ಹೊನ್ನಾವರ: ಕೊಂಕಣಿಖಾರ್ವಿ ಗುರುದರ್ಶನ ಸಮಿತಿ ನೇತೃತ್ವದಲ್ಲಿ 23 ನೇ ವರ್ಷದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮ ಶೃಂಗೇರಿಯಲ್ಲಿ ನಡೆಯಿತು . ನೆರೆದ ಸಮಸ್ತ ಕೊಂಕಣಿಖಾರ್ವಿ ಸಮಾಜ ಭಾಂದವರ ಪಾದುಪೂಜೆ ಸ್ವೀಕಾರ ಮಾಡಿದ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿಯವರು ಗುರುವಿನ ಅನುಗ್ರಹದಿಂದ ಪ್ರತಿಯೊಂದು ಸಮಾಜ ಕೂಡಾ ಅಭಿವೃದ್ಧಿ ಹೊಂದುತ್ತದೆ ಎಂಬುದಕ್ಕೆ ಕೊಂಕಣಿಖಾರ್ವಿ ಸಮಾಜವೇ ಉದಾಹರಣೆಗೆ ಯಾಗಿದೆ. ಹಿರಿಯ ಗುರುಗಳ ಕಾಲದಿಂದಲೂ ನಡೆದು ಬಂದ ಈ ಸಾಮೂಹಿಕ ಗುರುದರ್ಶನ ಪರಂಪರೆ ಹೀಗೆ ಮುಂದುವರಿಯಲಿ ಎಂದು ಆರ್ಶೀದಿಸಿದರು. ಉತ್ತರ ಕನ್ನಡ ಜಿಲ್ಲೆಯ ಶೃಂಗೇರಿ ಮಠದ ಧರ್ಮಾಧಿಕಾರಿ ವೆ.ಮೂ. ಲೋಕೇಶ್ ಅಡಿಗ್, ಗುರುದರ್ಶನಸಮಿತಿ ಸಮಿತಿಯ ಅಧ್ಯಕ್ಷ ವಸಂತ ಖಾರ್ವಿ ಭಟ್ಕಳರವರು ಈ ಸಂದರ್ಭದಲ್ಲಿ ಮಾತನಾಡಿದರು.
ಉತ್ತರ ಕನ್ನಡ, ದಕ್ಷಿಣ ಕನ್ನಡ , ಶಿವಮೊಗ್ಗ ಹಾಗೂ ಗೋವಾ ಕೊಂಕಣಿ ಖಾರ್ವಿ ಸಮಾಜದವರು ಪಾಲ್ಗೊಂಡು ಜಗದ್ಗುರುಗಳ ಚಾತುರ್ಮಾಶ್ಯದ ಗುರುದರ್ಶನ ಪಡೆದರು. ಗುರುದರ್ಶನ ಸಮಿತಿ ಹಾಗೂ ಅಖಿಲ ಭಾರತ ಕೊಂಕಣಿಖಾರ್ವಿ ಮಹಾಜನ ಸಭಾದಅಧ್ಯಕ್ಷರು ಪಧಾಧಿಕಾರಿಗಳು ಹಾಗೂ ಗುರುದರ್ಶನಸಮಿತಿ ಪಧಾದಿಕಾರಿಗಳು ಸಮಾಜದ ಮುಖಂಡರು ಉಪಸ್ಥಿತಿರಿದ್ದರು.