ಇಡೀ ದೇಶದಲ್ಲಿ ಯುನಿಫಾರ್ಮ್ ಸಿವಿಲ್ ಕೋಡಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲರೂ ಇದರ ಬಗ್ಗೆ ಚರ್ಚೆ ಮಾಡಬೇಕು ತಿಳಿಯಬೇಕು. ಅರ್ಜುನ್ ಪಾಂಡೆ ಈ ಚರ್ಚಾ ಕಾರ್ಯಕ್ರಮ ಆಯೋಜಿಸಿದ್ದಾರೆ.
ಯುಸಿಸಿ ಅಥವಾ ಏಕರೂಪ ನಾಗರಿಕ ಸಂಹಿತೆ ಸಂವಿಧಾನದ ರಾಜ್ಯ ನಿರ್ದೇಶಕ ತತ್ವದಡಿ ಬರುವಂಥದ್ದು. ಕೌಟುಂಬಿಕ ಸಮಸ್ಯೆಗಳನ್ನು ಇದರಿಂದ ಒಂದೇ ಕಾನೂನಡಿ ತರಲಾಗುವುದು. ಕೌಟುಂಬಿಕ ವಿಷಯಗಳು ಮದುವೆ, ಪತಿ ಪತ್ನಿ ನಡುವಿನ ಭಿನ್ನಾಭಿಪ್ರಾಯ, ಸಂತಾನದ ಅಧಿಕಾರ ಪಾಲನೆ ಪೋಷಣೆ, ಮಕ್ಕಳ ಹಕ್ಕು, ಪಿತ್ರಾರ್ಜಿತ ಆಸ್ತಿ ಹಂಚಿಕೆ ಎಲ್ಲದಕ್ಕೂ ಬೇರೆ ಬೇರೆ ಕಾನೂನುಗಳು ಇವೆ. ಇವುಗಳಿಗೆ ಹಿಂದೂ ಕಾನೂನು ಅನ್ವಯವಾಗುತ್ತದೆ. ಮುಸ್ಲಿಮರಿಗೆ ಬೇರೆ ಕಾನೂನಿದೆ.
ದೇಶದಲ್ಲಿ ಎಲ್ಲ ಕಾನೂನುಗಳು ಎಲ್ಲರಿಗೂ ಸಮಾನ. ಮದುವೆ ಆದಾಗ, ಅದರ ನಂತರ ಜಗಳ ಉಂಟಾದರೆ ಅದನ್ನು ಅದಕ್ಕೆ ಸಂಬಂಧಿಸಿದಂತೆ ಅಧಿಕಾರವನ್ನು ನಿರ್ಣಯಿಸುವುದು, ಉತ್ತರಾಧಿಕಾರ, ಮುಸ್ಲಿಂ ವೈಯುಕ್ತಿಕ ಕಾನೂನು ಷರಿಯಾ ಅಡಿ ಬರುತ್ತದೆ. ಹಿಂದೂ ಕೋಡ್’ನಲ್ಲೂ ಮದುವೆ ಸಂಬಂಧಿಸಿದ ಕಾನೂನಿದೆ. ಹಿಂದೂ ಯಾರೆಂದು ಸಂವಿಧಾನ ವ್ಯಾಖ್ಯಾನ ಮಾಡಿರುತ್ತದೆ. ಹಿಂದೂ ಅಡಿ ಸಿಖ್, ಬೌದ್ಧ, ಜೈನ್ , ಲಿಂಗಾಯತ್ ಮುಂತಾದವರು ಬರುತ್ತಾರೆ. ಸಂವಿಧಾನದ ರಚನೆ ಸಂದರ್ಭದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಇರಬೇಕು ಎಂದು ಚರ್ಚೆ ಸಾಗುತ್ತದೆ. ಆದರೆ ಅದು ಸಾಧ್ಯವಾಗದೆ ಮುಂದೆ ಕಾನೂನು ಮಾಡುವ ಸಲುವಾಗಿ ಇದನ್ನು ರಾಜ್ಯ ನಿರ್ದೇಶಕ ತತ್ವದಡಿ ತರುತ್ತಾರೆ. ಇದೇ ಯುಸಿಸಿಗೆ ಕಾರಣ. ಆದರೆ ಜನ ಇದನ್ನು ಬೇರೆ ಬೇರೆ ಥರ ಅರ್ಥೈಸುತ್ತಾರೆ. ಹಾಗಾಗಬಾರದು, ಇದನ್ನು ನಾಗರಿಕರಿಗೆಂದು ಪರಿಗಣಿಸಬೇಕೇ ಹೊರತು ಹಿಂದೂ ಮುಸಲ್ಮಾನ ಎಂದಲ್ಲ. ಕಾಯಿದೆಯ ಕರಡನ್ನು ಎಲ್ಲರೂ ಗಮನಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕು ಅರ್ಥ ಮಾಡಿಕೊಳ್ಳಬೇಕು.
ಮಧ್ಯ ಪ್ರದೇಶ ಭಾಷಣದ ಸಂದರ್ಭದಲ್ಲಿ ಮೋದಿ ಅವರು ಪಸಮಂದ್ ಸಮುದಾಯವನ್ನು ಉಲ್ಲೇಖ ಮಾಡಿದ್ದಾರೆ. ಅಶ್ರಫ್ ಸಮಾಜ ದೊಡ್ಡ ಶೋಷಣೆ ಮಾಡುತ್ತದೆ ಎಂದಿದ್ದಾರೆ. ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಲ್ಲೂ ಪಸಮಂದಾ ಸಮಾಜದವರಿಗೆ ಪ್ರಾತಿನಿಧ್ಯ ಇಲ್ಲ ಎನ್ನಲಾಗುತ್ತದೆ.
