ಸಿದ್ಧಾಪುರ: ಪರಿಸರ ಜಾಗೃತಿ ಅಂಗವಾಗಿ ಉತ್ತರ ಕನ್ನಡ ಜಿಲ್ಲಾದ್ಯಂತ ಅರಣ್ಯವಾಸಿಗಳಿಂದ ಲಕ್ಷ ವೃಕ್ಷ ನೆಡುವ ಅಭಿಯಾನ ಐತಿಹಾಸಿಕ. ವೃಕ್ಷ ಕ್ರಾಂತಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತೇನೆ. ಎಲ್ಲ ಅರಣ್ಯವಾಸಿಗಳು ಪಾಲ್ಗೋಳ್ಳಿ ಎಂದು ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಅವರು ಹೇಳಿದರು.
ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನಿಯೋಗವು, ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜುಲೈ 23 ರಂದು ಸಾಗರದಲ್ಲಿ ಅವರನ್ನು ಭೇಟ್ಟಿಯಾಗಿ ಲಕ್ಷ ವೃಕ್ಷ ಅಭಿಯಾನಕ್ಕೆ ಪಾಲ್ಗೊಳ್ಳಲು ಆಮಂತ್ರಿಸಿದ ಸಂದರ್ಭದಲ್ಲಿ ಮೇಲಿನಂತೆ ಹೇಳಿದರು.
ಅರಣ್ಯವಾಸಿಗಳು ಪರಿಸರ ಉಳಿಸಿ, ಬೆಳೆಯಿಸಿ. ಅರಣ್ಯದೊಂದಿಗೆ ಜೀವನ ಅವಲಂಭಿತರಾಗಿರಬೇಕು. ಪರಿಸರ ಅಭಿವೃದ್ಧಿಯಲ್ಲಿ ಅರಣ್ಯವಾಸಿಗಳ ಪಾತ್ರ ಅತೀ ಮುಖ್ಯ ಎಂದರು. ಜುಲೈ 31 ರಂದು ಉತ್ತರ ಕನ್ನಡ ಜಿಲ್ಲೆಯ 101 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, ಏಕಕಾಲದಲ್ಲಿ ಲಕ್ಷ ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿ ಅಭಿಯಾನವು ಅಗಸ್ಟ 14 ರವರೆಗೆ ನಡೆಯಲಿದ್ದು, ಲಕ್ಷ ವೃಕ್ಷ ಅಭಿಯಾನದಲ್ಲಿ ಜಿಲ್ಲೆಯ 165 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 1 ಲಕ್ಷಕ್ಕೂ ಮಿಕ್ಕಿ ವಿವಿಧ ಪ್ರಭೇಧಗಳ ಗಿಡ ನೇಡುವ ಕಾರ್ಯಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಈ ಸಂದರ್ಭದಲ್ಲಿ ಹೇಳಿದರು.
ನಿಯೋಗದಲ್ಲಿ ಅರಣ್ಯ ಭೂಮಿ ಹೋರಾಟಗಾರ ಪ್ರಮುಖರಾದ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ರಾಮ ಗೌಡ, ನಾಗರಾಜ ಮರಾಠಿ, ವಿನೋದ ಕುಮಾರ ಕಾರ್ಘ್ಳ, ಕೇಶವ ಮೂರ್ತಿ ಜೋಗ ಮುಂತಾದವರು ಉಪಸ್ಥಿತರಿದ್ದರು.