ಶಿರಸಿ: ತಾಲೂಕಿನ ಮತ್ತಿಘಟ್ಟದಲ್ಲಿ, ಮತ್ತಿಘಟ್ಟ ಮುಖ್ಯರಸ್ತೆಯಿಂದ ಗುಂಡಪ್ಪೆ, ಮಾಡಮನೆಗೆ ಹೋಗುವ ರಸ್ತೆ ಕುಸಿದಿದೆ. ಈ ಕುಸಿತ ಮುಂದುವರೆದರೆ ಮತ್ತಿಘಟ್ಟ ಕೆಳಗಿನಕೇರಿಯ 25 ಮನೆಗಳಿಗೆ ಸಂಪರ್ಕ ಪೂರ್ಣವಾಗಿ ಬಂದ್ ಆಗಲಿದೆ. ಇದು ಪಂಚಾಯತ ರಸ್ತೆಯಾಗಿದ್ದು ದೇವನಳ್ಳಿ ಪಂಚಾಯತದ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಧಿಕಾರಿಗಳು ಶೀಘ್ರವಾಗಿ ರಸ್ತೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಮತ್ತಿಘಟ್ಟದ ಗುಂಡಪ್ಪೆ, ಮಾಡಮನೆ ರಸ್ತೆ ಕುಸಿತ: ಕ್ರಮ ಕೈಗೊಳ್ಳಲು ಆಗ್ರಹ