ಏನು ಇದು? ಅಶ್ರಫ್, ಪಸಮಂದಾ ಕತೆ.?
ಮುಸ್ಲಿಂ ಸಮಾಜದಲ್ಲಿ ಸಹ ಬೇರೆ ಬೇರೆ ಶ್ರೇಣಿಗಳಿವೆ. ಇವುಗಳಲ್ಲಿ ಅಶ್ರಫ್ ಸಮಾಜ ಉನ್ನತ ವರ್ಗ ಎಂದು ಕರೆಯಲಾಗುತ್ತದೆ. ಅವರೇ ಎಲ್ಲದಕ್ಕು ಮುಂದಾಳುಗಳು. ಅವರು ಆಡಳಿತಗಾರರು. ಬ್ರಿಟಿಷರ ನಂತರ ಈ ವರ್ಗದವರ ವರ್ಚಸ್ಸು ಕಡಿಮೆ ಆಯಿತು. ತಮ್ಮ ಪ್ರಭಾವವನ್ನು, ಹಿಡಿತವನ್ನು ಕಾಯ್ದುಕೊಳ್ಳಲು ಮುಸ್ಲಿಂ ಸಂಪ್ರದಾಯದ ಆಟ ಹೂಡಿದರು. ರಿಯುನಿಯನೇಶನ್ ಥೇರಿ, ಸಪರೇಟ್ ಎಲೆಕ್ಟೋರೇಟ್ ಇದರ ಭಾಗಗಳಾಗಿದ್ದವು. ಇಂದು ನಡೆಯುತ್ತಿರುವ ಮುಸ್ಲಿಂ ವಿಮರ್ಶೆ ಇದೆಲ್ಲದರ ಪರಿವರ್ತಿತ ರೂಪವೇ ಹೊರತು ಮತ್ತೇನಲ್ಲ. ಈ ಸಾಂಪ್ರದಾಯಿಕತೆಯಿಂದಾಗೇ ದೇಶ ಒಡೆಯುತ್ತದೆ. ಇದರಿಂದಾಗಿ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ವಕ್ಫ್ ಬೋರ್ಡ್, ಮದರಸಾ ಬೋರ್ಡ್ ಎಲ್ಲ ನಡೆಯುವುದು. ಈ ಅಶ್ರಫ್ಗಳು ಸಾಂಪ್ರದಾಯಿಕತೆ ಇರಲೆಂದು ಬಯಸುತ್ತಾರೆ. ಸಾಂಪ್ರದಾಯಿಕತೆ ಜೀವಂತ ಇದ್ದರೆ ಅದು ಹಿಂದೂ ಸಾಂಪ್ರದಾಯಿಕತೆ ವಿರುದ್ದ ಜಾಗೃತವಾಗಿರುತ್ತದೆ. ದಂಗೆ, ಗಲಭೆ, ಗೋಳಾಟ ಚೀರಾಟ ಎಲ್ಲ ನಡೆಯುವುದು ಈ ಹಿನ್ನೆಲೆಯಲ್ಲಿ. ನಂತರ ಇದರಿಂದಾಗುವ ತುಷ್ಟೀಕರಣ, ರಾಜಕೀಯದ ಲಾಭ ಹೋಗುವುದು ಸೀದಾ ಅಶ್ರಫಿಗಳಿಗೆ. ಈ ವಿಚಾರಕ್ಕೆ ಎಲ್ಲದಕ್ಕೂ ಅಶ್ರಫಿಗಳು ಸಂಪ್ರದಾಯದ ಬಣ್ಣ ಹಚ್ಚುತ್ತಾರೆ. ವಂದೇ ಮಾತರಂಗೂ ಕೂಡ ಹಿಂದು ಮುಸ್ಲಿಮ್ ಬಣ್ಣ ಬಳಿಯುತ್ತಾರೆ. ಅದು ಹರಾಮ್ ಎನ್ನುತ್ತಾರೆ. ಪ್ರತ್ಯೇಕತಾವಾದಿ ಮಾನಸಿಕತೆ ಇವರದ್ದು. ಪಾಕಿಸ್ತಾನ ಪಡೆದ ನಂತರವೂ ಇದು ಮುಂದುವರೆದಿದೆ. ಆಲಿಘರ್ ಮುಸ್ಲಿ0 ಯುನಿವರ್ಸಿಟಿ , ಜಮಿಯಾ ಇಸ್ಲಾಮಿಯಾ ತರಹ ಪ್ರತ್ಯೇಕ ಅಸ್ತಿತ್ವ ಬಯಸುತ್ತಾರೆ. ಇವು ಬೇರೆ ಬೇರೆ ಸಂಸ್ಥೆಗಳು, ರಾಜಕೀಯ ಪಕ್ಷಗಳನ್ನು ಕೂಡಾ ನಡೆಸುತ್ತವೆ. ಮುಸ್ಲಿಂ ಲಾ ಬೋರ್ಡ್ ಹಾಗೇ ನೋಡಿದರೆ ತೊಂಬತ್ತು ಪ್ರತಿಶತ ಮುಸ್ಲಿಮರ ಪ್ರತಿನಿಧಿಯೇ ಅಲ್ಲ. ಅದಕ್ಕೆ ಮುಸ್ಲಿಂ ಪ್ರಾತಿನಿಧ್ಯದ ನೈತಿಕ ಹಕ್ಕೂ ಇಲ್ಲ. ಇದು ಬಹುಸಂಖ್ಯಾತ ಪಸಮಂದಾ ಸಮುದಾಯದ ಜನರನ್ನು, ಮಹಿಳೆಯರನ್ನು ತನ್ನ ಭಾಗ ಆಗಿಸಿಲ್ಲ. 5% ಇರುವ ಅಶ್ರಫಿಗಳ ಪುರುಷರ ಸಂಘ ಮುಸ್ಲಿಂ ಪರ್ಸನಲ್ ಲಾ ಬೋರ್ಡ್. ಇದರಲ್ಲಿ ಚುನಾವಣೆ ಇಲ್ಲ. ಮರಣದ ನಂತರದ ಅಧಿಕಾರ ಬದಲಾವಣೆ.
