ಜೊಯಿಡಾ: ತಾಲೂಕಿನ ಕುಂಬಾರವಾಡಾ ಅಂಬೇಡ್ಕರ್ ಭವನದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶ ಕುಂಬಾರವಾಡಾ ಅರಣ್ಯ ಇಲಾಕೆ ವತಿಯಿಂದ ಜಾಗತಿಕ ಹುಲಿ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ ಸಿಂಧೆ, ನಮ್ಮ ಕಾಳಿ ಹುಲಿ ಸಂರಕ್ಷಿತ ಪ್ರದೇಶ ದೇಶದಲ್ಲಿ 10ನೇ ಸ್ಥಾನದಲ್ಲಿದೆ. ಇದಕ್ಕೆ ಇಲ್ಲಿನ ಸ್ಥಳೀಯರ ಸಹಕಾರ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳೇ ಕಾರಣ. ಮುಂದಿನ ದಿನಗಳಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶ ದೇಶದಲ್ಲೇ ಮೊದಲನೇ ಸ್ಥಾನಕ್ಕೆ ಬರುವ ಹಾಗೆ ಆಗಲಿ ಎಂದು ಕಾಡಿನಲ್ಲಿ ಹುಲಿ ಏಕೆ ಅವಶ್ಯ, ಹುಲಿ ಮತ್ತು ಅರಣ್ಯದ ನಡುವಿನ ಸಂಬAಧ ಹಾಗೂ ಹುಲಿ ದಾಳಿಯಿಂದ ಸಾಕು ಪ್ರಾಣಿಗಳು ಸತ್ತರೆ ಅದರ ಪರಿಹಾರದ ಬಗ್ಗೆ ಮಾಹಿತಿ ನೀಡಿದರು.
ಕುಂಬಾರವಾಡಾ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಗೇಶ್ ಕಾಮತ್ ಮಾತನಾಡಿ, ಅರಣ್ಯ ಇಲಾಖೆ ಸ್ಥಳೀಯರ ಜೊತೆ ಉತ್ತಮ ಬಾಂಧವ್ಯದೊoದಿಗೆ ಸಾಗಬೇಕಾಗಿದೆ. ಜೊಯಿಡಾ ತಾಲೂಕು ಕಾಡಿನಿಂದ ಕೂಡಿದ ಪ್ರದೇಶ. ಇಲ್ಲಿ ಜನರಿಗೆ ಮೂಲಸೌಕರ್ಯಗಳಿಗೆ ಅರಣ್ಯ ಇಲಾಖೆ ತಡೆ ಒಡ್ಡಬಾರದು. ಹಾಗೇಯೇ ವನ್ಯ ಪ್ರಾಣಿ ಬೇಟೆ, ಮರಗಳ ಕಳ್ಳಸಾಗಾಣಿಕೆ ಬಗ್ಗೆ ಯಾರೇ ಆದರೂ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಅರಣ್ಯ ಹಾಗೂ ವನ್ಯ ಪ್ರಾಣಿಗಳ ರಕ್ಷಣೆ ಮಾಡಬೇಕು ಎಂದರು. ವೇದಿಕೆ ಕಾರ್ಯಕ್ರಮ ನಂತರದಲ್ಲಿ ಸಂಗೀತ ಕಾರ್ಯಕ್ರಮ ಹಾಗೂ ಅರಣ್ಯದ ಬಗ್ಗೆ ಕಿರು ನಾಟಕ ಹಾಗೂ ಅರಣ್ಯದ ಬಗ್ಗೆ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬಹುಮಾನ ನೀಡಲಾಯಿತು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ತಹಶಿಲ್ದಾರರ ಬಸವರಾಜ ತೆನ್ನಳ್ಳಿ, ಕುಂಬಾರವಾಡಾ ಗ್ರಾ.ಪಂ.ಸದಸ್ಯರಾದ ದತ್ತಾ ನಾಯ್ಕ, ಎಸ್.ಡಿ.ಕಾಮತ್ ಹಾಗೂ ಡಾ.ಜಯಾನಂದ ಡೇರೆಕರ, ಕುಂಬಾರವಾಡಾ ವಲಯ ಅರಣ್ಯಾಧಿಕಾರಿ ಶಶಿಧರ ಪಾಟೀಲ್ ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಎಲ್ಲಾ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.