ಗೋಕರ್ಣ: ಸತತ ಮಳೆಯ ಹಿನ್ನೆಲೆಯಲ್ಲಿ ಗೋಕರ್ಣದ ಸುತ್ತಮುತ್ತಲಿನ ಭಾಗಗಳಲ್ಲಿ ಸಾಕಷ್ಟು ಸಣ್ಣಪುಟ್ಟ ಹಾನಿಗಳು ಸಂಭವಿಸಿದ್ದು, ಇಲ್ಲಿಯ ಪ್ರಮುಖ ಕಡಲ ತೀರದ ಈಶ್ವರ ಅಂಬಿಗ ಎನ್ನುವವರ ಮನೆಯ ಗೋಡೆ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಯಾರೂ ಇಲ್ಲದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ.
ಗೋಕರ್ಣದ ಕಡಲತೀರದಲ್ಲಿರುವ ಸಮೀಪದ ತೆಂಗಿನ ಮರಗಳು ಧರೆಗುರುಳಿವೆ. ಇನ್ನು ಗಂಗಾವಳಿ ನದಿಯ ತುಂಬಿ ಹರಿಯುತ್ತಿರುವದರಿಂದ ಅಪಾಯದ ಮಟ್ಟವೂ ಕೂಡ ಹೆಚ್ಚಾಗುತ್ತಿದೆ. ಇದರಿಂದಾಗಿ ಸ್ಥಳೀಯ ಗ್ರಾ.ಪಂ.ನವರು ನದಿತೀರದ ನಿವಾಸಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.