• Slide
  Slide
  Slide
  previous arrow
  next arrow
 • ಮಳೆಯಿoದಾಗಿ ತುಂಬಿ ಹರಿಯುತ್ತಿರುವ ವಿಭೂತಿ ಫಾಲ್ಸ್ : ಪ್ರವಾಸಿಗರಿಗೆ ನಿಷೇಧ

  300x250 AD

  ಗೋಕರ್ಣ : ಸತತ ಮಳೆಯ ಹಿನ್ನೆಲೆಯಲ್ಲಿ ಇಲ್ಲಿಯ ಸಮೀಪದ ಮಾಬಗೆಯಲ್ಲಿರುವ ವಿಭೂತಿ ಫಾಲ್ಸ್ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಸ್ಥಳೀಯ ಅಚವೆ ಗ್ರಾಮ ಪಂಚಾಯತದವರು ವಿಭೂತಿ ಫಾಲ್ಸ್ಗೆ ತೆರಳುವುದನ್ನು ನಿಷೇಧಿಸಿದ್ದಾರೆ.
  ಶಿರಸಿ ಮಾರ್ಗವಾಗಿ ಯಾಣಕ್ಕೆ ತೆರಳಿ ದರ್ಶನ ಪಡೆದು ದಾರಿ ಮಧ್ಯದಲ್ಲಿ ಸಿಗುವ ವಿಭೂತಿ ಫಾಲ್ಸ್ಗೆ ತೆರಳಿ ನಂತರ ಅಲ್ಲಿಂದ ಭಕ್ತರು ಗೋಕರ್ಣಕ್ಕೆ ಆಗಮಿಸುತ್ತಿದ್ದರು. ಆದರೆ ಸತತ ಮಳೆಯಿಂದಾಗಿ ವಿಭೂತಿ ಫಾಲ್ಸ್ನಲ್ಲಿ ನೀರು ಅಪಾಯಕಾರಿಯಾಗಿ ಹರಿಯುತ್ತಿದೆ. ಇದರಿಂದ ಎಚ್ಚೆತ್ತ ಸ್ಥಳೀಯ ಪಂಚಾಯತಿಯವರು ವಿಭೂತಿ ಫಾಲ್ಸ್ಗೆ ತೆರಳುವ ಪ್ರವಾಸಿಗರಿಗೆ ನಿಷೇಧ ಹೇರಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top