ಯಲ್ಲಾಪುರ: ಇಲ್ಲಿಯ ರೋಲರ್ ಸ್ಕೇಟಿಂಗ್ ಕ್ಲಬ್‌ನ ವಿದ್ಯಾರ್ಥಿಗಳು ರವಿವಾರ ಬೆಂಗಳೂರಿನ ಚನ್ನಮ್ಮನ ಕೆರೆ ಒಳಾಂಗಣ ಕ್ರೀಡಾಗಂಣದಲ್ಲಿ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ವಾಡ್ ಸ್ಕೇಟಿಂಗ್ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ವೆಸ್ಟರ್ನ್ ಬುಲ್ಸ್ ತಂಡ ಬಂಗಾರದ ಪದಕ ಹಾಗೂ ಬ್ಲಾಕ್ ಪ್ಯಾಂಥರ್ಸ್ ತಂಡ ಬೆಳ್ಳಿ ಪದಕ ಪಡೆದುಕೊಂಡಿದೆ.
ಜುಲೈ 14ರಿಂದ ಪ್ರಾರಂಭವಾಗಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಕ್ವಾಡ್ ಸ್ಕೇಟಿಂಗ್ ಹಾಕಿ ಪಂದ್ಯಾವಳಿಯ ಫೈನಲ್ ಹಂತಕ್ಕೆ ತಲುಪಿರುವ ಬ್ಲಾಕ್ ಪ್ಯಾಂಥರ್ಸ್ ಹಾಗೂ ವೆಸ್ಟರ್ನ್ ಬುಲ್ಸ್ ತಂಡದಲ್ಲಿ ಯಲ್ಲಾಪುರ ರೋಲರ್ ಸ್ಕೇಟಿಂಗ್ ಕ್ಲಬ್‌ನ 14ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಫೈನಲ್ ಪಂದ್ಯದಲ್ಲಿ 4-2 ಗೋಲ್ ಗಳ ಅಂತರದಿAದ ಜಯಿಸಿ ವೆಸ್ಟ್ರನ್ ಬುಲ್ಸ ತಂಡದ ಆಟಗಾರರು ಬಂಗಾರದ ಪದಕವನ್ನು ಪಡೆದುಕೊಂಡರು.
ಕರ್ನಾಟಕದ ವಿವಿಧ ಭಾಗಗಳಿಂದ 220ಕ್ಕೂ ಹೆಚ್ಚು ಸ್ಕೇಟಿಂಗ್ ಪಟುಗಳು ಬಾಗವಹಿಸಿದ್ದ, ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಯಲ್ಲಾಪುರ ರೋಲರ್ ಸ್ಕೇಟಿಂಗ್ ಕ್ಲಬ್‌ನ ಆಟಗಾರರಾದ ವಿಶ್ವದರ್ಶನ ಪ್ರೌಢಶಾಲೆಯ ತಪನ್ ಭಟ್ಟ, ಪುಷ್ಕರ್ ಶೇಟ್, ಕಿರಣ ರಾವ್, ದಿಯಾ ಶೇಟ್ ಹಾಗೂ ಮದರ್ ಥೆರೆಸಾ ಆಂಗ್ಲ ಮಾಧ್ಯಮ ಶಾಲೆಯ ಸೇಜಲ್ ನಾಯ್ಕ ಫೈನಲ್ ಪಂದ್ಯದಲ್ಲಿ ಆಟವಾಡಿ ಕ್ಲಬ್‌ನ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ ಎಂದು ಯಲ್ಲಾಪುರ ರೋಲರ್ ಸ್ಕೆಟಿಂಗ್ ಕ್ಲಬ್‌ನ ಆಧ್ಯಕ್ಷ ಪ್ರಕಾಶ ಶೇಟ್ ತಿಳಿಸಿದ್ದಾರೆ.