Slide
Slide
Slide
previous arrow
next arrow

ಮನಸ್ಸಿನ ತಲ್ಲಣಗಳನ್ನು ತಡೆಯಲು ದೇವರ ಮೇಲಿನ ಭಕ್ತಿಯೊಂದೇ ಉಪಾಯ: ಸ್ವರ್ಣವಲ್ಲೀ ಶ್ರೀ

300x250 AD

ಪ್ರತಿಯೊಬ್ಬರೂ ಇಷ್ಟ ದೇವರ ನಾಮ ಸ್ಮರಣೆ ಮಾಡುತ್ತಿರಬೇಕಾದ್ದು, ಇಂದು ಬಹಳ ಅಗತ್ಯವಿದೆ. ಇದರಿಂದ ನಮ್ಮ ಮನಸ್ಸಿನ ತಲ್ಲಣಗಳು ಕಡಿಮೆ ಆಗುತ್ತವೆ. ಬೇಸರ, ಸಿಟ್ಟು, ಭಯ ಕಡಿಮೆ ಆಗುತ್ತವೆ. ಕೆಲವೊಮ್ಮೆ ಆ ತಲ್ಲಣಗಳು ಮನುಷ್ಯ ಮತಿ ಭ್ರಮಣೆಗೆ ಒಳಗಾಗುವಂತೆ ಕೂಡ ಮಾಡುತ್ತವೆ. ಶಾರೀರಿಕವಾದ ತೀವ್ರವಾದ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಇದನ್ನು ತಪ್ಪಿಸಲು ದೇವರ ಸ್ಮರಣೆ ಅತ್ಯುತ್ತಮ ಸಾಧನ ಎಂದು ಸಲಹೆ ಮಾಡಿದರು.
ಪ್ರತಿಯೊಬ್ಬರೂ ಸಂಧ್ಯಾ ಕಾಲದಲ್ಲಿ ದೇವರ ದೇವರ ಸ್ಮರಣೆ ಮಾಡಬೇಕು. ಪ್ರತಿ ದಿನವೂ ಬೆಳಗಿನ ವೇಳೆ ದೇವರ ಜಪ, ಪೂಜೆ, ಸ್ತೋತ್ರ ಪಾರಾಯಣ, ಸಹಸ್ರನಾಮ ಯೋಗಾಸನ, ಪ್ರಾಣಾಯಾಮ ಮಾಡಬೇಕು. ಇದರಿಂದ ಐಹಿಕವಾಗಿ ಆರೋಗ್ಯ ಚೆನ್ನಾಗಿದ್ದರೆ, ಮೋಕ್ಷ ಮಾರ್ಗಕ್ಕೆ ಹಾಗೂ ಪುಣ್ಯ ಸಂಪಾದನೆಗೆ ಸಹಕಾರಿ ಆಗಲಿದೆ ಎಂದರು.
ಭಗವಂತನ ಸ್ಮರಣೆ ಯಾಕೆ ಮಾಡಬೇಕು ಎಂಬುದನ್ನು ಭಗವಂತನೇ ಹೇಳುತ್ತಾನೆ. ಅನಿತ್ಯ, ಅಸುಖದಿಂದ ಕೂಡಿದ ಜೀವನ ಎದುರಿಸಲು ಭಕ್ತಿ ಬೇಕೇ ಬೇಕು. ಮನಸ್ಸು ಎಷ್ಟು ವಿಚಿತ್ರ ಎಂದರೆ ನಾವು ನೋಡಿದ ಎಷ್ಟೋ ದುಃಖದ ಘಟನೆ ನಂತರ ಮರೆತು ಬಿಡುತ್ತೇವೆ. ದೇವರು ಮರೆವು ನೀಡಿದ್ದು ಒಂದು ವರವೇ ಆದರೂ ಅದು ಅಜ್ಞಾನ. ಅನಿತ್ಯತೆ ಮರೆಯವದೇ ಅಜ್ಞಾನ. ನನಗೂ ಮರಣವಿದೆ ಎಂಬುದನ್ನು ಮರೆಯದೇ ನೆನಪಿಟ್ಟುಕೊಳ್ಳಬೇಕು. ಆ ನೆನಪು ಇದ್ದಾಗ ನಮ್ಮ ನಡೆ ಬೇರೆಯಾಗುತ್ತದೆ. ಆಗ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂಬ ಉತ್ತೇಜನ ಬರುತ್ತದೆ ಎಂದೂ ವಿಶ್ಲೇಷಿಸಿದರು.
ಈ ವೇಳೆ ಗುಂದ ಸೀಮಾ ಅಧ್ಯಕ್ಷ ದತ್ತಾತ್ರಯ ಹೆಗಡೆ ತಮ್ಮಣಗಿ, ಛಾಪಖಂಡ ಭಾಗಿ ಅಧ್ಯಕ್ಷ ಶಿವಾನಂದ ನಾರಾಯಣ ಭಟ್ಟ, ರಾಮಕೃಷ್ಣ ಭಟ್ಟ ನಗರಿ, ದಿವಾಕರ ದೇಸಾಯಿ ಶೇವಾಳ್ಳಿ ಇತರರು ಇದ್ದರು. ಮಾತೆಯರು ಕುಂಕುಮಾರ್ಚನೆ ನಡೆಸಿದರು. ಪುರುಷರು ಗಾಯತ್ರೀ ಜಪ ಮಾಡಿದರು.

300x250 AD
Share This
300x250 AD
300x250 AD
300x250 AD
Back to top