ಸಿದ್ದಾಪುರ: ಸ್ಥಳೀಯ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಯಿತು. ಸಿದ್ದಾಪುರ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದ್ದ 19 ಸಿವಿಲ್ ಪ್ರಕರಣಗಳು 81 ಕ್ರಿಮಿನಲ್ ಪ್ರಕರಣಗಳು ಸೇರಿ ಒಟ್ಟು 100 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸದ್ರಿ ಪ್ರಕರಣಗಳಿಂದ ರೂ. 73,06,375-00 ಗಳು ಹಾಗೂ 25 ವ್ಯಾಜ್ಯ ಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸದ್ರಿ ಪ್ರಕರಣಗಳಿಂದ ರೂ. 7,83,433-00 ಗಳು ಸೇರಿ ಒಟ್ಟು ರೂ. 80,89,808-00 ಹಣ ವಸೂಲಾಗಿದೆ.
ಈ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರಾದ ತಿಮ್ಮಯ್ಯ ಜಿ. ನ್ಯಾಯಾಂಗ ಸಂಧಾನಕಾರರಾಗಿ ವಕೀಲೆ ಶಶಿಕಲಾ ಬಿ. ಜಿ. ನ್ಯಾಯಾಂಗೇತರ ಸಂಧಾನಕಾರರಾಗಿ ಉಪಸ್ಥಿತರಿದ್ದರು. ಮುಂದಿನ ಲೋಕ್ ಅದಾಲತನಲ್ಲಿ ಇನ್ನು ಹೆಚ್ಚಿನ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಲೋಕ್ ಅದಾಲತ್ ಮೂಲಕ ವೇದಿಕೆಯನ್ನು ಕಲ್ಪಿಸಿಕೊಡಲಾಗಿದೆ. ಆದ್ದರಿಂದ ಸಂಬಂಧಪಟ್ಟ ಕಕ್ಷಿದಾರರು ಮತ್ತು ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಲೋಕ್ ಅದಾಲತನಲ್ಲಿ ಬಗೆಹರಿಸಿಕೊಂಡು, ತಮ್ಮ ಅಮೂಲ್ಯವಾದ ಹಣ ಮತ್ತು ಸಮಯದ ಉಳಿತಾಯದೊಂದಿಗೆ ನೆಮ್ಮದಿಯ ಜೀವನ ನಡೆಸುವಂತೆ ತಿಳಿಸಿದರು.
ಲೋಕ ಅದಾಲತನ್ನು ಯಶಸ್ವಿಯಾಗಲು ಸಹಕರಿಸಿದಂತಹ ನ್ಯಾಯವಾದಿಗಳ ಸಂಘ ಸಿದ್ದಾಪುರ, ಅಭಿಯೋಜನಾ ಇಲಾಖೆ, ಪೊಲೀಸ ಇಲಾಖೆ, ಅಬಕಾರಿ ಇಲಾಖೆ, ಪಟ್ಟಣ ಪಂಚಾಯತ, ಹೇಸ್ಕಾಂ ಸಿದ್ದಾಪುರ, ಎಸ್.ಬಿ.ಐ. ಬ್ಯಾಂಕ್, ಕೆನರಾ ಬ್ಯಾಂಕ್ ಹಾಗೂ ಎಲ್ಲಾ ಕೋ ಆಪರೇಟಿವ್ ಸೊಸೈಟಿಗಳು, ನ್ಯಾಯಾಲಯದ ಸಿಬ್ಬಂದಿಗಳು, ಕಾನೂನು ಸೇವಾ ಸಮಿತಿ ಸಿಬ್ಬಂದಿಗಳು ಹಾಗೂ ಕಕ್ಷಿದಾರರು, ಸಾರ್ವಜನಿಕರಿಗೆ ಧನ್ಯವಾದಗಳನ್ನು ಕೊರುತ್ತಾ, ಸಾರ್ವಜನಿಕರು ಹಾಗೂ ಕಕ್ಷಿದಾರರು. ಇದೇ ರೀತಿ ಮುಂದಿನ ಲೋಕ್ ಅದಾಲತನ ಸದುಪಯೋಗ ಪಡಿಸಿಕೊಳ್ಳುವಂತೆ ಸಿವಿಲ್ ನ್ಯಾಯಾಧೀಶರಾದ ತಿಮ್ಮಯ್ಯ ಜಿ.ಲೋಕ್ ಅದಾಲತ್‌ನಲ್ಲಿ ತಿಳಿಸಿದರು.
9 ವರ್ಷದ ಹಿಂದಿನ ಪ್ರಕರಣಗಳೂ ಇತ್ಯರ್ಥ
ಲೋಕ್ ಅದಾಲತ್‌ನಲ್ಲಿ ವಿಶೇಷತೆ ಅಂದರೆ ಸಿದ್ದಾಪುರ ನ್ಯಾಯಾಲಯದಲ್ಲಿ 5ರಿಂದ 7 ವರ್ಷಗಳಿಂದ ಬಾಕಿ ಇರುವಂತಹ ಮೂಲದಾವಾ ಪ್ರಕರಣಗಳನ್ನು ಹಾಗೂ 9 ವರ್ಷದಿಂದ ಬಾಕಿ ಇರುವಂತಹ ಕ್ರಿಮಿನಲ್ ಪ್ರಕರಣವನ್ನು ರಾಜೀ ಮೂಲಕ ಇತ್ಯರ್ಥಪಡಿಸಿದ್ದು, ಹಿರಿಯ ನಾಗರಿಕರ 10 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು ಒಂದು ವಿಶೇಷತೆಯಾಗಿದೆ.