ದೌರ್ಬಾಗ್ಯ ಎಂದರೆ ಮುಸ್ಲಿಂ ಲಾ ಬೋರ್ಡ್ ಅನ್ನು ಸರ್ವ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಇಂತಹ ಮುಸ್ಲಿಂ ಲಾ ಬೋರ್ಡ್ ಒಂದು ಕರಡನ್ನು ಕಾನೂನು ಆಯೋಗಕ್ಕೆ ಕಳಿಸಿದೆ.
ಮುಸ್ಲಿಂ ಶ್ರೇಣಿ ಜನರ ಮುಸ್ಲಿಮರಲ್ಲಿ ಅಶ್ರಫ್, ಅಜ್ಲಾಫ್ ಮತ್ತು ಅರ್ಜಾಲ್ ಎಂಬ ಕೆಟಗೆರಿಗಳಿವೆ. ಇವರಲ್ಲಿ ಅಶ್ರಫ್ ಎಂದರೆ ಷರೀಫ್ ಎಂದರ್ಥ. ಇವರು ಕುಲೀನ , ಶ್ರೇಷ್ಠ ವರ್ಗ ಎನಿಸಿಕೊಂಡವರು. ಅಜ್ಲಾಫ್ ಎಂಬುದು ಜಲ್ಫ್ ಶಬ್ದದ ಬಹುವಚನ. ಇವರು ಕಾರ್ಮಿಕ ವರ್ಗದ ಜನ. ಅರ್ಜಾಲ್ ರಜೀಲ್ ಶಬ್ದದ ಬಹುಚನ. ನೀಚ, ನಿಕೃಷ್ಟ ಜನರು ಎಂಬರ್ಥ ಕೊಡುತ್ತದೆ. ತೊಳೆದು ಬಳಿದು ಮಾಡುವ ಜನ ಇವರು. ಪಸಮಂದ ಸಮಾಜ ಆಂದೋಲನದಡಿ ಹುಟ್ಟಿದ್ದು ಅಜ್ಲಾಫ್ ಮತ್ತು ಅರ್ಜಾಲ್ ವರ್ಗ ಸೇರಿಸಿ ಹೇಳುವ ಶಬ್ದ. ಸರಳವಾಗಿ ಇದು ಅಶ್ರಫ್ ಮತ್ತು ಪಸಮಂದಾ (ದೇಸೀ ಜನ) ಎಂದು ಮುಸ್ಲಿಮರನ್ನು ವರ್ಗೀಕರೀಸುತ್ತದೆ.
ಹಿಂದುಗಳು ಮತಾಂತರವಾದಾಗ ಅವರು ಅಶ್ರಫಿಗಳಾಗುತ್ತಾರಾ? ಅಜ್ಲಾಫ್ ಅಥವಾ ಅರ್ಜಾಲ್ ಅಡಿ ಬರುತ್ತಾರಾ.? ಸವರ್ಣೀಯರು ಅಂದರೆ ರಜಪೂತರು, ಬ್ರಾಹ್ಮಣರು ಇಂಥವರು ಮತಾಂತರಗೊಂಡಾಗ ಅಶ್ರಫಿಗಳಾಗುತ್ತಾರೆ. ಅಶ್ರಫಿಗಳ ಜೊತೆ ಸಂಬಂಧ ಬೆಳೆಸುತ್ತಾರೆ, ಸಮಾನ ಸಾಮಾಜಿಕ ಸ್ಥಾನಮಾನ ಪಡೆಯುತ್ತಾರೆ.
ಇಸ್ಲಾಮಿನಲ್ಲಿ ಜಾತಿ ಪದ್ಧತಿ ?
ಇಸ್ಲಾಮಿನ ಜಾತಿ ಪದ್ಧತಿಯು ಅರಬ್ಬರಿಂದ ಬಂದದ್ದು. ಹುಟ್ಟಿನೊಡನೆ ಒಂದು ಕೆಲಸಕ್ಕೆ ಸಂಬಂಧ ಪಟ್ಟು ಜಾತಿ ಬರುತ್ತದೆ. ಅರಬರಲ್ಲಿ ಜನ್ಮಜಾತ ಭೇದಭಾವ ಇತ್ತು. ಇದನ್ನು ನಸ್ಲವಾದ ಎನ್ನುತ್ತಾರೆ. ಅದು ಮೊದಲೇ ಇತ್ತು. ಇದರ ಕುರಿತು ವಿರೋಧ ಸಹ ಎದ್ದಿತ್ತು ಎಂದು ತಿಳಿದು ಬರುತ್ತದೆ. ಹದೀಸ್ ನಲ್ಲಿಯೂ ಕೂಡ ಒಂದು ಕಡೆ ಜಾತಿವಾದ, ಜಾತಿ ವಿರೋಧ ಎರಡೂ ಕಂಡು ಬರುತ್ತದೆ.
