• Slide
    Slide
    Slide
    previous arrow
    next arrow
  • ಜನ್ಮದಾತರ ಸೇವೆ ಜೊತೆ ಭಾರತಾಂಬೆಯ ಸೇವೆ ಸಲ್ಲಿಸಿ: ಸುಬೇದಾರ ರಾಮು

    300x250 AD

    ಶಿರಸಿ: ವಿದ್ಯಾರ್ಥಿಗಳಿಗೆ ಗುರಿಯಿರಲಿ ಸಮಯ ಪ್ರಜ್ಞೆ , ಶಿಸ್ತು ಇವುಗಳನ್ನು ರೂಢಿಸಿಕೊಳ್ಳಬೇಕು. ಜನ್ಮ ಕೊಟ್ಟ ತಂದೆ ತಾಯಿಯ ಸೇವೆ ಜೊತೆಗೆ ಭಾರತಾಂಬೆಯ ಹೆಮ್ಮೆಯ ಮಕ್ಕಳಾದ ನಾವು ಅವಕಾಶ ಸಿಕ್ಕಾಗ ಸೇವೆ ಮಾಡಬೇಕೆಂದು ನಿವೃತ್ತ ಸೈನಿಕ ಸುಬೇದಾರ ರಾಮು ಇ. ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ನಗರದ ಎಂ.ಇ.ಎಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ದತ್ತಿನಿಧಿ ಬಹುಮಾನ ವಿತರಣೆ ಹಾಗೂ ಸಂಘ ಒಕ್ಕೂಟಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಭಾರತಾಂಬೆಯ ಹೆಮ್ಮೆಯ ಮಕ್ಕಳಾದ ನಾವು ಅವಕಾಶ ಸಿಕ್ಕಾಗ ಸೇವೆ ಮಾಡಬೇಕು ಎಂಬುದನ್ನು ಮನವರಿಕೆ ಮಾಡಿಸುತ್ತಾ ದತ್ತಿನಿಧಿಯು ಇತರ ವಿದ್ಯಾರ್ಥಿಗಳ ಸಾಧನೆಗೆ ಪ್ರೇರಣೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

    300x250 AD

    ಅಧ್ಯಕ್ಷರಾಗಿ ಆಗಮಿಸಿದ್ದ ಎಂ.ಇ.ಎಸ್ ಸಂಸ್ಥೆಯ ಅಧ್ಯಕ್ಷ ಜಿ. ಎಂ. ಹೆಗಡೆ ಮುಳಖಂಡ ಮಾತನಾಡಿ ಅನುಭವಿದ್ದಲ್ಲಿ ಅಮೃತ ಇದೆಯೆಂದು ಹೇಳುತ್ತಾ ವಿದ್ಯಾರ್ಥಿಗಳು ಕಲಿಕೆಗೆ ಉಪಯೋಗವಾಗುವ ಎಲ್ಲಾ ವ್ಯವಸ್ಥೆಯನ್ನು ನಮ್ಮ ಸಂಸ್ಥೆಯಿ0ದ ಮಾಡಲ್ಪಡುತ್ತದೆ ಅದರ ಉಪಯೋಗ ಪಡೆದುಕೊಳ್ಳಬೇಕೆಂದು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಕರೆ ಕೊಟ್ಟರು. ಎಂ.ಇಎಸ್ ಪಿ.ಯು ಉಪಸಮಿತಿಯ ಅಧ್ಯಕ್ಷ ಶ್ರೀಪಾದ ನಾರಾಯಣ ರಾಯ್ಸದ್ ಮಾತನಾಡುತ್ತಾ ಈ ವಿದ್ಯಾಲಯದಲ್ಲಿ ಹಿಂದೆ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ತಮ್ಮ ಸಾಧನೆಯ ಮೂಲಕ ಸಂಸ್ಥೆಯ ಕೀರ್ತಿಯನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪಸರಿಸಿದ್ದಾರೆ. ಇದೇ ರೀತಿ ನೀವು ಕೂಡಾ ಸಾಧಕರಾಗಬೇಕು. ತನ್ಮೂಲಕ ಈ ಸಂಸ್ಥೆಯ ಕೀರ್ತಿಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕೆ0ದು ಆಶಯ ವ್ಯಕ್ತಪಡಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಲತಾ ಗಿರಿಧರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ದತ್ತಿ ನಿಧಿ ಬಹುಮಾನ ವಿತರಿಸಲಾಯಿತು. ಪ್ರಾಚಾರ್ಯ ರಾಜೇಂದ್ರ ಹೆಗಡೆ ಪ್ರಾಸ್ತಾವಿಸಿ, ಸ್ವಾಗತ ಕೋರಿದರು.ಮನೋಜ ಪಿಂಟೋ ಅತಿಥಿಗಳನ್ನು ಪರಿಚಯಿಸಿದರು. ಶ್ರೀಧರ ಮೇಸ್ತಾ ನಿರೂಪಿಸಿ, ವಂದಿಸಿದಸರು.

    Share This
    300x250 AD
    300x250 AD
    300x250 AD
    Leaderboard Ad
    Back to top