Slide
Slide
Slide
previous arrow
next arrow

ಪ್ರಾಕೃತಿಕ ವಿಕೋಪದಿಂದ ಉಂಟಾದ ಹಾನಿ ದುರಸ್ತಿ ಅಂದಾಜು ಪಟ್ಟಿ ಸಲ್ಲಿಸಲು ಡಿಸಿ ಸೂಚನೆ

300x250 AD

ಕಾರವಾರ: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಶಾಲೆ ಹಾಗೂ ಅಂಗನವಾಡಿಗಳನ್ನು ಪರಿಶೀಲನೆ ಮಾಡಿ ಅಗತ್ಯ ದುರಸ್ಥಿ ಕೈಗೊಳ್ಳುವ ಬಗ್ಗೆ ಅಂದಾಜು ಪಟ್ಟಿಯೊಂದಿಗೆ ತಹಶೀಲ್ದಾರ ಮುಖಾಂತರ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಸ್ಟ್ 3ರೊಳಗೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಸೂಚಿಸಿದ್ದಾರೆ.

ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆರೋಗ್ಯ ಕೇಂದ್ರ ಮತ್ತು ಜಿಲ್ಲಾ ಆಸ್ಪತ್ರ ಪರಿಶೀಲನೆ ನಡೆಸಿ ಮಳೆಗಾಲದಲ್ಲಿ ಉಂಟಾಗುವ ನೀರು ಸೋರುವುದು ಹಾಗೂ ಕಿಟಕಿ ಬಾಗಿಲುಗಳ ದುರಸ್ಥಿ ಇತ್ಯಾದಿ ದುರಸ್ಥಿ ಕಾಮಗಾರಿ ಕೈಗೊಳ್ಳುವ ಬಗ್ಗೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರರು, ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪರಿಶೀಲಿಸಿ ಅಗತ್ಯ ಉಪಶಮನ ಕಾರ್ಯ ಕೈಗೊಳ್ಳುವ ಬಗ್ಗೆ ಸೂಕ್ತ ಅಂದಾಜು ಪಟ್ಟಿಯೊಂದಿಗೆ ವರದಿ ಸಲ್ಲಿಸಬೇಕು.

ಜಿಲ್ಲೆಯ ಪ್ರವಾಸಿಗರ ಸುರಕ್ಷತೆ ಸಂಬಂಧಿಸಿದಂತೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ದೃಷ್ಠಿಯಿಂದ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿಯ ಜಲಪಾತ ವೀಕ್ಷಣೆಯನ್ನು ಮಳೆಗಾಲ ಮುಗಿಯುವವರೆಗೆ ಪ್ರವಾಸಿಗರಿಗೆ ನಿರ್ಬಂಧವನ್ನು ತಾಲೂಕು ಮಟ್ಟದಲ್ಲಿ ತಹಶೀಲ್ದಾರರು ಅವರ ಹಂತದಲ್ಲಿ ವಿಧಿಸಿ, ಸಮುದ್ರ ತೀರದಲ್ಲಿ ಯಾರೂ ಇಳಿಯದಂತ ಪಂಚಾಯತ ನೋಡಲ್ ಅಧಿಕಾರಿಗಳ ಮಟ್ಟದಲ್ಲಿ ತಿಳುವಳಿಕೆ ನೀಡಿ ನಿರ್ಬಂಧ ಹೇರುವ ಬಗ್ಗೆ ತಾಲೂಕಿನ ತಹಶೀಲ್ದಾರ, ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತ, ಪಿಡಿಓ, ಕರಾವಳಿ ಕಾವಲು ಪಡೆ/ ಪೊಲೀಸ್ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ ಸಮನ್ವಯ ಸಾಧಿಸಿ ತಾಲೂಕು ಮಟ್ಟದಲ್ಲಿ ವ್ಯಾಪಕ ತಿಳುವಳಿಕೆ ನೀಡಲು ಸೂಚಿಸಲಾಗಿದೆ.

300x250 AD

ಗ್ರಾಮಗಳಲ್ಲಿ ನೀರು ಹೆಚ್ಚು ರಭಸವಾಗಿ ಹರಿಯುವ ನಾಲಾಗಳಿಗೆ ಗ್ರಾಮಸ್ಥರು ಅಳವಡಿಸಿಕೊಂಡ ಕಟ್ಟಿಗೆಯ ಕಾಲುಸಂಕಗಳನ್ನು ಗುರುತಿಸಿ ಸದರಿ ಕಾಲುಸಂಕಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಂಚರಿಸಲು 2 ಪೀಟ್ ಅಗಲದ ಆರ್.ಸಿ.ಸಿ ಅಳವಡಿಸುವ ಬಗ್ಗೆ ತಗಲು ವೆಚ್ಚದ ಅಂದಾಜು ವೆಚ್ಚದ ಪಟ್ಟಿಯನ್ನು ತಯಾರಿಸಿ ಇಟ್ಟುಕೊಳ್ಳಬೇಕು. ಮಳೆಗಾಲದಲ್ಲಿ ನಿಯಮಿತವಾಗಿ ಜಿಎಸ್‌ಐ ನೀಡಿದ ಭೂಕುಸಿತ ಪ್ರದೇಶ ಹಾಗೂ ತಹಶೀಲ್ದಾರರು ಗುರುತಿಸಿದ ಭೂಕುಸಿತ ಪ್ರದೇಶಗಳನ್ನು ನಿಯಮಿತವಾಗಿ ನೋಡಲ್ ಅಧಿಕಾರಿಗಳು ಪರಿಶೀಲಿಸಿ ಪ್ರತಿನಿತ್ಯ ವಾಟ್ಸಪ್ ಮೂಲಕ ತಹಶೀಲ್ದಾರರಿಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top