• Slide
    Slide
    Slide
    previous arrow
    next arrow
  • ಗುಣಮಟ್ಟದ ಶಿಕ್ಷಣ ಸಂಸ್ಥೆಯ ಪ್ರಗತಿಗೆ ಬುನಾದಿ: ಡಾ.ಎಸ್.ಎಂ. ತುವಾರ್

    300x250 AD

    ದಾಂಡೇಲಿ: ಎಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆಯೊ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿಕ್ಷಣವೆ ಶಿಕ್ಷಣ ಸಂಸ್ಥೆಯ ಪ್ರಗತಿಗೆ ಭದ್ರ ಬುನಾದಿ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕ ಡಾ.ಎಸ್.ಎಂ.ತುವಾರ್ ಅವರು ಹೇಳಿದರು.

    ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದಶಕದ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು. ಇಲ್ಲಿಯ ಸರಕಾರಿ ಕಾಲೇಜು ಯಾವ ಖಾಸಗಿ ಕಾಲೇಜಿಗೂ ಕಡಿಮೆಯಿಲ್ಲ ಎಂಬ0ತಿದೆ. ಕಾಲೇಜಿನ ಮೂಲಸೌಕರ‍್ಯ, ಶೈಕ್ಷಣಿಕ ಗುಣಮಟ್ಟ ಶ್ಲಾಘನೀಯವಾಗಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದೆ ಕಾಲೇಜಿನ ನಿಜವಾದ ಸಾಧನೆ ಎಂದು ಬಣ್ಣಿಸಿ ಸಾಧನೆಗೆ ಕಾರಣರಾದ ಸರ್ವರೂ ಅಭಿನಂದನೆಗೆ ಅರ್ಹರು ಎಂದರು.

    ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ನಾಸೀರ್ ಅಹ್ಮದ್ ಜಂಗೂಬಾಯಿಯವರು ರಚಿಸಿದ 4 ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರಸಭೆಯ ಪೌರಾಯುಕ್ತ ಆರ್.ಎಸ್.ಪವಾರ್, ನಗರ ಸಭೆಯ ನಿಕಟಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ್, ನಗರ ಸಭೆಯ ನಿಕಟಪೂರ್ವ ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಯು.ಎಸ್.ಪಾಟೀಲ್ ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎಸ್.ವಿ.ಚಿಂಚಣಿ, ಪ್ರಾಧ್ಯಾಪಕರಾದ ಡಾ.ಬಿ.ಎನ್.ಅಕ್ಕಿಯವರು ಭಾಗವಹಿಸಿ ಕಾಲೇಜು ಬೆಳೆದು ಬಂದ ರೀತಿ, ಸಾಧನೆಯ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

    300x250 AD

    ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಡಿ.ಒಕ್ಕು0ದ ಅವರು ಈ ಕಾಲೇಜು ಆರ್.ವಿ. ದೇಶಪಾಂಡೆಯವರ ಕನಸಿನ ಕೂಸು. ಬಡ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯಬೇಕೆಂಬ ಅಚಲವಾದ ಹಂಬಲದಿ0ದ ಅವರೆ ಆರಂಭಿಸಿದ ಸಂಸ್ಥೆಯಿದು. ಈ ಕಾಲೇಜಿಗೆ ಬೇಕಾದ ಅವಶ್ಯ ಮೂಲಸೌರ‍್ಯಗಳನ್ನು ಒದಗಿಸಿಕೊಟ್ಟು ಕಾಲೇಜಿನ ಸರ್ವತೋಮುಖ ಅಭಿವೃದ್ಧಿಯ ರೂವಾರಿಯಾಗಿದ್ದಾರೆ ಎಂದರಲ್ಲದೇ, ಈ ವರ್ಷ ಶಾಶ್ವತ ಸಂಯೋಜನೆಗೆ ಅರ್ಜಿ ಸಲ್ಲಿಸಿದ 237 ಕಾಲೇಜುಗಳ ಪೈಕಿ ನಮ್ಮ ಕಾಲೇಜು 76.32% ಅಂಕವನ್ನು ಪಡೆದು ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿರುವುದು ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಯ ದ್ಯೋತಕ ಎಂದು, ಕಾಲೇಜಿನ ಪುರೋ ಅಭಿವೃದ್ಧಿಗೆ ಪ್ರತ್ಯಕ್ಷ, ಪರೋಕ್ಷ ಸಹಕರಿಸಿದ, ಶ್ರಮಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.
    ಕಾವ್ಯಾ ಭಟ್ ಪ್ರಾರ್ಥಿಸಿದ ಕಾರ್ಯಕ್ರಮಕ್ಕೆ ಪ್ರಾಧ್ಯಾಪಕ ಡಾ.ನಾಸೀರ್ ಅಹ್ಮದ್ ಜಂಗೂಬಾಯಿಯವರು ಸ್ವಾಗತಿಸಿದರು. ಡಾ.ವಿನಯಾ.ಜಿ.ನಾಯಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀತಾ.ಎಂ.ಜೋಗ್ ಅವರು ಸಂದೇಶ ವಾಚಿಸಿದರು. ಬಿ.ಎಸ್.ಹೂಲಿಕಟ್ಟಿಯವರು ನೂತನ ಕೃತಿ ಪರಿಚಯ ಮಾಡಿದರು. ನಿಶಾತ್ ಷರೀಪ್ ವಂದಿಸಿದರು. ಡಾ.ಮಂಜುನಾಥ್ ಜಿ. ಚಲವಾದಿ ಕಾರ್ಯಕ್ರಮವನ್ನು ನಿರೂಪಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top