Slide
Slide
Slide
previous arrow
next arrow

ಇ-ತ್ಯಾಜ್ಯದ ಸಮರ್ಪಕ ನಿರ್ವಹಣೆ ಅತ್ಯಗತ್ಯ: ನಾರಾಯಣ ನಾಯಕ್

300x250 AD

ಶಿರಸಿ: ಭಾರತದಲ್ಲಿ ಇ-ತ್ಯಾಜ್ಯ ಹೆಚ್ಚುತ್ತಿದ್ದು, ಜನ ಜಾಗೃತಿ ಕೊರತೆ ಎದ್ದು ಕಾಣುತ್ತಿದೆ. ಇ- ತ್ಯಾಜ್ಯದ ಮಾರಕ ಪರಿಣಾಮ ಹೆಚ್ಚಾಗುತ್ತಿದ್ದು, ಪರಿಸರ ಸಮತೋಲನವನ್ನು ಹಾಳು ಮಾಡುತ್ತಿದೆ ಎಂದು  ಮುಖ್ಯ ಅಭಿಯಂತರ ನಾರಾಯಣ ನಾಯಕ್ ಹೇಳಿದರು.

ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜನೆಯಲ್ಲಿ, ಎನ್.ಎಸ್.ಎಸ್ ಘಟಕ, ಸಮಾಜಶಾಸ್ತ್ರ ವಿಭಾಗ, ರಾಸಾಯನಶಾಸ್ತ್ರ ವಿಭಾಗ ಹಾಗೂ ನಗರಸಭೆ ಶಿರಸಿ ಇವರುಗಳ ಸoಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ  ಇ-ತ್ಯಾಜ್ಯ ಸೂಕ್ತ ವಿಲೇವಾರಿ ಮತ್ತು ಏಕಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.

ಭಾರತದಲ್ಲಿ ಕೇವಲ ನಾಲ್ಕು ಸ್ಥಳಗಳಲ್ಲಿ ಮಾತ್ರ ಈ ತ್ಯಾಜ್ಯ ವಿಲೇವಾರಿ ನಿರ್ವಹಣಾ ಘಟಕಗಳಿದ್ದು, ಸಮರ್ಪಕವಾಗಿ ಎಲ್ಲೆಡೆಗಳಿಂದ ವಿಲೇವಾರಿಯಾಗಬೇಕಿದೆ. ರಸ್ತೆಯ ಅಕ್ಕ ಪಕ್ಕದಲ್ಲಿ ಇ-ತ್ಯಾಜ್ಯವನ್ನ ಎಸೆಯುವುದನ್ನು ನಾವಿಂದು ಕಾಣುತ್ತಿದ್ದೇವೆ. ಅಲ್ಲದೆ ಏಕಬಳಕೆ ಪ್ಲಾಸ್ಟಿಕ್ ಕೂಡ ಕಂಡ ಕಂಡಲ್ಲಿ ನಾವು ಎಸೆಯುತ್ತಿದ್ದು, ಅತಿ ಹೆಚ್ಚಿನ ಮಾಲಿನ್ಯವನ್ನು ಉಂಟು ಮಾಡುತ್ತಿದ್ದೇವೆ. ಇದರಿಂದ ಜಾಗತಿಕ ತಾಪಮಾನ ಏರಿಕೆ ಆಗುವುದಲ್ಲದೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ವಿದ್ಯಾರ್ಥಿಗಳು ಈ ತೆರನಾಗಿ ಜಾಗೃತರಾಗಬೇಕು ಸಾಮಾಜಿಕವಾಗಿ ಅರಿವನ್ನು ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಪ್ರಾಚಾರ್ಯ ಡಾ. ಟಿ ಎಸ್ ಹಳೆಮನೆ ಅಧ್ಯಕ್ಷತೆ ವಹಿಸಿ ಮಾತನಾಡಿ ಯುವ ಜನತೆ ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ. ಪರಿಸರವಿಲ್ಲದೆ ನಾವಿಲ್ಲ ಪರಿಸರಕ್ಕೆ ಮಾರಕವಾಗುವ ಇಂತಹ ತ್ಯಾಜ್ಯಗಳನ್ನು ನಿರ್ವಹಿಸುವಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರವನ್ನು ವಹಿಸಬೇಕು ಎಂದರು.

300x250 AD

ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಜಿ ಟಿ ಭಟ್ ಸ್ವಾಗತಿಸಿ ನಿರೂಪಿಸಿದರು. ಎನ್ಎಸ್ಎಸ್ ಅಧಿಕಾರಿ ಡಾ. ಆರ್.ಆರ್. ಹೆಗಡೆ, ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಗಣೇಶ್ ಹೆಗಡೆ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top