ಹೈದರಾಬಾದ್: ಇಂದು ಇಡೀ ಜಗತ್ತೇ ಭಾರತದತ್ತ ಬೆರಗು ಕಣ್ಣಿನಿಂದ ನೋಡುತ್ತಿದೆ. ಇದಕ್ಕೆ ಕಾರಣ ನಮ್ಮ ಹೆಮ್ಮೆಯ ಇಸ್ರೋ. ಇಸ್ರೋ ವಿಜ್ಞಾನಿಗಳು ಕೋಟ್ಯಾಂತರ ಭಾರತೀಯರ ಭರವಸೆಯನ್ನು ಹೊತ್ತ ಮಿಷನ್ ಚಂದ್ರಯಾನ-3 ನೌಕೆಯನ್ನು ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ಕೇಂದ್ರದಿಂದ ಚಂದ್ರನೂರಿಗೆ ಚಿಮ್ಮಿಸಿದ್ದಾರೆ.
ಶ್ರೀಹರಿಕೋಟಾದ ಉಡ್ಡಾಯಣ ಕೇಂದ್ರದಿಂದ ವಿಕ್ರಂ ಹೆಸರಿನ ಲ್ಯಾಂಡರ್ ಮತ್ತು ಪ್ರಜ್ಞಾನ ಹೆಸರಿನ ರೋವರ್ ಹೊತ್ತು ನಭಕ್ಕೆ ಎಲ್‌ವಿಎಂ3-ಎಂ4 ರಾಕೆಟ್ ನ ಬಗ್ಗೆ ಚಿಮ್ಮಿದೆ.ಇದು ಚಂದ್ರನ ಬಳಿಗೆ ಭಾರತದ ಮೂರನೇ ಮಿಷನ್ ಆಗಿದೆ. ಮಿಷನ್ ಯಶಸ್ವಿಯಾದರೆ, ಇದು ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಅನ್ನು ಸಾಧಿಸಿದ ರಾಷ್ಟ್ರಗಳ ಸಾಲಿಗೆ ಭಾರತವನ್ನು ಸೇರಿಸುತ್ತದೆ. ಆಗಸ್ಟ್ ಅಂತ್ಯದ ವೇಳೆಗೆ ಚಂದ್ರನನ್ನು ಸ್ಪರ್ಶಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.