• Slide
  Slide
  Slide
  previous arrow
  next arrow
 • ಜು.15ರಂದು ‘ಯಕ್ಷಸಿರಿಯ ಅಕ್ಷರಗುರು’ ಕಾರ್ಯಕ್ರಮ

  300x250 AD

  ಗೋಕರ್ಣ : ಅಕ್ಷರ ಫೌಂಡೇಶನ್ ಬೆಂಗಳೂರು, ಸವಿಮನ ಪ್ರಕಾಶನ ಬರ್ಗಿ ಇವರ ಆಶ್ರಯದಲ್ಲಿ ಇವರ ನೇತೃತ್ವದಲ್ಲಿ ನಿವೃತ್ತ ಶಿಕ್ಷಕ ಬೇರಣ್ಣ ನಾಯಕ ಇವರ ಕುರಿತಾದ ಅಭಿನಂದನಾ ಗ್ರಂಥ ‘ಯಕ್ಷಸಿರಿಯ ಅಕ್ಷರಗುರು’ ಕಾರ್ಯಕ್ರಮ ಜು.15 ರಂದು ಸಂಜೆ 4 ಗಂಟೆಗೆ ಅರ್ಥಗಮ್ಯ ರೆಸಾರ್ಟ್ನಲ್ಲಿ ನಡೆಯಲಿದೆ. ಈ ಕುರಿತು ಗೋಕರ್ಣದ ಇಂಟರ್‌ನ್ಯಾಶನಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಡೆದ ಅಕ್ಷರ ಫೌಂಡೇಶನ್ ಕಾರ್ಯದರ್ಶಿ ಚಂದ್ರಶೇಖರ ನಾಯಕ ತಿಳಿಸಿದ್ದಾರೆ.

  ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ.ಜಿ.ಎಲ್. ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಯಕ್ಷಗಾನ ಹಾಗೂ ಉದ್ಘಾಟಕರಾಗಿ ನಿರ್ದೇಶಕ ಡಾ. ಬೇಗಾರ ಶಿವಕುಮಾರ ಆಗಮಿಸಲಿದ್ದಾರೆ. ಸಾಹಿತಿ ಗೌತಮ ಗಾಂವಕ ಗ್ರಂಥ ವಿಮರ್ಶಿಸಲಿದ್ದು, ಖ್ಯಾತ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಆಗಮಿಸಲಿದ್ದು, ಪತ್ರಕರ್ತ ಗಂಗಾಧರ ಹಿರೇಗುತ್ತಿ, ಪ್ರಕಾಶಕ ಮಂಜುನಾಥ ನಾಯಕ ಅಕ್ಷರ ಫೌಂಡೇಶನ್ ಅಧ್ಯಕ್ಷ ಕೆ.ಎಚ್. ನಾಯಕ ಇವರನ್ನು ಸನ್ಮಾನಿಸಲಿದ್ದಾರೆ.

  300x250 AD

  ನಿವೃತ್ತ ಶಿಕ್ಷಕ ವೆಂಟು ಮಾಸ್ತರ ಶೀಳ್ಯ ಸಂಪಾದಕತ್ವದಲ್ಲಿ ಇದು ಅನಾವರಣಗೊಳ್ಳಲಿದೆ. ಸುದ್ದಿಗೋಷ್ಠಿಯಲ್ಲಿ ಅಕ್ಷರ ಫೌಂಡೇಶನ್ ವ್ಯವಸ್ಥಾಪಕ ಟ್ರಸ್ಟಿ ಮಂಜುನಾಥ ನಾಯಕ, ಗೌರವಾಧ್ಯಕ್ಷ ಜಿ.ಎಸ್. ನಾಯಕ, ಉದ್ಯಮಿ ಮಂಜುನಾಥ ನಾಯಕ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top