದಿಂದ ಪ್ರತೀ ಲೀಟರ್ ಹಾಲಿಗೆ ಹೆಚ್ಚಳ ಮಾಡಲಾದ ರೂ.3/- ನ್ನು ಸಂಪೂರ್ಣವಾಗಿ ಹಾಲು ಉತ್ಪಾದಕ ರೈತರಿಂದ ಖರೀದಿಸಲ್ಪಟ್ಟ ಪ್ರತೀ ಲೀಟರ್ ಹಾಲಿಗೆ ನೀಡಬೇಕೆಂಬ ನಮ್ಮ ಮನವಿಗೆ ಸಹಕರಿಸಿದ ಧಾರವಾಡ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ವೀರಪ್ಪ ಮುಗದ್‌ ಹಾಗೂ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರುಗಳಿಗೆ ಧನ್ಯವಾದಗಳನ್ನು ತಿಳಿಸಿದರು. ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ 15 ಒಕ್ಕೂಟಗಳ ಮನವಿಗೆ ಸ್ಪಂದಿಸಿ ನಂದಿನಿ ಪ್ಯಾಕೆಟ್‌ ಮೇಲಿನ ಪ್ರತೀ ಲೀಟರ್ ಹಾಲಿಗೆ ರೂ.3/- ಗಳನ್ನು ಹೆಚ್ಚಳ ಮಾಡಿದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಸಚಿವರುಗಳಿಗೆ ಜಿಲ್ಲೆಯ ಸಮಸ್ತ ಹಾಲು ಉತ್ಪಾದಕ ರೈತರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

  300x250 AD

  ಪ್ರಸ್ತುತವಾಗಿ ಹಾಲು ಉತ್ಪಾದಕ ರೈತರು ಸಂಘಗಳಿಗೆ ಒದಗಿಸುವ 4.0% Fat ಮತ್ತು 8.5 SNF ಇರುವ ಪ್ರತೀ ಲೀಟರ್‌ ಆಕಳಿನ ಹಾಲಿಗೆ ರೂ.29.00/-, 6.0% Fat ಮತ್ತು 9.0 SNF ಇರುವ ಪ್ರತೀ ಲೀಟರ್‌ ಎಮ್ಮೆ ಹಾಲಿಗೆ ರೂ.43.00/- ನಂತೆ ಇದ್ದು, ಒಕ್ಕೂಟದ ರೂ.3/- ದರ ಹೆಚ್ಚಳದಿಂದ ರೈತರಿಗೆ 4.0% Fat ಮತ್ತು 8.5 SNF ಇರುವ ಪ್ರತೀ ಲೀಟರ್‌ ಆಕಳಿನ ಹಾಲಿಗೆ ರೂ.32.00/-, (ಪ್ರತಿ ಲೀಟರ್ ಗೆ 37 ರೂಪಾಯಿ ರಾಜ್ಯ ಸರಕಾರದ 5 ರೂಪಾಯಿ ಸಹಾಯಧನ ಸೇರಿ) ಹಾಗೂ 6.0% Fat ಮತ್ತು 9.0 SNF ಇರುವ ಪ್ರತೀ ಲೀಟರ್‌ ಎಮ್ಮೆ ಹಾಲಿಗೆ ರೂ.46.00/- (ಪ್ರತಿ ಲೀಟರ್ ಗೆ 51 ರೂಪಾಯಿ ರಾಜ್ಯ ಸರಕಾರದ 5 ರೂಪಾಯಿ ಸಹಾಯಧನ ಸೇರಿ) ರಂತೆ ದರ ಸಿಗಲಿದ್ದು, ಪರಿಷ್ಕೃತ ದರವು 01-08-2023 ರ ಬೆಳಗಿನ ಸರತಿಯಿಂದಲೇ ಒಕ್ಕೂಟದ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಜಾರಿಗೆ ಬರುವಂತೆ ಒಕ್ಕೂಟದಿಂದ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top