Slide
Slide
Slide
previous arrow
next arrow

ಮಾಧ್ಯಮ ಶ್ರೀ ಪ್ರಶಸ್ತಿಗೆ ಪತ್ರಕರ್ತ ನರಸಿಂಹ ಅಡಿ ಆಯ್ಕೆ

300x250 AD

ಶಿರಸಿ : ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಪ್ರತಿಷ್ಠಿತ ಮಾಧ್ಯಮ ಶ್ರೀ ಪ್ರಶಸ್ತಿಗೆ ಹಿರಿಯ ಪತ್ರಕರ್ತ ನರಸಿಂಹ ಅಡಿ ( ಗುರು ಅಡಿ ) ಆಯ್ಕೆಯಾಗಿದ್ದಾರೆ.‌

ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಮುಂಬರುವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.‌

ನರಸಿಂಹ ಅಡಿ ಅವರು, ಏಪ್ರಿಲ್ 2009 ರಿಂದ ಪಿಟಿಐ ಸುದ್ದಿ ಸಂಸ್ಥೆಯ ಹಾಗೂ 2007 ರಿಂದ ರಾಜಸ್ಥಾನ ಪತ್ರಿಕಾ ರಾಷ್ಟ್ರೀಯ ಸ್ಥರದ ಹಿಂದಿ ದಿನಪತ್ರಿಕೆಯ ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ, ಕಳೆದ 10 ವರ್ಷಗಳಿಂದ ಸಂಯುಕ್ತ ಕರ್ನಾಟಕ ಕನ್ನಡ ದಿನಪತ್ರಿಕೆಯ ಶಿರಸಿ ವರದಿಗಾರರಾಗಿ, ಎರಡು ದಶಕಗಳಿಂಗಿತಲೂ ಹೆಚ್ಚು ಸಮಯದಿಂದ ಮಾಧ್ಯಮದ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.

2001 ರಿಂದ 6 ವರ್ಷಗಳ ಕಾಲ ತರುಣ ಭಾರತ ಮರಾಠಿ ದೈನಿಕದ ಶಿರಸಿ ಉಪವಿಭಾಗದ ವರದಿಗಾರರಾಗಿ ಮಾಧ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದು, 2007 ರಿಂದ 2 ವರ್ಷಗಳ ಅವಧಿಗೆ ಜೈನ್ ಟಿವಿ ಹಿಂದಿ ರಾಷ್ಟ್ರೀಯ ವಾಹಿನಿಯ ವರದಿಗಾರರಾಗಿ ಹಾಗೂ 6 ತಿಂಗಳ ಕಾಲ ಜಿಲ್ಲಾಸ್ಥರದ ಕನ್ನಡ ದಿನಪತ್ರಿಕೆ ಲೋಕಧ್ವನಿ ವರದಿಗಾರರಾಗಿ, ಒಂದು ವರ್ಷ ಕೆನರಾ ವಿಜಯ ಜಿಲ್ಲಾಸ್ಥರದ ಕನ್ನಡ ದಿನಪತ್ರಿಕೆ ಶಿರಸಿ ತಾಲೂಕಾ ವರದಿಗಾರರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

300x250 AD

ಸಮಾಜ ಶಾಸ್ತ್ರದಲ್ಲಿ ಎಂಎ ಪದವಿ ಪಡೆದಿರುವ ಅಡಿ, ದೆಹಲಿಯಲ್ಲಿ ಮಾಧ್ಯಮ ತರಬೇತಿ, 4 ವರ್ಷಗಳ ಕಾಲ ಸರ್ಕಾರಿ ಜೆಓಡಿಸಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕರಾಗಿಯೂ ಉದ್ಯೋಗ ಮಾಡಿದ್ದಾರೆ ಎಂಬುದು ಉಲ್ಲೇಖನೀಯವಾಗಿದೆ. ಸಭೆಯಲ್ಲಿ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ, ಉಪಾಧ್ಯಕ್ಷೆ ವಿನುತಾ ಹೆಗಡೆ, ಖಜಾಂಚಿ ಮಹಾದೇವ ನಾಯ್ಕ, ಸದಸ್ಯರಾದ ರಾಜು ಕಾನಸೂರು, ರಾಘವೇಂದ್ರ ಬೆಟ್ಟಕೊಪ್ಪ, ಪ್ರದೀಪ ಶೆಟ್ಟಿ, ರಾಜೇಂದ್ರ ಶಿಂಗನಮನೆ, ಜೆ.ಆರ್.ಸಂತೋಷಕುಮಾರ, ಮಂಜುನಾಥ ಸಾಯಿಮನೆ, ನಾಗರಾಜ ಶೆಟ್ಟಿ, ಮಂಜುನಾಥ ಈರಗೊಪ್ಪ, ಬಿ.ವಿ.ಹುಲಿಗೇಶ, ಗಣೇಶ ಆಚಾರ್ಯ ಇದ್ದರು.‌

Share This
300x250 AD
300x250 AD
300x250 AD
Back to top