• Slide
    Slide
    Slide
    previous arrow
    next arrow
  • ವಂದೂರು ವಿಎಸ್‌ಎಸ್ ಅಧ್ಯಕ್ಷರಾಗಿ ವಿ.ಕೆ.ವಿಶಾಲ್ ಅವಿರೋಧ ಆಯ್ಕೆ

    300x250 AD

    ಹೊನ್ನಾವರ: ತಾಲೂಕಿನ ವಂದೂರು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾಗಿ ವಿ.ಕೆ.ವಿಶಾಲ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.
    ಸಿ.ಎ. ಮಧ್ಯಂತರ ಶಿಕ್ಷಣ ಪೂರೈಸಿರುವ ಯುವ ನಾಯಕ ವಿ.ಕೆ.ವಿಶಾಲ ಸಹಕಾರಿ ರಂಗದತ್ತ ಆಸಕ್ತಿ ಹೊಂದಿ ಸಚೀವರಾದ ಮಂಕಾಳ ವೈದ್ಯ ಮಾರ್ಗದರ್ಶನದಲ್ಲಿ ತಾಲೂಕಿನ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಳಿಕ ಇದೀಗ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಸ್ಥಾನವನ್ನು ಏರುವ ಮೂಲಕ ಸಹಕಾರಿ ರಂಗದಲ್ಲಿ ಇನ್ನಷ್ಟು ಸೇವೆ ನೀಡುವತ್ತ ದಾಪುಗಾಲು ಇಡುತ್ತಿದ್ದಾರೆ. 26ನೇ ವಯಸ್ಸಿನಲ್ಲಿ ಈ ಸ್ಥಾನಕ್ಕೆ ಏರಿರುವುದು ಯುವಕರಿಗೆ ಈ ರಂಗದತ್ತ ಬರಲು ಪ್ರೇರಣೆ ಮೂಡಿಸಿದೆ.
    ಸಂಘದ ಉಪಾಧ್ಯಕ್ಷರಾಗಿ ಸತೀಶ ಭಟ್ ಆಯ್ಕೆಯಾಗಿದ್ದು, ನಿರ್ದೇಶಕರು, ವ್ಯವಸಾಯ ಸಂಘದ ಸಿಬ್ಬಂದಿಗಳಿಗೆ ಅಭಿನಂದಿಸಿದರು. ಸಂಘವನ್ನು ಲಾಭದಾಯಕವಾಗಿ ಮುನ್ನಡೆಸುವ ಜೊತೆ ರೈತರಿಗೆ ಸಹಕಾರಿ ರಂಗದಿ0ದ ದೊರೆಯುವ ಸೌಲಭ್ಯವನ್ನು ಪ್ರಾಮಾಣಿಕವಾಗಿ ತಲುಪಿಸುವ ಭರವಸೆಯನ್ನು ಇದೆ ವೇಳೆ ನೀಡಿದರು. ಇವರ ಆಯ್ಕೆಗೆ ಜಿಲ್ಲಾ ಉಸ್ತುವಾರಿ ಸಚೀವರಾದ ಮಂಕಾಳ ವೈದ್ಯ ಅಭಿನಂದಿಸಿ ಸಹಕಾರಿ ರಂಗದ ಮೂಲಕ ರೈತರಿಗೆ ನೆರವಾಗುವಂತೆ ಸಲಹೆ ನೀಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top