Slide
Slide
Slide
previous arrow
next arrow

ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದಿಂದ ವಿಷ್ಣು ನಾಯ್ಕರಿಗೆ ಸನ್ಮಾನ

300x250 AD

ಅಂಕೋಲಾ: ಪರಿಮಳದಂಗಳದಲ್ಲಿ ನಡೆದ ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಆಡಳಿತ ಮಂಡಳಿಯ ಸಭೆಯಲ್ಲಿ ಹಿರಿಯ ಸಾಹಿತಿ ವಿಷ್ಣು ನಾಯ್ಕ ಅವರನ್ನು ಪ್ರೀತ್ಯಾದರಪೂರ್ವಕ ಸನ್ಮಾನಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ವಿಷ್ಣು ಅವರ ಬಹು ಮುಖ ಸೇವೆಯನ್ನು ನೆನೆಸಿ ಮೆಚ್ಚುಗೆಯ ಮಾತುಗಳನ್ನಾಡಿದರು. ಸಾಹಿತ್ಯ, ಸಂಸ್ಕೃತಿಯ ವಕ್ತಾರರಾಗಿರುವ ವಿಷ್ಣು ನಾಯ್ಕ ಸಮಾಜವಾದಿ ಚಿಂತನೆಗಳನ್ನುತಮ್ಮ ಕಾವ್ಯದ ಮೂಲಕ ಅಭಿವ್ಯಕ್ತಗೊಳಿಸಿದ ಅದ್ವಿತೀಯ ವ್ಯಕ್ತಿ ಎಂದು ಪ್ರತಿಷ್ಠಾನದ ಅಧ್ಯಕ್ಷ ಮೋಹನ ಹಬ್ಬು ನುಡಿದರು.

ಜೆ.ಪ್ರೇಮಾನಂದ, ಜಗದೀಶ ನಾಯಕ ಹೊಸ್ಕೇರಿ, ಗೋಪಾಲಕೃಷ್ಣ ನಾಯಕ, ಎಂ.ಎ0.ಕರ್ಕಿಕರ, ಫಾಲ್ಗುಣ ಗೌಡ, ಡಾ. ರಾಮಕೃಷ್ಣ ಗುಂದಿ. ಮಹಾಂತೇಶ ರೇವಡಿ, ರಾಮಾ ನಾಯ್ಕ ಮೊದಲಾದವರು ಈ ಸಂದರ್ಭದಲ್ಲಿ ಶ್ರೀಯುತರ ಕನ್ನಡ ಮತ್ತು ಸಾಹಿತ್ಯ ಸೇವೆ, ವಿಸ್ತೃತ ಸಾಹಿತ್ಯರಚನೆ, ಸಂಘಟನೆ, ಪ್ರಕಾಶನ, ಸಾಮಾಜಿಕ ಕಾರ್ಯಗಳನ್ನು ಉದ್ಧರಿಸಿ ಅವರ ಸೇವೆಯನ್ನು ಉತ್ತರ ಕನ್ನಡ ಜಿಲ್ಲೆ ಸದಾ ನೆನೆಸಿಕೊಳ್ಳಬೇಕಿದೆ ಎಂದರು.

300x250 AD

ಸರ್ವರ ಸೂಚನೆಯ ಮೇರೆಗೆ ಪ್ರತಿಷ್ಠಾನ ಸ್ಥಳೀಯ ಸಮಾನ ಮನಸ್ಕ ಸಂಸ್ಥೆಗಳ ಸಹಕಾರದೊಂದಿಗೆ ವಿಷ್ಣು ನಾಯ್ಕ ಅವರು 80 ವಸಂತಗಳನ್ನು ಪೂರೈಸುವ ಸಂದರ್ಭದಲ್ಲಿ ಅವರ ಸಮಗ್ರ ಸಾಹಿತ್ಯದ ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಬೇಕು ಎಂಬ ಪ್ರಸ್ತಾಪವನ್ನು ಸಭೆ ಸರ್ವಾನುಮತದಿಂದ ಸ್ವೀಕರಿಸಿತು. ಜಗದೀಶ ನಾಯ್ಕ ಅವರ ವಂದನಾರ್ಪಣೆಯೊoದಿಗೆ ಸಭೆ ಮುಕ್ತಾಯಗೊಂಡಿತು.

Share This
300x250 AD
300x250 AD
300x250 AD
Back to top