ಮುಸ್ಲಿಮರ ಮೊದಲ ಖಲೀಫ ಚುನಾಯಿಸಿದ್ದು ನಸಲ್ ( ಹುಟ್ಟಿನ) ಆಧಾರದ ಮೇಲೆ. ಗುಣ ಆಧರಿಸಿ ಅಲ್ಲ. ಅಶ್ರಾಫ್, ಸೈಯದ್, ಖುರೇಶಿ ಆದವರು ಮಾತ್ರ ಖಲೀಫರಾಗಲು ಅರ್ಹ ಅನ್ನುತ್ತಾರೆ. ಖಿಲಾಫತ್ ಚಳುವಳಿ ಕೂಡಾ ಹುಟ್ಟಿನ ಶದ್ರೆಷ್ಠತೆ ಆಧರಿಸಿದ ತಾ ಮೇಲೆ ತಾ ಮೇಕು ಎಂಬ ಹೋರಾಟವೇ. ಹಾಗಾಗಿ ಭಾರತದ ಬ್ರಾಹ್ಮಣರು, ಇಲ್ಲಿನ ಜಾತಿ ವ್ಯವಸ್ಥೆ ಕಂಡು ಮುಸ್ಲಿಮರ ಜಾತಿ ವ್ಯವಸ್ಥೆ ಉಂಟಾಗಿದ್ದಲ್ಲ. ಅದು ಮೊದಲೇ ಇದ್ದದ್ದು. ಅವರಿಲ್ಕಿಗೆ ಬಂದಾಗ ಇಲ್ಲಿನ ವರ್ಣ ಜಾತಿ ವ್ಯವಸ್ಥೆ ಬಂದಾಗ ಸ್ವೀಕೃತ ಆಗಿದೆ. ಭಾರತದ ಮುಸ್ಲಿರ ವರ್ಣ ಜಾತಿ ವ್ಯವಸ್ಥೆಗೆ ಬ್ರಾಹ್ಮಣರು ಕಾರಣ ಎಂದು ಸುಖಾ ಸುಮ್ಮನೆ ದೂರುತ್ತಾರೆ. ಇದು ತಪ್ಪು. ಹೀಗಾಗಿ ಮತಾಂತರವಾದ ಪಸಮಂದಾ ಸಮುದಾಯ ಹಿಂದು ಪದ್ಧತಿಯ ಜಾತಿ ವ್ಯವಸ್ಥೆ ಒಡನೇ ಬಂದರು ಎಂದು ಜರಿಯುವುದು ತಪ್ಪು. ಜಾತಿವ್ಯವಸ್ಥೆ ಪೀಡಿತರಾಗಿದ್ದವರು ಇಲ್ಲಿಗೆ ಯಾಕೆ ಜಾತಿ ಇಟ್ಟುಕೊಂಡು ಬರುತ್ತಾರೆ? ಬಿಟ್ಟೇ ಅಲ್ಲವೇ ಮತಾಂತರ ಆಗುವುದು.?
ಇದೊಂದು ಸುಳ್ಳು. ಮುಸ್ಲಿಂ ಜಾತಿವಾದ ಅರಬಿಸ್ತಾನದಿಂದ ಬಂದಿದೆ.
ಪಸಮಂದಾ ಸಮಾಜ ತಾರತಮ್ಯ ಅನುಭವಿಸುತ್ತಿದೆ.ಅವರಿಗೇ ಅಶ್ರಫಿಗಳ ಮಸೀದಿ ಅಲ್ಲ. ಅವರ ಮಸೀದಿ ಬೇರೆ. ಖಬರಸ್ತಾನವೂ ಬೇರೆ. ಬೇರೆ ಬೇರೆ ಜಾತಿಯವರ ಸ್ಮಶಾನ ಪ್ರತ್ಯೇಕ. ಆಜಂಘಡ, ಬನಾರಸ್, ಲಕ್ನೋ ಎಲ್ಲ ಕಡೆ ಅಶ್ರಫಿಗಳ, ಪಸಮಂದಾಗಳ ಬೇರೆ ಬೇರೆ ಮಸೀದಿ ಕಾಣಸಿಗುತ್ತವೆ. ಜಾತಿಗತವಾಗಿ ಮಸೀದಿ ಇದೆ, ಎಲ್ಲರೂ ಅಲ್ಲಿ ನಮಾಜು ಮಾಡುವುದೂ ನಡೆಯುತ್ತದೆ. ಹಿಂದೂ ಸ್ನೇಹಿತರು ಮನೆಗೆ ಬಂದು ಉಟೋಪಹಾರ ಸೇವಿಸುತ್ತಾರೆ, ಆದರೆ ಮುಸ್ಲಿಂ ರು ಜಾತಿ ಮೀರಿ ಉಚ್ಚ ನೀಚ ಮನೆಗೆ ಹೋಗಲು ಹಿಂದೇಟು ಹಾಕುತ್ತಾರೆ.
ಇಸ್ಲಾಮಿನಲ್ಲಿ ಧರ್ಮದ ಸಂಪ್ರದಾಯದ, ವೈಚಾರಿಕ ರೂಪದಿಂದಲೂ ಭಿನ್ನತೆ ಇದೆ. ಅದು ಶಿಯಾ ಸುನ್ನಿ ಪಂಗಡವಾಗಿ ಗುರುತಿಸಲ್ಪಡುತ್ತದೆ. ಶಿಯಾದೊಳಗೆ ಇಸ್ನಾ ಶರೀ, ಖೋಜಾ, ಬೋಹ್ರಾ, ಜೈತಿ, ಇಸ್ಮಾಯಿಲಿ ವಿಧಗಳಿವೆ. ಸುನ್ನಿಯಲ್ಲಿ ದೇವಬಂದಿ, ವಹಾಬಿಗಳು ಬರುತ್ತಾರೆ. ಇವರ ಮಸೀದಿಗಳು ಬೇರೆ ಬೇರೆ ಆಗಿರುತ್ತವೆ. ಒಂದು ಹುಟ್ಟಿನ, ಜಾತಿಯ ಭೇದ ಇನ್ನೊಂದು ವೈಚಾರಿಕ ಭೇದ.
