ಗೋಕರ್ಣ: ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ನೀರಿನ ರಭಸಕ್ಕೆ ಆಯತಪ್ಪಿ ಗಂಗಾವಳಿ ನದಿಗೆ ಬಿದ್ದು ಸಾವನ್ನಪ್ಪಿದ ಗಂಗಾವಳಿಯ ಮಂಜುನಾಥ ಅಂಬಿಗ ಅವರ ಮನೆಗೆ ಕಾಂಗ್ರೆಸ್ ಮುಖಂಡ ನಿವೇದಿತ್ ಆಳ್ವಾ ಆಗಮಿಸಿ ಸಾಂತ್ವನ ಹೇಳಿದರು.
ಪ್ರಕೃತಿ ವಿಕೋಪದಡಿ ಸಿಗುವ ಆರ್ಥಿಕ ಪರಿಹಾರ ಶೀಘ್ರದಲ್ಲಿಯೇ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ಪ್ರಮುಖರಾದ ಅರುಣ ಗೌಡ ಇತರರಿದ್ದರು.
ಮೃತ ಮೀನುಗಾರನ ಮನೆಗೆ ನಿವೇದಿತ್ ಆಳ್ವಾ ಭೇಟಿ
