Slide
Slide
Slide
previous arrow
next arrow

4 ತಿಂಗಳ ಹಾಲಿನ ಪ್ರೋತ್ಸಾಹಧನ ಜಮಾ: ಸುರೇಶ್ಚಂದ್ರ ಕೆಶಿನ್ಮನೆ

300x250 AD

ಶಿರಸಿ: ನವೆಂಬರ್‌-2022 ಮತ್ತು ಜನವರಿ-2023 ನೇ ಮಾಹೆಗಳ ಎರಡು ತಿಂಗಳಿನ ರೂ.5 ಪ್ರೋತ್ಸಾಹಧನವು ಜು.19 ಬುಧವಾರದಂದು ಹಾಗೂ ಅಕ್ಟೋಬರ್‌ ಮತ್ತು ಡಿಸೆಂಬರ್-2022‌ ನೇ ಮಾಹೆಯ ಎರಡು ತಿಂಗಳ ರೂ.5 ಪ್ರೋತ್ಸಾಹಧನ ಜು.20 ಗುರುವಾರದಂದು ಜಮಾ ಆಗಿದೆ ಎಂದು ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನಿರ್ದೇಶಕರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹೇಳಿಕೆ ನೀಡಿದ ಅವರು 2022-2023 ನೇ ಸಾಲಿನ ಅಕ್ಟೋಬರ್,ನವೆಂಬರ್‌,ಡಿಸೆಂಬರ್‌,ಜನವರಿ ಹಾಗೂ ಫೆಬ್ರವರಿ-2023 ನೇ ಮಾಹೆಯ ನಂತರದ ಮಾರ್ಚ್‌, ಏಪ್ರಿಲ್‌, ಮೇ ಮತ್ತು ಜೂನ್-2023 ನೇ ಮಾಹೆಗಳವರೆಗಿನ ಬಾಕಿ ಇರುವ ರೂ.5 ಪ್ರೋತ್ಸಾಹಧನವನ್ನು ಜಿಲ್ಲೆಯ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಮಾಡುವ ಬಗ್ಗೆ ಕೆಲ ದಿನಗಳ ಹಿಂದೆಯಷ್ಟೇ ಪತ್ರಿಕಾ ಹಾಗೂ ಸುದ್ದಿ ಮಾಧ್ಯಮಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈಗ ಅಕ್ಟೋಬರ್-2022 ನೇ ಮಾಹೆಯಿಂದ ಫೆಬ್ರವರಿ-2023‌ ನೇ ಮಾಹೆಯವರೆಗೆ ರಾಜ್ಯ ಸರ್ಕಾರದಿಂದ ಜಿಲ್ಲೆಯ ಹಾಲು ಹಾಲು ಉತ್ಪಾದಕರ ರೈತರ ಖಾತೆಗೆ ಜಮಾ ಆಗಬೇಕಿದ್ದ ರೂ.5 ಪ್ರೋತ್ಸಾಹಧನ ಜಮಾ ಆದಂತಾಗಿದೆ ಎಂದರು.

300x250 AD

ಮಾರ್ಚ್‌,ಏಪ್ರಿಲ್‌,ಮೇ ಮತ್ತು ಜೂನ್-2023‌ ನೇ ಮಾಹೆಗಳ ರೂ.5 ಪ್ರೋತ್ಸಾಹಧನ ‌ಕೂಡ ಶೀಘ್ರವೇ ರಾಜ್ಯ ಸರ್ಕಾರದಿಂದ ಹಾಲು ಉತ್ಪಾದಕ ರೈತರ ಖಾತೆಗೆ ಜಮಾ ಆಗುವ ನೀರಿಕ್ಷೆಯಿದೆ. ಅಕ್ಟೋಬರ್‌,ನವೆಂಬರ್,ಡಿಸೆಂಬರ್-2022 ಮತ್ತು ಜನವರಿ-2023 ನೇ ಮಾಹೆಗಳ ರೂ. 5 ಪ್ರೋತ್ಸಾಹಧನ ಜಮಾ ಆಗದ ಹಾಲು ಉತ್ಪಾದಕ ರೈತರು ಕೂಡಲೇ ಆಯಾ ವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದ್ದಾರೆ.

Share This
300x250 AD
300x250 AD
300x250 AD
Back to top