ಹಲಾಲಾ ಮಾಡುವ ಮೌಲ್ವಿಗಳೂ ಸಹ ಅಶ್ರಫಿ ಸಮಾಜದವರೇ. ಯುಸಿಸಿ ಬಂದರೆ ಹಲಾಲಾ ಮಾಡುವ ಅವರ ದಂಧೆ ಸ್ಥಗಿತವಾಗುತ್ತದೆಂಬ ಭಯ ಅವರಲ್ಲಿ ಮನೆ ಮಾಡಿದೆ. ಧಾರ್ಮಿಕ ಕಾನೂನುಗಳು ಬಹಳ ಹಿಂದೆ ಮಾಡಿದಂಥವುಗಳು. ಅಲ್ಲಿ ಪಿತೃವಾದವೂ (ಪೆಟ್ರಿಯಾರ್ಕಿ) ಕಾಣುತ್ತದೆ.
ಯುನಿಫಾರ್ಮ್ ಸಿವಿಲ್ ಕೋಡ್ ಬಂದ ಬಳಿಕ ಕೇವಲ ಅದು ಮುಸ್ಲಿಮರಿಗಲ್ಲ, ಹಿಂದೂಗಳಿಗೂ ಅನ್ವಯವಾಗುತ್ತದೆ. ಹಿಂದೂ ಸಂಹಿತೆ ಕಾನೂನು ರದ್ದಾಗುತ್ತದೆ. ಷರಿಯಾ ಕಾನೂನೂ ಅಮಾನತ್ತಾಗುತ್ತದೆ. ಭಾರತ ಸೆಕ್ಯುಲರ್ ರಾಷ್ಟ್ರವಾಗುತ್ತದೆ. ಮುಸ್ಲಿಮರಿಗೆ ಇದರ ಪರಿಣಾಮ ಜಾಸ್ತಿ ಏಕೆಂದರೆ ಈಗಲೂ ಸಹ ಮುಸ್ಲಿಮರಿಗೆ ಅನ್ವಯವಾಗುವುದ ನೂರೈವತ್ತು ವರ್ಷ ಹಿಂದಿನ ಕಾನೂನು. ಆದರೆ ಹಿಂದೂ ಸಂಹಿತೆ ಒಂದಷ್ಟು ಸುಧಾರಣೆ ಹೊಂದಿದ ಕಾನೂನು, ಅಷ್ಟು ಹಳತಲ್ಲ. ಯಾಜ್ಞವಲ್ಕ್ಯ ಸ್ಮೃತಿಗೆ ಮಿತಾಕ್ಷರನ ಟಿಪ್ಪಣಿ ಬರೆದಂತೆ, ಮನುಸ್ಮೃತಿಯನ್ನು ಸುಧಾರಿಸಲಾಗಿದೆ, ಇನ್ನಷ್ಟು ಸುಧಾರಣೆಯ ಅವಶ್ಯಕತೆಯೂ ಇದೆ.
ಭಾರತೀಯ, ಹಿಂದೂ ಅಥವಾ ಪಸಮಂದಾ ಸಂಸ್ಕೃತಿಯಲ್ಲಿ ಹುಡುಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಹೊಂದುವುದಿಲ್ಲ. ಪಸಮಂದ ಕಾನೂನು ಪ್ರಕಾರ 25% ಹುಡುಗಿಗೆ ಸಿಗುತ್ತದೆ. ಹಿಂದೂ ಕೋಡ್ ಬಿಲ್ ಪ್ರಕಾರ ಅರ್ಧ ಪಾಲು ಹುಡುಗಿಯದಾಗುತ್ತದೆ. ಆದರೆ ನಮ್ಮ ಸಂಸ್ಕೃತಿ ಪ್ರಕಾರ ಬಹುತೇಕ ಹೆಣ್ಣುಮಕ್ಕಳು ಪಾಲು ಪಡೆಯುವುದಿಲ್ಲ. ಹಾಗೆ ಪಾಲು ಪಡೆಯುವುದು ತಪ್ಪೆಂಬ ಭಾವನೆ ಅನೇಕ ಹೆಣ್ಣು ಮಕ್ಕಳಿಗಿದೆ. ಅದು ಪಾಪ ಎಂದು ಭಾವಿಸುತ್ತಾರೆ. ಅದೊಂದು ಸಂಸ್ಕೃತಿ.
ಸಂಸ್ಕೃತಿಯ ಪ್ರಶ್ನೆ ಬಂದಾಗ ಅಶ್ರಫಿ ಸಂಸ್ಕೃತಿ ಅರೇಬಿಯನ್ ಇರಾನೀ ಸಂಸ್ಕೃತಿ, ಭಾರತ ನೆಲದ್ದಲ್ಲ. ಹೇಗೆ ನಿಜವಾದ ಭಾರತೀಯರು ತಮ್ಮ ದೇಶೀ ಸಂಸ್ಕೃತಿ ಬಿಟ್ಟು ಕೊಡುತ್ತಾರೆ ? ನಿಜವಾದ ಮುಸಲ್ಮಾನನಾಗಿದ್ದರೂ ಒಬ್ಬ ಮುಸ್ಲಿಂ ಹೆಣ್ಣುಮಗಳ ಜೊತೆಗೇ ಇನ್ನೊಬ್ಬಳನ್ನು ಇಟ್ಟುಕೊಂಡಿರುವುದನ್ನು ಸಹಿಸುವುದಿಲ್ಲ. ಇಸ್ಲಾಂ ನಲ್ಲಿ ಬಹು ಪತ್ನಿತ್ವಕ್ಕೆ ಅವಕಾಶವಿದ್ದರೂ ಸಹ ಎಲ್ಲರೂ ಅದನ್ನು ಬಯಸುವುದಿಲ್ಲ. ಇದು ಪಸಮಂದಾ ದೇಸೀ ಸಂಸ್ಕೃತಿ. ಅಶ್ರಫಿ ಸಂಸ್ಕೃತಿಯಲ್ಲಿ ಚಿಕ್ಕ ಮಗು ಬಿಳಿ ಗಡ್ಡದ ಮುದುಕ ತಂದೆ !! ಆದರೆ ಪಸಮಂದಾ ಸಂಸ್ಕೃತಿ ಇದನ್ನು ಸ್ವೀಕರಿಸುವುದಿಲ್ಲ. ಇಸ್ಲಾಂಧರ್ಮವೇ ಆದರೂ ಸಹ ಹೀಗೆ ಸಂಸ್ಕೃತಿ ಭಿನ್ನವಾಗಿರುತ್ತದೆ.
ಯುಸಿಸಿಯಲ್ಲಿ ಸಂಸ್ಕೃತಿಗೂ ಸಹ ಮಾನ್ಯತೆ ಕೊಟ್ಟು ಕಾನೂನು ರಚನೆ ಮಾಡಬೇಕು ಎನ್ನುವುದು ಒಂದು ಅಭಿಪ್ರಾಯ.
ಹಿಂದೂ ಕೋಡ್ ಬಿಲ್ ಬಂದಾಗಲೂ ಚರ್ಚೆಗಳಾಗಿದ್ದವು. ಅವಿಭಕ್ತ ಕುಟುಂಬದ ಹಿಂದೂಗಳಿಗೆ ತೆರಿಗೆ ವಿನಾಯಿತಿ ಇದೆ, ಆದರೆ ಮುಸ್ಲಿಮರಿಗೆ ಇಲ್ಲ. ಆದರೆ ಧರ್ಮದ ಆಧಾರದ ಮೇಲಕೆ ತಾರತಮ್ಯವನ್ನು ಮಾಡಬಾರದೆಂದು ಸಂವಿಧಾನ ಹೇಳುತ್ತದೆ. ಇದನ್ನು ಯಾರೂ ಹೇಳುತ್ತಿಲ್ಲ. ಇದೂ ಸಹ ಮುಸ್ಲಿಮರಿಗೆ ಆಗುವ ಅನ್ಯಾಯವಲ್ಲವೇ?
ಎಲ್ಲರಿಗೂ ಸಹ ಇದು ಲಾಗೂ ಆಗುವ ಪರಿಷ್ಕೃತ ಕಾನೂನು ಎಲ್ಲರೂ ಸ್ವಾಗತಿಸಬೇಕಾದ ಕಾನೂನು ಷರಿಯಾ ಕಾನೂನು ಹಳೆಯ ಕಾನೂನು . ಅಪಾರ ತಾರತಮ್ಯ ಇದೆ. ಒಂದು ಉದಾಹರಣೆ. ತಾತ, ಮಗ, ಮೊಮ್ಮಗ ಒಂದು ಕುಟುಂಬಲ್ಲಿದ್ದಾಗ, ಒಂದು ವೇಳೆ ತಾತನ ಜೀವಿತಾವಧಿಯಲ್ಲಿ ಅವನ ಮಗ (ಮೊಮ್ಮಗನ ತಂದೆ) ಮೃತನಾದರೆ ಅಜ್ಜನ ಆಸ್ತಿ ಮೊಮ್ಮಗನಿಗೆ ಸಿಗುವುದಿಲ್ಲ.ಮೊಮ್ಮಗ ಇದ್ದರೂ ಅಪ್ಪಸತ್ತರೆ ಅಜ್ಜನ ಪಿತ್ರಾರ್ಜಿತ ಆಸ್ತಿಯಲ್ಲಿ ಮೊಮ್ಮಗನಿಗೇನೂ ಸಿಗುವುದಿಲ್ಲ. ಇದು ನೇರವಾಗಿ ಪುರುಷ ಮುಸ್ಲಿಮಮರಿಗೂ ಷರಿಯಾದಿಂದ ತಾರತಮ್ಯ ಅಲ್ಲದೇ ಮತ್ತೇನು ? ಇದೇ ವಿಷಯ ಹೇಳಿದರೆ ಸ್ವತಃ ಮುಸ್ಲಿಮರು, ಪಸಮಂದಿದಾರರು ಬೆಂಬಲ ಕೊಡುತ್ತಾರೆ. ಹೀಗಾಗಿ ಯುಸಿಸಿ ವಿಚಾರದಲ್ಲಿ ಇಸ್ಲಾಂ ಸಂಕಟ ದಲ್ಲಿದೆ, ಹಿಂದೂಗಳ ಮೇಲುಗೈ ಆಗುತ್ತದೆ ಎನ್ನುವುದೆಲ್ಲ ತಪ್ಪು.
ಯುಸಿಸಿ ಬಗ್ಗೆ ತಿಳಿ ಹೇಳುವುದು ಅಶ್ರಫ್ ಸಮುದಾಯದ ನೈತಿಕ ಹೊಣೆ. ರಾಜಕೀಯ ಸ್ವಾರ್ಥಕ್ಕಾಗಿ ಮೌಲ್ವಿ, ನಟರು, ರಾಜಕಾರಣಿಗಳೇ ಮೊದಲಾಗ ಅಶ್ರಫಿಗಳು ಯುಸಿಸಿ ವಿರುದ್ಧ ಭ್ರಮೆ ಹರಡುತ್ತಿದ್ದಾರೆ ಅಷ್ಟೇ. ಬಡಬಡಿಸುತ್ತಿದ್ದಾರೆ.
