Slide
Slide
Slide
previous arrow
next arrow

ಹಾವುಗಳ ಸಂರಕ್ಷಣೆ ಕುರಿತ ಜಾಗೃತಿ ಕಾರ್ಯಾಗಾರ ಯಶಸ್ವಿ

300x250 AD

ದಾಂಡೇಲಿ: ತಾಲ್ಲೂಕಿನ ಕುಳಗಿ ವನ್ಯಜೀವಿ ವಲಯದ ಆಶ್ರಯದಡಿ ಕುಳಗಿ ಪ್ರಕೃತಿ ಶಿಬಿರದಲ್ಲಿ ಕೆನರಾ ವೃತ್ತ ಮಟ್ಟದ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗಳಿಗಾಗಿ ಹಾವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರವನ್ನು ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಉದ್ಘಾಟಿಸಿ ಮಾತನಾಡಿ, ಕೆನರಾ ವೃತ್ತ ಅತ್ಯಂತ ಸಂಪದ್ಭರಿತವಾದ ದಟ್ಟ ಕಾಡುಗಳನ್ನೊಳಗೊಂಡ ವೃತ್ತವಾಗಿದೆ. ಇಲ್ಲಿ ವಿವಿಧ ಜಾತಿಯ ಹಾವುಗಳಿವೆ. ಹಾವುಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗಳಿಗೆ ಅತೀ ಅಗತ್ಯವಾಗಿ ಮಾಹಿತಿ ಬೇಕಾಗಿದೆ. ಈ ನಿಟ್ಟಿನಲ್ಲಿ ಈ ಕಾರ್ಯಾಗಾರ ಔಚಿತ್ಯಪೂರ್ಣ ಮತ್ತು ಅರ್ಥಪೂರ್ಣವಾಗಿದೆ ಎಂದರು.

300x250 AD

ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಶಿಂಧೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮರಾಕ್ಷರ ವಿ.ಎಂ. ಸಂದರ್ಭೋಚಿತವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ರಾಹುಲ್ ಆರಾಧ್ಯ, ಇಮ್ರಾನ್ ಪಟೇಲ್, ಮಧುಸೂದನ್ ಎಸ್. ಅವರುಗಳು ಹಾವುಗಳ ವಿಧಗಳು, ವಿಷಕಾರಿ ಹಾಗೂ ವಿಷರಹಿತ ಹಾವುಗಳ ಬಗ್ಗೆ, ಅವುಗಳನ್ನು ಗುರುತಿಸುವ ಬಗ್ಗೆ, ಹಾವಿನ ವಿಷದ ವಿಧಗಳು, ಅವುಗಳಿಂದಾಗುವ ಪರಿಣಾಮಗಳು, ವಿಷದಲ್ಲಿರುವ ಕಿಣ್ವಗಳು, ಪ್ರತಿರೋಧಕ ವಿಷ ತಯಾರಿಕೆಯ ವಿಧಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಾಗಾರದಲ್ಲಿ ಕೆನರಾ ವೃತ್ತ ಮಟ್ಟದ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಉಪ ವಲಯಾರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು, ಉರಗ ಸಂರಕ್ಷಕರು ಹಾಗೂ ಆಸಕ್ತ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಾಗಾರದ ನೇತೃತ್ವವನ್ನು ವಹಿಸಿದ್ದ ಕುಳಗಿ ವನ್ಯಜೀವಿ ವಲಯದ ವಲಯಾರಣ್ಯಾಧಿಕಾರಿ ಮಹಾಂತೇಶ್ ಪಾಟೀಲ್ ಸ್ವಾಗತಿಸಿ, ವಂದಿಸಿದರು. ಫಣಸೋಲಿ ವನ್ಯಜೀವಿ ವಲಯದ ವಲಯಾರಣ್ಯಾಧಿಕಾರಿ ರಶ್ಮಿ ದೇಸಾಯಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Share This
300x250 AD
300x250 AD
300x250 AD
Back to top