ಶಿರಸಿ: ಪಟ್ಟಣದ ಅರಣ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಅರಣ್ಯ ಮಹಾವಿದ್ಯಾಲಯ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಭಾಗವಹಿಸಿ ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅರಣ್ಯ ಇಲಾಖೆಯು, ಗಿಡ-ಮರ ,ಪ್ರಾಣಿ-ಪಕ್ಷಿ-ಜೀವ ಜಂತುಗಳ ಜೊತೆಗೆ ಬುಡಕಟ್ಟು ಹಾಗೂ ಅರಣ್ಯ ವಾಸಿಗಳನ್ನು ಅರಣ್ಯದ ಒಂದು ಭಾಗವೆಂದು ಪರಿಗಣಿಸಿದಾಗ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.ಗಿಡ ನೆಡುವುದಕ್ಕಿಂತ ಅದನ್ನು ಬದುಕಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು, ಅರಣ್ಯ ಬೆಳೆಸುವುದು ಕೇವಲ ಅರಣ್ಯ ಇಲಾಖೆಯ ಕೆಲಸ ಎಂದುಕೊಳ್ಳದೆ ಪ್ರತಿಯೊಬ್ಬ ಪ್ರಜೆ ವರ್ಷಕ್ಕೆ ಒಂದು ಗಿಡವಾದರು ನೆಡುವಂತಾಗಬೇಕು ಎಂದು ವಿಧ್ಯಾರ್ಥಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಕೆನರಾ ವೃತ್ತದ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳಾದ ವಸಂತ ರೆಡ್ಡಿ, ಅರಣ್ಯ ಇಲಾಖೆ ಶಿರಸಿ ವಿಭಾಗದ ಉಪ ಸಂರಕ್ಷಣಾಧಿಕಾರಿಗಳಾದ ಡಾ. ಅಜ್ಜಯ್ಯ, ಅರಣ್ಯ ಮಹಾವಿದ್ಯಾಲಯ ಶಿರಸಿಯ ವಿದ್ಯಾಧಿಕಾರಿಗಳಾದ ಡಾ. ವಾಸುದೇವ ಆರ್ ಹಾಗೂ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು, ಅರಣ್ಯ ಇಲಾಖೆಯ ವಿವಿಧ ಸ್ಥರದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.