• Slide
    Slide
    Slide
    previous arrow
    next arrow
  • ಪ್ರವಾಹ ಭೀತಿ ಹುಟ್ಟಿಸಿದ ಅಘನಾಶಿನಿ-ಗಂಗಾವಳಿ ನದಿ: ಮನೆಗಳಿಗೆ ನುಗ್ಗಿದ ನೀರು

    300x250 AD

    ಗೋಕರ್ಣ : ಘಟ್ಟದ ಮೇಲೆ ಮಳೆ ಹೆಚ್ಚಾಗುತ್ತಿದ್ದಂತೆಯೇ ಕರಾವಳಿ ಭಾಗದಲ್ಲಿ ನೆರೆ ಉಂಟಾಗುತ್ತಿದೆ. ಗಂಗಾವಳಿ ನದಿಯುವ ತುಂಬಿ ಹರಿಯುತ್ತಿರುವುದರಿಂದ ಸ್ಥಳೀಯರ ನಿದ್ದೆಗೆಡಿಸಿದೆ. ಹಾಗೇ ಹಲವು ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳಿಗೂ ಕೂಡ ನೀರು ನುಗ್ಗಿ ಆತಂಕ ಸೃಷ್ಟಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಕು ಆಡಳಿತ ನೋಡಲ್ ಅಧಿಕಾರಿಗಳ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ.

    ಇನ್ನು ಗಂಗಾವಳಿ, ಅಘನಾಶಿನಿ ನದಿಯು ತುಂಬಿ ಹರಿಯುತ್ತಿರುವುದರಿಂದಾಗಿ ಹಲವು ಭಾಗಗಳಲ್ಲಿ ನೀರು ತುಂಬಿದ್ದು, ಮನೆಗಳಿಗೂ ಕೂಡ ನೀರು ನುಗ್ಗಿ ಆತಂಕ ಹುಟ್ಟಿಸಿದೆ. ಇನ್ನು ಹಲವೆಡೆ ರಸ್ತೆಯುದ್ದಕ್ಕೂ ನೀರು ನಿಂತಿದ್ದರಿ0ದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
    ಕಳೆದ ವರ್ಷ ಹೊರತುಪಡಿಸಿದರೆ ಈ ಹಿಂದಿನ ಮೂರು ವರ್ಷ ಗಂಗಾವಳಿ ನದಿಗೆ ನಿರಂತರವಾಗಿ ನೆರೆ ಉಂಟಾಗುತ್ತು. ಇದರಿಂದಾಗಿ ನೂರಾರು ಮನೆಗಳು ಸಂಪೂರ್ಣ ಜಲಾವೃತಗೊಂಡು ಹಾನಿ ಉಂಟಾಗಿತ್ತು. ಇದರಿಂದಾಗಿ ನಿರಾಶ್ರಿತರಾದವರಿಗೆ ಹಲವೆಡೆ ಕಾಳಜಿ ಕೇಂದ್ರ ತೆರೆದು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಹಾನಿಗೊಳಗಾದ ನಿರಾಶ್ರಿತರಿಗೆ ಸರಕಾರ ಸರಿಯಾದ ಪರಿಹಾರ ಕೂಡ ನೀಡಿಲ್ಲ.
    ಮಳೆ ಸುರಿಯುತ್ತಿರುವುದನ್ನು ಗಮನಿಸಿದರೆ ಮತ್ತೆ ಗಂಗಾವಳಿ, ಅಘನಾಶಿನಿ ನದಿಗೆ ನೆರೆ ಉಂಟಾಗುವ ಲಕ್ಷಣಗಳು ಗೋಚರಿಸುತ್ತದೆ. ಹೀಗಾಗಿ ತಾಲೂಕು ಆಡಳಿತ ನೆರೆ ಬಂದರೆ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸಲು ಬೋಟ್ ಹಾಗೂ ವಾಹನದ ವ್ಯವಸ್ಥೆಯನ್ನು ಮಾಡಿದ್ದಾರೆ. ಇನ್ನು ಕೆಲವು ಅಪಾಯಕಾರಿ ಪ್ರದೇಶಗಳ ಜನರಿಗೆ ಮುನ್ಸೂಚನೆ ನೀಡಿದ್ದು, ಯಾವುದೇ ಸಂದರ್ಭದಲ್ಲಿ ಸಮಸ್ಯೆ ಉಂಟಾದರೂ ತಕ್ಷಣ ಕರೆ ಮಾಡುವಂತೆ ತಾಲೂಕು ಆಡಳಿತದ ಪರವಾಗಿ ಸ್ಥಳೀಯ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top