• Slide
    Slide
    Slide
    previous arrow
    next arrow
  • ನಶಿಸುತ್ತಿರುವ ಅಪರೂಪದ ಸಸ್ಯತಳಿಗಳ ರಕ್ಷಣೆಯ ಜವಾಬ್ದಾರಿ ಯುವಪೀಳಿಗೆಯ ಮೇಲಿದೆ: ಕುಸುಮಾ ಭಟ್

    300x250 AD

    ಶಿರಸಿ : ಸಾಂಪ್ರದಾಯಿಕ ತರಕಾರಿ ಬೀಜ ಹಾಗೂ ನಶಿಸಿ ಹೋಗುತ್ತಿರುವ ಸಸ್ಯಗಳನ್ನು ಸಂಗ್ರಹಿಸುವ ಕೆಲಸವನ್ನು ಯುವ ಪೀಳಿಗೆ ಮಾಡಬೇಕಿದೆ ಎಂದು ವನಸ್ತ್ರೀ ಸಂಸ್ಥೆಯ ಅಧ್ಯಕ್ಷೆ ಕುಸುಮಾ ಭಟ್ಟ ಹೇಳಿದರು.

    ಇಲ್ಲಿನ ಎಪಿಎಂಸಿ ಯಾರ್ಡಿನ ಉತ್ತರ ಕನ್ನಡ ಸಾವಯವ ಒಕ್ಕೂಟದ ಕಾರ್ಯಾಲಯದಲ್ಲಿ ಆಯೋಜಿಸಲಾದ ಸಾಂಪ್ರದಾಯಿಕ ತರಕಾರಿ ಬೀಜ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿದ ಅವರು ಮಾತನಾಡಿ, ಗಿಡಗಂಟಿಗಳ ಮೇಲೆ ಹಿಂದಿನಿಂದಲೂ ಅಪಾರ ಆಸಕ್ತಿ ಇದೆ. ಈ ಹಿನ್ನೆಲೆಯಲ್ಲಿ ಕೆಲ ಬೀಜಗಳನ್ನು ಸಂಗ್ರಹಿಸಿ ಪೋಷಣೆ ಮಾಡುತ್ತಾ ಬಂದಿದ್ದೇನೆ. ಸಾಂಪ್ರದಾಯಿಕ ಬೀಜ ಸಂಗ್ರಹಣೆ ಮತ್ತು ಅವುಗಳ ಪೋಷಣೆ ಎಂದೆದಿಗೂ ನಿಲ್ಲದೇ ನಿರಂತರವಾಗಿ ನಡೆಯುವಂತಾಗಲಿ ಎಂದು ಹಾರೈಸಿದರು.

    ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ರೂಪಾ ಪಾಟೀಲ್ ಮಾತನಾಡಿ, ಅಪರೂಪದ ಬೀಜಗಳ ಸಂರಕ್ಷಣೆಯಾಗಬೇಕು. ರೈತರಲ್ಲಿರುವ ಹಲವು ತಳಿ ಸಂರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಬೀಜ ಸಂಗ್ರಹಣಾ ಕೇಂದ್ರವನ್ನು ಕೇಂದ್ರ ಸರಕಾರ ದೆಹಲಿಯಲ್ಲಿ ಸ್ಥಾಪಿಸಿದೆ. ಅದರ ಶಾಖೆಯನ್ನು ಶಿವಮೊಗ್ಗದಲ್ಲಿಯೂ ಆರಂಭಿಸಲಾಗಿದೆ. ಅಲ್ಲಿ ಹಲವು ಬಗೆಯ ಅಪರೂಪದ ಬೀಜಗಳು ಲಭ್ಯವಿದೆ. ಸ್ಥಳೀಯ ರೈತರಲ್ಲಿರುವ ಅಪರೂಪದ ಕೃಷಿ ಬೀಜಗಳನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ನೋಂದಣಿ ಮಾಡಿಸಲು ಅವಕಾಶವಿದೆ. ತಳಿಗಳ ಉಳಿಸಿ ಬೆಳೆಸಲು ಹೆಚ್ಚಿನ ಶ್ರಮ ಇರುತ್ತದೆ. ತಳಿ ಸಂರಕ್ಷಣೆ, ಕಸಿ ಮಾಡುವ ವಿಷಯಕ್ಕೆ ಸಂಬಂಧಿಸಿದಲ್ಲಿ ಕೃಷಿ ವಿಜ್ಞಾನ ಕೇಂದ್ರ ಸಹಾಯ ನೀಡಲು ಸಿದ್ದವಿದೆ ಎಂದರು.

