• Slide
    Slide
    Slide
    previous arrow
    next arrow
  • ಅಂಬುಲೆನ್ಸ್ ಚಾಲಕ ಪ್ರಮೋದ ನಾಯ್ಕ ಹೃದಯಾಘಾತದಿಂದ ನಿಧನ

    300x250 AD

    ಯಲ್ಲಾಪುರ: ಕೊವಿಡ್ ಸಮಯದಲ್ಲಿ ಯಾವುದೇ ಭಯ ಹಾಗೂ ಅಳುಕಿಲ್ಲದೆ ತಾಲೂಕ ಆಸ್ಪತ್ರೆಯ ಅಂಬುಲೆನ್ಸ್ ಚಾಲಕನಾಗಿ ರೋಗಿಗಳ ಸೇವೆ ಮಾಡಿ, ಜನರ ಮನ ಗೆದ್ದಿದ್ದ ಪ್ರಮೋದ ಮಹಾಬಲೇಶ್ವರ ನಾಯ್ಕ ಗುರುವಾರ ಸಂಜೆ, ಹೃದಯಘಾತದಿಂದ ನಿಧನರಾಗಿದ್ದಾರೆ. ಅವರಿಗೆ 48 ವಯಸ್ಸಾಗಿತ್ತು.
    ಮೂಲತಃ ಅಂಕೋಲಾದ ಅವರ್ಸಾದವರಾಗಿದ್ದ ಪ್ರಮೋದ ನಾಯ್ಕ ಸುಮಾರು 10 ವರ್ಷದಿಂದ ಯಲ್ಲಾಪುರ ತಾಲೂಕಾ ಆಸ್ಪತ್ರೆಯ ಅಂಬುಲೆನ್ಸ್ ಗೆ ಹಂಗಾಮಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಹೃದಯಾಘಾತಕ್ಕೊಳಗಾದ ಅವರನ್ನು ತಾಲೂಕಾ ಆಸ್ಪತ್ರೆಗೆ ತರಲಾಗಿತ್ತು. ಆದರೆ, ಅದಾಗಲೆ ಅವರು ಮೃತಪಟ್ಟಿದ್ದರು.
    ರೋಗಿಗಳನ್ನು, ಅಪಘಾತಕ್ಕೆ ಒಳಗಾದವರನ್ನು ತಾಲೂಕಾ ಆಸ್ಪತ್ರೆಗೆ ತರುವಾಗ ಅಥವಾ ಹುಬ್ಬಳ್ಳಿ ಮುಂತಾದ ದೊಡ್ಡ ಆಸ್ಪತ್ರೆಗೆ ಸಾಗಿಸುವುವಾಗ ರೋಗಿಯ ಸಂಬoಧಿಕರಿಗೆ ಸರಿಯಾದ ಮಾಹಿತಿ ನೀಡುತ್ತಿದ್ದಲ್ಲದೇ, ಅವರೊಂದಿಗೆ ಉತ್ತಮವಾಗಿ ನಡೆದುಕೊಳ್ಳುತ್ತಿದ್ದರು ಎನ್ನುವ ಒಳ್ಳೆಯ ಹೆಸರು ಆಸ್ಪತ್ರೆಯ ವಲಯದಲ್ಲಿದೆ. ಆಕಸ್ಮಿಕವಾಗಿ ಮೃತಪಟ್ಟ ಅಂಬುಲೆನ್ಸ್ ಚಾಲಕ ಪ್ರಮೋದ ನಾಯ್ಕ ಅಗಲುವಿಕೆಗೆ ಆಸ್ಪತ್ರೆಯ ಸಿಬ್ಬಂದಿಗಳು, ಅಂಬುಲೇನ್ಸ್ ಚಾಲಕರಾದ ಶೋಕ ವ್ಯಕ್ತಪಡಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top