ಮುಸ್ಲಿಂ ವೈಯುಕ್ತಿಕ ಕಾನೂನೇ ಅನ್ವಯವಾದರೆ ತಾರತಮ್ಯದ ಕಂದರ ಮತ್ತಷ್ಟು ದೊಡ್ಡದಾಗುತ್ತದೆ. ಷರಿಯಾ ಸಾವಿರಾರು ವರ್ಷದ ಕಾನೂನು. ಯಾರ್ಯರೋ ಕುಳಿತು ಮಾಡಿದ ದಸ್ತಾವೇಜು. ಒಬ್ಬ ವ್ಯಕ್ತಿ ಮಾಡಿದ್ದಲ್ಲ. ಖುರಾನಿನಂತಲ್ಲ. ಖುರಾನ್ ಒಂದೇ ಇದೆ. ಬೇರೆ ಬೇರೆ ಇಲ್ಲ. ಜಗತ್ತಿನಲ್ಲಿ ಎಲ್ಲಿ ಹೋದರೂ ಖುರಾನ್ ಒಂದೇ. ಆದರೆ ಷರಿಯಾ ಹಾಗಲ್ಲ, ಅದು ಬದಲಾಗುತ್ತದೆ. ಭಾರತದಲ್ಲೇ ಕಡಿಮೆ ಎಂದರೂ ನೂರು ಪ್ರಕಾರದ ಷರಿಯಾ ಇದೆ. ಮುಖ್ಯವಾಗಿ ನಾಲ್ಕು ವಿಧ. ಹನ್ಫಿ, ಮಾಲಕೀ, ಹಂಬಲೀ ,ಷಾಫೈ ಎಂದು. ನೂರಾರು ಷರಿಯಾಗಳಿದ್ಧರೆ ಅದು ಅಲ್ಲಾ ಸೃಷ್ಟಿಸಿದ್ದು ಹೇಗಾಗುತ್ತದೆ. ? ಸೌದಿಯ ಷರಿಯಾ ಒಂದು, ಇರಾನಿನ ಷರಿಯಾ ಒಂದು, ಭಾರತದ ಷರಿಯಾ ಬೇರೆ. ಈ ಷರಿಯಾ ಮಾನವಕೃತ. ಇದೇ ಕೆಲಸ ಕಾನೂನು ಆಯೋಗ ಮಾಡುತ್ತದೆ. ಇದರಲ್ಲಿ ದಿಕ್ಕತ್ತೇನು? ಷರಿಯಾವನ್ನು ಪವಿತ್ರ, ಎಂಬಿತ್ಯಾದಿ ಮಿಥ್ಯಾಚಾರ ಹಬ್ಬಿಸಿ ಅಶ್ರಫ್ ಸಮಾಜದ ಹಿಡಿತ ಹಾಗೇ ಇಡುವ ಹುನ್ನಾರ ಯುಸಿಸಿ ವಿರೋಧದ ಹಿಂದಿದೆ. ಇದರಿಂದ ಅಶ್ರಫಿಗಳಿಗೇ ಲಾಭ ಹೊರತು ಸಮಸ್ತ ಮುಸ್ಲಿಮರಿಗಲ್ಲ.
ಯುಸಿಸಿ ಬರುವುದರಿಂದ ಕೇವಲ ಪಸಮಂದ ಜನಕ್ಕಲ್ಲದೇ ಅಶ್ರಫಿ ಮಹಿಳೆಯರಿಗೂ ಅನುಕೂಲ ಆಗಲಿದೆ.
ಯುಸಿಸಿಯಿಂದ ಸೆಕ್ಯುಲರ್ ಭಾವನೆಗೆ ಧಕ್ಕೆ ಆಗುತ್ತದೆಂಬ ವಿವಾದ ಎಬ್ಬಿಸಿದ್ದಾರೆ. ಸೆಕ್ಯುಲರಿಸಂ ಎಂದು ಬೊಬ್ಬಿಡುವವರು, ಸಂವಿಧಾನ ಅಂತ್ಯವಾಗುತ್ತದೆ ಎಂದೆಲ್ಲ ಮೋದಿ ವಿರೋಧಿಸಿದವರು ಕಾನೂನು ತಂದರೂ ಅಪಸ್ವರ ಎತ್ತುತ್ತಾರೆ. ಇದು ಸಂವಿಧಾನಕ್ಕೆ ಅಪಚಾರ. ಸಂವಿಧಾನದ ಹತ್ತೊಂಬತ್ತನೆಯ ವಿಧಿ ಸೆಕ್ಯುಲರಿಸಂ ಎಂದರೇನು ಎಂದು ಹೇಳುತ್ತದೆ. ಅದರಲ್ಲಿ ಧರ್ಮದ ಆಧ್ಯಾತ್ಮಿಕ ಸ್ವರೂಪ ಸ್ವೀಕರಿಸಲು ಮಾನ್ಯತೆ ಇದೆ. ಅದರಂತೆ ದೇಗುಲಕ್ಕೆ ಸಂಬಂಧಿಸಿದ ಹೋಗಿ ಆರತಿ ಬೆಳಗಲು, ದೀಪ ಹಚ್ಚಲು, ಘಂಟೆ ಬಾರಿಸಲು ಅಥವಾ ಮಸೀದಿಗೆ ಹೋಗಿ ನಮಾಜು ಮಾಡಲು , ಮಿಲಾತ್ ಮಾಡಲು ಸ್ವಾತಂತ್ರ್ಯ ಇದೆ.
