Slide
Slide
Slide
previous arrow
next arrow

ಮಳೆ ಬೆಳೆಗಾಗಿ ಪ್ರಾರ್ಥಿಸಿ ‘ದಾದುಮ್ಮನ ಮದುವೆ’ ಆಚರಣೆ

300x250 AD

ಗೋಕರ್ಣ: ಪ್ರತಿವರ್ಷ ಆಶಾಡ ಅಮವಾಸ್ಯೆಯ ದಿನದಂದು ಮಳೆ ಬೆಳೆಗಾಗಿ ಪ್ರಾರ್ಥಿಸಿ ಇಬ್ಬರು ಮಹಿಳೆಯರಿಗೆ ಪರಸ್ಪರ ಮದುವೆ ಮಾಡಿಸುವ ಹಾಲಕ್ಕಿ ಸಮುದಾಯದವರ ‘ದಾದುಮ್ಮನ ಮದುವೆ’ ಆಚರಣೆ ಈ ಬಾರಿಯೂ ವಿಶೇಷವಾಗಿ ನಡೆಯಿತು.
ಮಳೆಗಾಗಿ ಇಂದ್ರನನ್ನು ಪ್ರಾರ್ಥಿಸುವುದು ಈ ಮದುವೆಯ ವಿಶೇಷವಾಗಿದೆ. ಈ ಹಿಂದೆ ಗೋಕರ್ಣದ ವಿವಿಧ ಭಾಗಗಳಲ್ಲಿ ಅದ್ದೂರಿಯಾಗಿ ಇಂತಹ ಆಚರಣೆಗಳನ್ನು ಹಾಲಕ್ಕಿ ಸಮುದಾಯಗಳಲ್ಲಿ ಕಂಡುಬರುತ್ತದೆ. ಆದರೆ ಈಗ ಹುಳಸೇಕೇರಿಯಲ್ಲಿ ಮಾತ್ರ ಈ ಸಂಭ್ರಮ ನೋಡಲು ಸಾಧ್ಯ.
ಈ ಮದುವೆಯಲ್ಲಿ ವರ ಮತ್ತು ವಧು ಇಬ್ಬರೂ ಮಹಿಳೆಯರೇ ಆಗಿರುವುದು ವಿಶೇಷ. ಇಬ್ಬರು ಮುತ್ತೈದೆಯರು ವಧು ಮತ್ತು ವರನಾಗಿ ಕಂಗೊಳಿಸುತ್ತಾರೆ. ಹುಳಸೇಕೇರಿ ಹಾಲಕ್ಕಿಗಳ ಪ್ರತಿ ಮನೆಯ ಮಹಿಳೆಯರು ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಈ ಬಾರಿ ಗೂಧೋಳಿ ಮೂಹುರ್ತದಲ್ಲಿ ಪಾರ್ವತಿ ಗೌಡ, ಸಾವಿತ್ರಿ ಗೌಡರನ್ನು ಮಾಲೆ ಹಾಕಿ ಮದುವೆಯಾಗುವುದರೊಂದಿಗೆ ಈ ಹಬ್ಬದ ಪರಂಪರೆಯನ್ನು ಮುಂದುವರಿಸಿದರು.
ಈ ಸಂಭ್ರಮದ ಮದುವೆಯಲ್ಲಿ ಸುಮಾರು 300ಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು. ಪ್ರತಿವರ್ಷ ಆಶಾಡ ಅಮವಾಸ್ಯೆಯ ದಿನದಂದು ಇಂದ್ರನ ಕೃಪೆಗೆ ಒಳಗಾಗಲು ಹಾಲಕ್ಕಿ ಒಕ್ಕಲಿಗರು ಈ ಮದುವೆಯನ್ನು ಕೈಗೊಳ್ಳುತ್ತ ಬಂದಿದ್ದಾರೆ. ಉತ್ತಮ ಮಳೆಯಾಗಿ ಒಳ್ಳೆಯ ಬೆಳೆಯಾಗಲಿ ಎಂಬ ಆಶಯ ಈ ಹಾಲಕ್ಕಿ ಸಮುದಾಯದವರದ್ದಾಗಿದೆ.

300x250 AD
Share This
300x250 AD
300x250 AD
300x250 AD
Back to top