Slide
Slide
Slide
previous arrow
next arrow

ಮುಸ್ಲಿಂ ಯುವಕರಿಂದ ಇಬ್ಬರು ಅಪ್ರಾಪ್ತ ಹಿಂದೂ ಹುಡುಗಿಯರ ಅಪಹರಣ, ಸಾಮೂಹಿಕ ಅತ್ಯಾಚಾರ

300x250 AD

ಅಸ್ಸಾಂನ ಹೈಲಕಂಡಿ ಜಿಲ್ಲೆಯಲ್ಲಿ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರದ ಕ್ರೂರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಐವರು ಮುಸ್ಲಿಂ ಯುವಕರು ಶಾಲೆಯ ಮುಂದೆ ಇಬ್ಬರು ಅಪ್ರಾಪ್ತ ಹಿಂದೂ ಬಾಲಕಿಯರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಓರ್ವ ಬಾಲಕಿ ಸಾವನ್ನಪ್ಪಿದ್ದು, ಮತ್ತೊಬ್ಬ ಬಾಲಕಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಹಿತಿ ಪ್ರಕಾರ, ರೂಪಾಲಿ (ಹೆಸರು ಬದಲಾಯಿಸಲಾಗಿದೆ, 14) ಮತ್ತು ಸುಸ್ಮಿತಾ (ಹೆಸರು ಬದಲಾಯಿಸಲಾಗಿದೆ, 16) ಮೋಹನ್‌ಪುರ ಅಭಯಚರಣ್ ಎಂಇ ಶಾಲೆಯ ವಿದ್ಯಾರ್ಥಿಗಳು. ಜುಲೈ 4 ರಂದು, ಮಂಗಳವಾರ ಅವರು ಶಾಲೆಯಿಂದ ಹಿಂತಿರುಗುತ್ತಿದ್ದಾಗ, ಜಬೀರ್ ಮತ್ತು ಜುಬೈರ್ ಮತ್ತು ಇತರರು ಅವರನ್ನು ರೋಸ್ಕಂಡಿ ಟೀ ಗಾರ್ಡನ್‌ಗೆ ಎಳೆದೊಯ್ದರು. ಅವರ ಮೇಲೆ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಮಾಡಿ ಅಲ್ಲಿಂದ ಹೊರಟು ಹೋದರು. ಸ್ವಲ್ಪ ಸಮಯದ ನಂತರ ಸ್ಥಳೀಯರು ಬಾಲಕಿಯರು ಮಲಗಿರುವುದನ್ನು ನೋಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಕರ್ತವ್ಯ ನಿರತ ವೈದ್ಯರು ಅವರನ್ನು ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬುಧವಾರ ರಾತ್ರಿ ರೂಪಾಲಿ ಮೃತಪಟ್ಟಿದ್ದಾರೆ.

https://platform.twitter.com/widgets.js

300x250 AD

ದೂರಿನ ಆಧಾರದ ಮೇಲೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದು, ಜಬೀರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ. ಹೈಲಕಂಡಿ ಪೊಲೀಸರು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಜುಬೈರ್ ಅಹಮದ್ ತಾಲೂಕದಾರ್ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಇನ್ನು, ಆತ ತಲೆಮರೆಸಿಕೊಂಡಿದ್ದು, ಪೊಲೀಸರು ನೆಟಿಜನ್‌ಗಳಿಂದ ಮಾಹಿತಿ ಕೇಳಿದ್ದಾರೆ. ಒಟ್ಟು 5 ರಿಂದ 6 ಯುವಕರು ಇದ್ದರು ಎಂದು ಬಾಲಕಿಯರ ಕುಟುಂಬಸ್ಥರು ಆರೋಪಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೃಪೆ: http://hindupost.in

Share This
300x250 AD
300x250 AD
300x250 AD
Back to top