    300x250 AD

    ವನಸ್ತ್ರೀ ಸಂಸ್ಥೆಯ ಟ್ರಸ್ಟೀ ಶೈಲಜಾ ಗೋರನಮನೆ, ವನಸ್ತ್ರಿ ಎಲ್ಲರ ಪರಿಶ್ರಮದಿಂದ ಬೆಳೆದಿದೆ. ಇದು ಸಾಂಪ್ರದಾಯಿಕ ಕೃಷಿ ತಳಿಗಳನ್ನು ಸಂರಕ್ಷಿಸುತ್ತಾ ಬಂದಿದೆ. ಇದರ ಜೊತೆಗೆ ಸಾಂಪ್ರದಾಯಿಕ ತಳಿಗಳನ್ನು ವಿಸ್ತರಿಸಿಕೊಂಡು ಹೋಗುವ ಉದ್ದೇಶ ಹೊಂದಿದ್ದೇವೆ. ನಮ್ಮ ಸಂಪ್ರದಾಯ ಜಗತ್ತಿಗೆ ಪರಿಚಸುವ ಅಗತ್ಯವಿದೆ ಎಂದರು.

    ಕಾಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್, ಉತ್ತರ ಕನ್ನಡ ಜೀವ ವೈವಿದ್ಯತೆಯ ಆಗರ. ಇಂಥ ಕಾರ್ಯಕ್ರಮಗಳು ಶಿರಸಿ ತಾಲೂಕಿಗೆ ಮಾತ್ರ ಸೀಮಿತವಾಗಿತ್ತು. ಮುಂಬರುವ ದಿನಗಳಲ್ಲಿ ಇದನ್ನು ಇಡೀ ಜಿಲ್ಲೆಗೆ ವಿಸ್ತರಣೆ ಮಾಡುವ ಉದ್ದೇಶ ಹೊಂದಿದ್ದೇವೆ. ಜಿಲ್ಲೆಯಲ್ಲಿ ಕುಸುಮಕ್ಕನಂತೆ ಬೀಜ ಸಂಗ್ರಹಣೆ ಮಾಡಿದವರು ಸಾಕಷ್ಟು ಜನರು ಇದ್ದಾರೆ. ಅವರಿಗೂ ಪ್ರೋತ್ಸಾಹ ನೀಡಲು ಚಿಂತೆನೆ ನಡೆದಿದೆ ಎಂದರು.
    ನಮ್ಮ ಸಂಸ್ಥೆಯಿಂದ ಆರು ಕೋಟಿ ಸಾವಯವ ಉತ್ಪನ್ನ ಗಳನ್ನು ಮಾರಾಟ ಮಾಡಿದ್ದೆವೆ. ಈ ಉತ್ಪನ್ನಗಳು ಎಂಟು ರಾಜ್ಯಗಳಿಗೆ ಹೋಗುತ್ತಿದೆ ಎಂದ ಅವರು, ಮುಂಬರುವ ದಿನಗಳಲ್ಲಿ ಹಳೆಯ ಸಾಂಪ್ರದಾಯಿಕ ಅಡುಗೆಗಳನ್ನು ಪರಿಚಯಿಸುವ ಉದ್ಸೇಶವನ್ನೂ ಇಟ್ಟುಕೊಂಡಿದ್ದೇವೆ. ರೈತರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಬಗ್ಗೆ ಮಾಹಿತಿ ಹಾಗೂ ಆ ಬೆಳೆಗಳ ಮಾರುಕಟ್ಟೆಯ ಸೂಕ್ತ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
    ಇದೇ ಸಂದರ್ಭದಲ್ಲಿ 23 ವರ್ಷಗಳಿಂದ ಹಲವು ಅಪರೂಪದ ತಳಿಯ ಬೀಜಗಳನ್ನು ಸಂಗ್ರಹಿಸಿದ ಕುಸುಮಾ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಈ ಮೇಳದಲ್ಲಿ ಹಲವು ಬಗೆಯ ತರಕಾರಿ ಬೀಜಗಳು, ವಿವಿಧ ಗೂವಿನ ಗಿಡಗಳ ಸ್ಟಾಲ್‌ಗಳು ಗಮನಸೆಳೆದವು. ವಿಕಾಸ್ ಹೆಗಡೆ ನಿರೂಪಿಸಿದರು. ರಾಘವ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top