• Slide
    Slide
    Slide
    previous arrow
    next arrow
  • ಲಯನ್ಸ್ ಕ್ಲಬ್‌ನಿಂದ ವನಮಹೋತ್ಸವ

    300x250 AD

    ಹೊನ್ನಾವರ: ಹಳದೀಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹೊನ್ನಾವರ ಲಯನ್ಸ್ ಕ್ಲಬ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಲಯನ್ಸ್ ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ, ಈ ವರ್ಷದ ಮುಖ್ಯ ಉದ್ದೇಶ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಉಂಟು ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿದೆ. ಇಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ತುಂಬಾ ಮಹತ್ವದ ಅಂಶವಾಗಿದೆ. ಹಣ ನೀಡಿ ಶುದ್ಧ ಗಾಳಿಯನ್ನು ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್‌ನಂತ ಶ್ವಾಸಕೋಶ ಸಂಬ0ಧಿತ ಕಾಯಿಲೆಗಳು ಹೆಚ್ಚಾಗುತ್ತಿವೆ. ಮನುಷ್ಯನಿಗೆ ಬೇಕಾಗುವ ಉಸಿರು ಮಲೀನವಾಗುತ್ತಿದೆ. ನಾಡಿನ ಜೀವಜಲ ಬತ್ತುತ್ತಿದೆ. ಇದಕ್ಕೆಲ್ಲ ಕಾರಣ ಕಾಡಿನ ನಾಶ. ಪ್ರತಿಯೊಬ್ಬರು ತಮ್ಮ ಸುತ್ತಮುತ್ತ ಒಂದು ಗಿಡವನ್ನಾದರೂ ನೆಟ್ಟು ಪೋಷಿಸುವ ಕೆಲಸ ಮಾಡಬೇಕಾಗಿದೆ. ಕೇವಲ ಗಿಡ ನೆಡುವದಷ್ಟೇ ಅಲ್ಲ, ಅದರ ಪೋಷಣೆ ಜವಾಬ್ದಾರಿಯನ್ನು ಕೂಡ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.

    ಹಳದೀಪುರ ಪಂಚಾಯತ ಉಪಾಧ್ಯಕ್ಷೆ ಪುಷ್ಪಾ ನಾಯ್ಕ ಮಾತನಾಡಿ, ಇಂದಿನ ಕಾಲಘಟ್ಟಕ್ಕೆ ಇದೊಂದು ಅತ್ಯಮೂಲ್ಯವಾದ, ಅವಶ್ಯಕವಾದ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಲಯನ್ಸ್ ಕ್ಲಬ್ ಸಮಾಜದಲ್ಲಿ ಜಾಗೃತಿ ಉಂಟು ಮಾಡುವ ಕಾರ್ಯಕ್ರಮ ಮಾಡುತ್ತಿದೆ ಎಂದರು. ಪಂಚಾಯತ ಸದಸ್ಯರಾದ ಶಮಶೇರ್ ಖಾನ, ರತ್ನಾಕರ ನಾಯ್ಕ ಶಾಲಾ ಮುಖ್ಯಾಧ್ಯಾಪಕ ಎಂ.ಜಿ. ಮೊಗೇರ, ಜನಾರ್ಧನ ನಾಯ್ಕ, ಸಮಾಜ ಸೇವಕರಾದ ದಾಮೋದರ ನಾಯ್ಕ ಇವರು ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು. ಶಾಲಾ ಆವರಣದಲ್ಲಿ ತೆಂಗಿನಗಿಡ, ಸಂಪಿಗೆ, ಮುರುಗಲ, ನೆಲ್ಲಿ, ಮಾವು ಮುಂತಾದ 20 ಗಿಡಗಳನ್ನು ನೆಡಲಾಯಿತು. ಲಯನ್ಸ್ ಕಾರ್ಯದರ್ಶಿ ಮಹೇಶ ನಾಯ್ಕ ಸರ್ವರನ್ನು ಸ್ವಾಗತಿಸಿ, ಖಜಾಂಚಿ ಶಿವಾನಂದ ಭಂಡಾರಿ ವಂದಿಸಿ ಉದಯ ನಾಯ್ಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಸದಸ್ಯರಾದ ಎನ್.ಜಿ.ಭಟ್, ರಾಜೇಶ ಸಾಳೇಹಿತ್ತಲ್, ವಿನೋದ ನಾಯ್ಕ ಮಾವಿನಹೊಳೆ ಸೇರಿದಂತೆ ಸಾರ್ವಜನಿಕರು, ಶಿಕ್ಷಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top