ಶಿರಸಿ: ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ, ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀನಿಕೇತನ ಶಾಲೆ ಇಸಳೂರಿನಲ್ಲಿ ಜುಲೈ 26, ಬುಧವಾರದಂದು ‘ಕಾರ್ಗಿಲ್ ವಿಜಯ ದಿವಸ’ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀನಿಕೇತನ ಶಾಲೆಯ ಪ್ರಾಂಶುಪಾಲ ವಸಂತ್ ಭಟ್ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿದರು ಹಾಗೂ ಉಪಪ್ರಾಂಶುಪಾಲರಾದ ಶ್ರೀಮತಿ ವಸುಧಾ ಹೆಗಡೆ ಕಾರ್ಗಿಲ್ ಯುದ್ಧಕ್ಕೆ ಕಾರಣ ಹಾಗೂ ಅದರ ಪರಿಣಾಮಗಳ ಕುರಿತು ತಿಳಿಸಿದರು. “ಕಾರ್ಗಿಲ್ ಯೋಧರ ಜೀವನವೇ ನಮಗೆಲ್ಲರಿಗೂ ಸ್ಪೂರ್ತಿ” ಎಂದು 9ನೇ ತರಗತಿಯ ವಿದ್ಯಾರ್ಥಿನಿ ಸ್ಪೂರ್ತಿ ಹೆಗಡೆ ಭಾಷಣ ಮಾಡಿದರು. ಹಾಗೂ 10ನೇ ತರಗತಿಯ ವಿದ್ಯಾರ್ಥಿ ಹರ್ಷಿತ್ ಭಾಗವತ್ ಕಾರ್ಯಕ್ರಮವನ್ನು ನಿರೂಪಿಸಿದರು.