ಯಾವುದೇ ನಾಗರಿಕನ ಹಕ್ಕು ಮೊಟಕಾದರೆ ಸರ್ಕಾರ ಅವರನ್ನು ರಕ್ಷಿಸಬೇಕು. ಧರ್ಮದ ಹೆಸರಲ್ಲಿ ಅನ್ಯಾಯ ಸಲ್ಲದು. ಇನ್ನೊಂದು ಷರಿಯಾ ಕಾನೂನಿನ ಉದಾಹರಣೆ: ಒಬ್ಬನಿಗೆ ಮಗಳಿದ್ದರೆ, ಆತನ ನಂತರ ಆತನ ಆಸ್ತಿಯ 25% ಮಾತ್ರ ಅವನ ಮಗಳಿಗೆ ಸೇರುತ್ತದೆ. ಉಳಿದದ್ದು ಅವನ ಸಹೋದರರಿಗೆ, ಸಹೋದರರು ಇಲ್ಲದಿದ್ದರೆ ದೊಡ್ಡಪ್ಪ/ ಚಿಕ್ಕಪ್ಪನ ಮಕ್ಕಳಿಗೆ ಸೇರುತ್ತದೆ. ಇದೇ ವಿಷಯ ಭಾರತದ ಕಾನೂನು ಪ್ರಕಾರ ಸಮಸ್ತ ಆಸ್ತಿ ತಂದೆಯ ನಂತರ ಅವನ ಮಗಳ ಹಕ್ಕು.
ಒಂದು ವೇಳೆ ಒಬ್ಬ ವ್ಯಕ್ತಿ ಇನ್ನೊಬ್ಬನ ಹತ್ಯೆ ಮಾಡಿದರೆ, ಅವನ ಅಪ್ಪ ಅಣ್ಣ ತಮ್ಮ ಯಾರೂ ಕೇಸು ಹಾಕದಿದ್ದರೂ ರಾಜ್ಯ ಸರ್ಕಾರ ಪ್ರಕರಣ ದಾಖಲಿಸುತ್ತದೆ. ಏಕೆಂದರೆ ಆತ ಕೊಂದಿದ್ದು ರಾಜ್ಯದ ನಾಗರಿಕ ಓರ್ವನನ್ನು. ಈ ಕಾರಣಕ್ಕೆ ಕಾನೂನು ತಿಳಿಯಬೇಕು. ಯಾರದ್ದಾದರೂ ಹಕ್ಕಿಗೆ ಚ್ಯುತಿ ಬಂದರೆ , ಅಧಿಕಾರದ ಹನನವಾದರೆ ರಾಜ್ಯ ನೆರವಿಗೆ ಧಾವಿಸಬೇಕು. ಅದು ಸರ್ಕಾರದ ಕರ್ತವ್ಯ. ರಾಜ್ಯ ದ ಪರಿಕಲ್ಪನೆ ಅಂತಹದ್ದು. ಹಾಗಿಲ್ಲದಿದ್ದರೆ ಅದು ಅರಾಜಕತೆಯಾಗುತ್ತದೆ. ಅವರಿಷ್ಟ ಬಂದ ಹಾಗೆ ಅವರು ಮಾಡುವುದು, ಇವರಿಗಿಷ್ಟ ಬಂದಂತೆ ಇವರು ನಡೆದುಕೊಂಡರೆ ?
ಮೊದಲು ನರಬಲಿ ಕೊಡುತ್ತಿದ್ದರು. ಇದು ಧಾರ್ಮಿಕ ವಿಷಯ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ ಎನ್ನಲು ಬರುವುದಿಲ್ಲ. ಅದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಇಲ್ಲಿ ಸರ್ಕಾರದ ಪಾತ್ರ ಬರುತ್ತದೆ. ಪಾಕಿಸ್ತಾನ ಇಸ್ಲಾಮಿಗಳಿಗಾಗೇ ಮಾಡಿದ್ದು ಅಲ್ಲಿಯೇ ಈಗ ಷರಿಯ ಕಾನೂನಿಲ್ಲ ಎನ್ನುತ್ತಾರೆ. ಪಾಕಿಸ್ತಾನದಲ್ಲಿಯೂ ತೀನ್ ತಲಾಖ್ ನಂತಹ ಸಮಸ್ಯೆಗಳನ್ನು ಸುಧಾರಣೆ ಮಾಡಿದ್ದಾರೆ. ವಾಸ್ತವವಾಗಿ ಪಾಕಿಸ್ತಾನ ಇಸ್ಲಾಮಿಗಾಗೂ ಮಾಡಿದ್ದಲ್ಲ, ಮುಸ್ಲಿಮರಿಗಾಗಿ ಮಾಡಿದ್ದು ಅಲ್ಲ. ಇದು ಅಶ್ರಫ್ ಸಮುದಾಯದ ಆಟ ಅಷ್ಟೇ. ಅದು ಮುಸ್ಲಿದೇಶವೇ ಆಗಿದ್ದರೆ ಎಂದೋ ಷರಿಯಾ ಅಡಿ ಬರುತ್ತಿತ್ತು.
ಇಂದಿಗೂ ಕೆಲ ಜನರಿಗೆ ಧರ್ಮದೊಂದಿಗೆ ಕೊಡುಕೊಳತಿ ಇಲ್ಲ. ಆದಾಗ್ಯೂ ಧರ್ಮದ ಹೆಸರಲ್ಲಿ ತಮ್ಮ ನೆಲೆ ಭದ್ರ ಪಡಿಸಿಕೊಳ್ಳುವು ಯತ್ನ ನಡೆಸುತ್ತಾರೆ. ಇದನ್ನು ಪಸಮಂದಾ ಸಮುದಾಯ ಅರಿಯಬೇಕು. ಹೋ ಎಂದು ದೊಣ್ಣೆ ಹಿಡಿದು ಹೊರಡುವುದಲ್ಲ. ಜನರಿಗೆ ಯುಸಿಸಿ ಎಂದರೇನು ಎಂದು ತಿಳಿಸಬೇಕಾಗಿದೆ. ತಪ್ಪು ತಿಳುವಳಿಕೆ ತೊಡೆಯಬೇಕಾಗಿದೆ. ಇದು ಎಲ್ಲರ ಜವಾಬ್ದಾರಿ. ಇದು ಸರ್ಕಾರದ ಮುಖ್ಯ ಹೊಣೆಗಾರಿಕೆ. ಓದಿದವರ ಜವಾಬ್ದಾರಿ.