• Slide
    Slide
    Slide
    previous arrow
    next arrow
  • ಅಂಕೋಲಾದಲ್ಲಿ ವಿಜೃಂಭಣೆಯಿಂದ ನಡೆದ ಮೊಹರಂ

    300x250 AD

    ಅಂಕೋಲಾ: ಪಟ್ಟಣದಲ್ಲಿ ಮೊಹರಂ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಬೊಬ್ರುವಾಡ ಕಬರಸ್ತಾನದಿಂದ ಮೊಹರಂ ಆಚರಣೆಯ ಒಂದು ತಾಜಿಯಾಗಳು ಹಾಗೂ ರೆಹಮಾನಿಯಾ ಮಸೀದಿಯಿಂದ ಒಂದು ತಾಜಿಯಾ ಮೆರವಣಿಗೆ ಹೊರಟು ಪಟ್ಟಣದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನ ಮತ್ತು ಪೂಜೆ ಮಾಡಲು ಅವಕಾಶ ಮಾಡಿಕೊಡಲಾಯಿತು.

    ತಾಜಿಯಾ ಮೆರವಣಿಗೆಯಲ್ಲಿ ಸೈಯದ್ ಸಂಶುದ್ದೀನ್, ಕಾಸೀಂ, ಶರ್ಪುದ್ದೀನ್ ಶೇಖ್, ಅಖ್ತರ ಸೈಯದ್, ಫೈರೋಜ ಸತ್ತಾರ ಖಾನ್, ಬಾಬಾಜಾನ್, ಪಪ್ಪು ಸೈಯದ್, ರಫೀಕ್ ಜಾಫರ್ ಸೈಯದ್ ಹಾಗೂ ಅಂಕೋಲಾ ನಗರದ ಮುಸ್ಲಿಂ ಯುವಕರು ಭಾಗವಹಿಸಿ ಉತ್ಸವ ಯಶಸ್ವಿಗೊಳಿಸಿದರು. ಪೊಲೀಸ್ ಇಲಾಖೆಯವರು ಹಾಗೂ ಎಲ್ಲಾ ಮತದ ಸಾರ್ವಜನಿಕರು ಉತ್ತಮ ಸಹಕಾರ ನೀಡಿದರು. ಸಂಘಟನೆಯವರು ಧನ್ಯವಾದವನ್ನು ಅರ್ಪಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top