ದಾಂಡೇಲಿ: ದಾಂಡೇಲಿ- ಜೊಯಿಡಾ ಮುಖ್ಯ ರಸ್ತೆಯಲ್ಲಿ ಬರಯವ ಬಾಮಣಗಿ ಕ್ರಾಸ್ ಹತ್ತಿರ ಸರಿಸುಮಾರು ನೂರು ವರ್ಷಗಳಷ್ಟು ಹಳೆಯದಾದ ಬೃಹತ್ ಆಲದ ಮರವೊಂದು ಧರೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಗುರುವಾರ ನಡೆದಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮರ ಧರೆಗುರುಳಿದೆ. ಮರ ರಸ್ತೆಗೆ ಉರುಳಿದ ಪರಿಣಾಮವಾಗಿ ಸಂಚಾರ ಸ್ಥಗಿತಗೊಂಡಿದೆ. ಮರ ಬಿದ್ದ ತಕ್ಷಣವೆ ವರ‍್ನೋಲಿ ವಲಯಾರಣ್ಯಾಧಿಕಾರಿ ಸಂಗಮೇಶ್ ಪಾಟೀಲ್ ಅವರು ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ನಾಗರಾಜ, ಗೋವಿಂದ ಭಂಡಗಿ, ಅಶೋಕ್, ಬಾಬಾಜಾನ್ ಅವರ ನೇತೃತ್ವದೊಂದಿಗೆ ಸ್ಥಳೀಯರ ಸಹಕಾರದಲ್ಲಿ ಮರದ ತೆರವು ಕರ‍್ಯಾಚರಣೆ ನಡೆಯುತ್ತಿದೆ. ಸ್ಥಳದಲ್ಲಿ ಪ್ರಧಾನಿ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಆರೀಶ ಖಾದರ್ ಅವರು ಉಪಸ್ಥಿತರಿದ್ದು, ತೆರವು ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ.