Slide
Slide
Slide
previous arrow
next arrow

ಹದಗೆಟ್ಟ ಮುಖ್ಯ ರಸ್ತೆ; ದುರಸ್ತಿಗಾಗಿ ಆಗ್ರಹ

300x250 AD

ದಾಂಡೇಲಿ: ನಗರದ ಹಳೆದಾಂಡೇಲಿಯ ಮುಖ್ಯರಸ್ತೆ ತೀವ್ರ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಇದೇ ಹಳೆದಾಂಡೇಲಿಯಿ0ದ ಹಳಿಯಾಳ, ಅಳ್ನಾವರಕ್ಕೆ ಕುಡಿಯುವ ನೀರು ಕೊಂಡೊಯ್ಯಲು ರಸ್ತೆ ಬದಿ ಹೊಂಡ ತೋಡಿ ಪೈಪ್‌ಗಳನ್ನು ಅಳವಡಿಸಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಯುಜಿಡಿ ಕಾಮಗಾರಿಯಿಂದಾಗಿ ಇಲ್ಲಿ ರಸ್ತೆ ಹದಗೆಟ್ಟು, ಅಲ್ಲಲ್ಲಿ ಬೃಹದ್ದಾಕಾರದ ಹೊಂಡ ಗುಂಡಿಗಳು ನಿರ್ಮಾಣವಾಗಿದೆ.

ಅದು ಇದೀಗ ಮಳೆ ಸಮಯದಲ್ಲಂತೂ ಈ ರಸ್ತೆಯ ಸ್ಥಿತಿ ಹೇಳ ತೀರದು. ಈ ರಸ್ತೆ ಅವ್ಯವಸ್ಥೆಯನ್ನು ಕೂಡಲೆ ಸರಿಪಡಿಸಿ, ದುರಸ್ತಿ ಮಾಡಿಕೊಡುವಂತೆ ನಗರದ ಹಿರಿಯ ಸಾಮಾಜಿಕ ಹೋರಾಟಗಾರರು ಮತ್ತು ಹಿರಿಯ ವರ್ತಕರಾದ ವಿಷ್ಣು ಕಾಮತ್ ಅವರು ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top