Slide
Slide
Slide
previous arrow
next arrow

ಯಾಂತ್ರಿಕೃತ ಬೋಟ್‌ಗಳಿಗೆ ಮೀನುಗಾರಿಕೆ ನಿಷೇಧ: ನಾಡದೋಣಿಗಳಿಂದ ಮೀನು ಶಿಕಾರಿ

300x250 AD

ಗೋಕರ್ಣ: ಇಲ್ಲಿಯ ಸಮೀಪದ ಗಂಗಾವಳಿ, ಅಘನಾಶಿನಿ ನದಿಯ ಮೂಲಕ ನಾಡದೋಣಿಗಳ ಮೀನುಗಾರಿಕೆ ಆರಂಭಗೊ0ಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬಂಗಡೆ ಮೀನು ದೊರೆಯುತ್ತಿದೆ. ಇದರಿಂದಾಗಿ ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ಬಂಗಡೆ ಸೇರಿದಂತೆ ಇನ್ನಿತರ ಮೀನುಗಳು ಕೂಡ ಆಗಮಿಸುತ್ತಿದ್ದು, ಮತ್ಸ್ಯಪ್ರಿಯರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಯಾಂತ್ರಿಕೃತ ಬೋಟ್‌ಗಳಿಗೆ ಜೂನ್ 1 ರಿಂದ ಜುಲೈ 31 ರವರೆಗೆ ನಿಷೇಧ ಇರುವುದರಿಂದ ಅವರು ಮೀನುಗಾರಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಒಂದುವೇಳೆ ಅವರು ತೆರಳಿದರೂ ಕೂಡ ಕಾನೂನು ಬಾಹಿರ ಮತ್ತು ದೋಣಿ ಬೋಟ್ ಮುಳುಗಡೆ ಮತ್ತು ಅಹಿತಕರ ಘಟನೆ ನಡೆದರೆ ಆ ಬೋಟ್ ಮಾಲೀಕನ ಜವಾಬ್ದಾರಿಯಾಗಿರುತ್ತದೆ. ಹೀಗಾಗಿ ಯಾಂತ್ರಿಕೃತ ಬೋಟ್‌ನವರು ಜುಲೈ 31 ರವರೆಗೆ ಮೀನುಗಾರಿಕೆಗೆ ಇಳಿಯುತ್ತಿಲ್ಲ.

300x250 AD

ಇದರಿಂದಾಗಿ ನಾಡದೋಣಿಗಳು ಮೀನು ಶಿಕಾರಿಗೆ ಇಳಿದಿವೆ. ದೊಡ್ಡ ಬೋಟ್‌ಗಳಿಗೆ ನಿಷೇಧ ಇರುವುದು ಕೇವಲ ಅಹಿತಕರ ಘಟನೆಯಿಂದಾಗಿ ಅಲ್ಲ. ಈ ಸಂದರ್ಭದಲ್ಲಿ ಸಾಕಷ್ಟು ಮೀನುಗಳು ಸಂತಾನೋತ್ಪತ್ತಿ ಮಾಡುತ್ತದೆ. ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೆ ಮರಿಗಳು ಕೂಡ ನಾಶವಾಗುವ ಅಪಾಯ ಇರುವುದರಿಂದ ಸರಕಾರ ಈ ನಿರ್ಧಾರ ಕೈಗೊಂಡಿದೆ. ಆದರೆ ನಾಡದೋಣಿಯವರಿಗೆ ಇದು ವರವಾಗಿ ಪರಿಣಮಿಸಿದ್ದು, ಸಮುದ್ರದಡದಿಂದ ಹೆಚ್ಚು ದೂರ ಹೋಗದೇ ಮೀನುಗಾರಿಕೆ ನಡೆಸುತ್ತಾರೆ. ಈಗ ಮಾರುಕಟ್ಟೆಯಲ್ಲಿ 100 ರೂ.ಗೆ 5 ರಿಂದ 6 ಬಂಗಡೆ ದೊರೆಯುತ್ತಿದೆ.

Share This
300x250 AD
300x250 AD
300x250 AD
Back to top